ಕನ್ನಡಪ್ರಭ ವಾರ್ತೆ ಚನ್ನಗಿರಿ
ಗಾಯಾಳು ಕಾರ್ಮಿಕರಿಗೆ ಚನ್ನಗಿರಿ ಆಸ್ಪತ್ರೆಯಲ್ಲಿ ಪ್ರಾರ್ಥಿಕ ಚಿಕಿತ್ಸೆ ಕೊಡಿಸಲಾಗಿದೆ. ಒಬ್ಬ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ಸಾಗಿಸಲಾಗಿದೆ.
ಸಂಘಕ್ಕೆ ಸಂಬಂಧಪಟ್ಟ ಕಟ್ಟಡ ನಿರ್ಮಾಣದ ಕಾಮಗಾರಿ ಕೆಲಸದ ಅಂದಾಜು ವೆಚ್ಚ, ಗುತ್ತಿಗೆದಾರರ ಮಾಹಿತಿಯನ್ನು ಪಡೆಯಲು ಸೊಸೈಟಿ ಅಧ್ಯಕ್ಷ ಮತ್ತು ಕಾರ್ಯದರ್ಶಿ ಅವರಿಗೆ ದೂರವಾಣಿ ಕರೆ ಮಾಡಿದರೂ ಸರಿಯಾದ ಮಾಹಿತಿಯನ್ನು ನೀಡಲು ಸ್ಪಂದಿಸಲಿಲ್ಲ.ಕಟ್ಟಡ ನಿರ್ಮಾಣದ ಕಾಮಗಾರಿ ಬಗ್ಗೆ ಇಲ್ಲಿನ ಪುರಸಭೆ ಅಧಿಕಾರಿಗಳನ್ನು ವಿಚಾರಿಸಿದಾಗ, ಈ ಕಟ್ಟಡ ನಿರ್ಮಾಣಕ್ಕೆ 2023ರಲ್ಲಿ ಪರವಾನಗಿ ನೀಡಬೇಕು ಎಂದು ಸಂಘದಿಂದ ಪುರಸಭೆಗೆ ಅರ್ಜಿ ಸಲ್ಲಿಸಿದ್ದರು. ಸಮರ್ಪಕ ದಾಖಲಾತಿ ಇಲ್ಲದ ಕಾರಣ ಪರವಾನಗಿ ನೀಡಿರಲಿಲ್ಲ ಎಂದು ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ ತಿಳಿಸಿದ್ದಾರೆ.