ಕನ್ನಡಪ್ರಭ ವಾರ್ತೆ ಶೃಂಗೇರಿ
ಪಟ್ಟಣದ ಜೆಸಿಬಿಎಂ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಾರ್ತಾ ಇಲಾಖೆ,ವಕೀಲರ ಸಂಘದ ಸಹಯೋಗದಲ್ಲಿ ರಾಷ್ಟ್ರೀಯ ಯುವ ದಿನಾಚಾರಣೆಗೆ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ವಾಮಿ ವಿವೇಕಾನಂದರು ಕೇವಲ ಭಾರತಕ್ಕಅಲ್ಲ ಇಡೀ ಜಗತ್ತಿಗೆ ಆಧ್ಯಾತ್ಮಿಕ ಗುರು. ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ಘೋಷಣೆಯನ್ನು ಮೊಳಗಿಸಿ ಯುವಜನತೆಯನ್ನು ಬಡಿದೆಬ್ಬಿಸಿ. ಜಾಗೃತಿಗೊಳಿಸಿ ಯುವಜನತೆಯಲ್ಲಿ ದೇಶಭಕ್ತಿ, ಹೋರಾಟದ ಕೆಚ್ಚನ್ನು ಮೂಡಿಸಿದರು. ಅವರ ತತ್ವಗಳು, ಬದುಕಿನ ದಾರಿ, ಯುವಜನತೆಗೆ ನೀಡಿದ ಸ್ಪೂರ್ತಿಯ ಕರೆ ಕೇವಲ ಭಾರತದಲ್ಲಿ ಅಲ್ಲ ಇಡೀ ವಿಶ್ವಕ್ಕೆ ವ್ಯಾಪಿಸಿ ಯುವಜನತೆಯನ್ನು ಜಾಗೃತಿಗೊಳಿಸಿತು.ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತಿದೆ. ಯುವ ಜನತೆಯನ್ನು ಸ್ವಾಮಿ ವಿವೇಕಾನಂದರ ಆದರ್ಶಗಳಿಂದ ಪ್ರೇರಪಿಸುವುದು. ಯುವಜನತೆ ಶಕ್ತಿ ಸಾಮರ್ಥ್ಯವನ್ನು ರಾಷ್ಟ್ರನಿರ್ಮಾಣದಲ್ಲಿ ತೊಡಗಿಸಿ ಕೊಳ್ಳುವುದು. ಯುವಜನತೆಯಲ್ಲಿ ಜವಾಬ್ದಾರಿ ಮತ್ತು ದೇಶಭಕ್ತಿ ಭಾವನೆ ಉತ್ತೇಜಿಸುವುದು ಈ ಕಾರ್ಯಕ್ರಮದ ಉದ್ದೇಶ ವಾಗಿದೆ ಎಂದರು.
ಯುವಜನತೆಯಲ್ಲಿ ದೇಶಭಕ್ತಿ, ಶಿಕ್ಷಣದ ಮಹತ್ವ, ಸಮಾಜ ಸೇವಾ ಮನೋಭಾವನೆ ಜಾಗೃತಿಗೊಳಿಸಬೇಕು. ರಾಷ್ಟ್ರದ ಅಭಿವೃದ್ಧಿಯಲ್ಲಿ ಯುವಜನತೆಯನ್ನು ಸಕ್ರೀಯವಾಗಿ ತೊಡಗಿಸಿಕೊಳ್ಳುವಂತೆ ಪ್ರೇರಪಿಸುವ ಕೆಲಸ ನಡೆಯಬೇಕು. ಯುವಜನತೆಯಲ್ಲಿ ವಿವೇಕಾನಂದರ ಚಿಂತನೆ, ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳುವಂತೆ ಉತ್ತೇಜಿಸಬೇಕು ಎಂದರು.ವಕೀಲ ಎಚ್.ಆರ್.ಉಮೇಶ್ ಹೆಗ್ಡೆ ನಾಗರಿಕ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ಉಪನ್ಯಾಸ ನೀಡಿ ಮಾತನಾಡಿ ನಮ್ಮ ಸಂವಿಧಾನದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಮೂಲಭೂತ ಹಕ್ಕುಗಳನ್ನು ನೀಡಲಾಗಿದೆ. ನಮ್ಮ ಹಕ್ಕುಗಳು ಇನ್ನೊಬ್ಬರಿಗೆ ತೊಂದರೆಯಾಗದಂತೆ ಪಾಲನೆಯಾಗಬೇಕು. ಹಕ್ಕುಗಳನ್ನು ಅನುಭವಿಸುವ ಜೊತೆಗೆ ಮೂಲಭೂತ ಕರ್ತವ್ಯಗಳನ್ನು ಪಾಲಿಸಬೇಕು. ಕಾಯ್ದೆಗಳ ಸದ್ಭಳಕೆಯಾಗಬೇಕು. ದುರ್ಬಳಕೆಯಾಗಬಾರದು ಎಂದರು.
ಕಾಲೇಜಿನ ಪ್ರಾಂಶುಪಾಲ ಎಂ ಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಸರ್ಕಾರಿ ಅಭಿಯೋಜಕಿ ಹರಿಣಾಕ್ಷಿ, ಉಪನ್ಯಾಸಕರಾದ ಸಂತೋಷ್, ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.17 ಶ್ರೀ ಚಿತ್ರ 1-
ಶೃಂಗೇರಿ ಪಟ್ಟಣದ ಜೆಸಿಬಿಎಂ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನಾಚಾರಣೆ ಅಂಗವಾಗಿ ಆಯೋಜಿಸಿದ್ದ ಉಚಿತ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ನ್ಯಾ.ಆರ್.ಎಸ್.ಜೀತು ಉದ್ಘಾಟಿಸಿದರು. ಎಂ.ಸ್ವಾಮಿ,ಹರಿಣಾಕ್ಷಿ ,ಸಂತೋಷ್ ಮತ್ತಿತರರು ಇದ್ದರು.