ಶಿವಮೊಗ್ಗ: ಮನುಕುಲದ ಸೇವೆಯಲ್ಲಿ ಮುಂಚೂಣಿಯಲ್ಲಿ ಸಂಸ್ಥೆ ರೋಟರಿ. ವಿಶ್ವಾದ್ಯಂತ 206 ದೇಶಗಳಲ್ಲಿ ಜಾತಿ, ಮತ, ಧರ್ಮ ಬೇಧವಿಲ್ಲದೇ ಸೇವಾ ಕಾರ್ಯಗಳನ್ನು ನಡೆಸುತ್ತಿದೆ ಎಂದು ನಿಯೋಜಿತ ಜಿಲ್ಲಾ ಗವರ್ನರ್ ರವಿಶಂಕರ್ ದಾಕೋಜು ಹೇಳಿದರು.
ಬಡತನದಲ್ಲಿರುವ ಸಮುದಾಯದ ಮಕ್ಕಳ ವಿದ್ಯಾಭ್ಯಾಸ ಮತ್ತು ಪರಿಸರ ಸಂರಕ್ಷಣೆ ಸೇರಿದಂತೆ ಸಮಾಜಮುಖಿ ಕಾರ್ಯಗಳಿಗೆ ದೇಣಿಗೆ ಬಳಸಲಾಗುತ್ತಿದೆ. ಸಿದ್ದಾರ್ಥ ಸ್ಮರಣಾರ್ಥ ದತ್ತಿನಿಧಿ ಸ್ಥಾಪಿಸಿ 45 ಲಕ್ಷ ರು. ಹೊಂದಿಸಲಾಗಿದೆ ಎಂದು ತಿಳಿಸಿದರು.
ನಿಯೋಜಿತ ಜಿಲ್ಲಾ ಗವರ್ನರ್ ರವಿಶಂಕರ್ ದಾಕೋಜು ಅವರು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, 100 ಕೋಟಿ ರು. ದೇಣಿಗೆ ನೀಡಿದ್ದು, ಪ್ರಸ್ತುತ ವಾಸದ ಮನೆ ಹೊಂದಿದ್ದೇನೆ. ಈವರೆಗೂ ಗಳಿಸಿದ ಹಣವನ್ನು ಉತ್ತಮ ಉದ್ದೇಶಕ್ಕೆ ನೀಡಿದ್ದೇನೆ ಎಂದು ತಿಳಿಸಿದರು.ರೋಟರಿ 3182ರ ಜಿಲ್ಲೆಯಿಂದ ಸಮುದಾಯ ಸೇವೆಗೆ 5 ಕೋಟಿ ರು. ನೀಡುವ ಸಂಕಲ್ಪ ಮಾಡಿದ್ದು, ಈವರೆಗೂ ಸಂಗ್ರಹವಾದ 1 ಕೋಟಿ ರು.ವರೆಗೆ ದೇಣಿಗೆ ನೀಡಿದ ರೋಟರಿ ಸದಸ್ಯರನ್ನು ಸನ್ಮಾನಿಸಲಾಯಿತು. ರೋಟರಿ ಜಿಲ್ಲೆ 3182ರ ವ್ಯಾಪ್ತಿಯ ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು ಮತ್ತು ಹಾಸನ ಭಾಗದ 700ಕ್ಕೂ ಹೆಚ್ಚು ಸದಸ್ಯರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಗವರ್ನರ್ ಕೆ.ಪಾಲಾಕ್ಷ, ಸಮಾವೇಶದ ಅಧ್ಯಕ್ಷ ಚಂದ್ರಹಾಸ್ ಪಿ ರಾಯ್ಕರ್, ಮಾಜಿ ಜಿಲ್ಲಾ ಗವರ್ನರ್ ಸಾಂಬಶಿವ ರಾವ್ ಪತಿಬಂದ್ಲ, ಡಾ. ನಾರಾಯಣ್, ಡಾ.ವಿನಯಕುಮಾರ್, ರಾಜಾರಾಮ್ ಭಟ್ ಬಿ., ಡಿ.ಎಸ್.ರವಿ, ಬಿ.ಎನ್.ರಮೇಶ್, ನಿಯೋಜಿತ ಜಿಲ್ಲಾ ಗವರ್ನರ್ ಬಿ.ಎಂ.ಭಟ್, ನಿಯೋಜಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್, ವಲಯ 11ರ ಸಹಾಯಕ ಗವರ್ನರ್ ಲಕ್ಷ್ಮಣಗೌಡ ಬಿ., ವಲಯ 10ರ ಸಹಾಯಕ ಗವರ್ನರ್ ಕೆ.ಪಿ.ಶೆಟ್ಟಿ, ಪ್ರಮೋಷನ್ ಚೇರ್ಮನ್ ಜಿ.ವಿಜಯಕುಮಾರ್, ರೇಖಾ ಪಾಲಾಕ್ಷ, ಪದ್ಮಿನಿ ವಸಂತ ಇದ್ದರು.