ಕನ್ನಡಪ್ರಭ ವಾರ್ತೆ ಜಮಖಂಡಿ
65 ವರ್ಷ ಅನ್ನೋದು ಹಾಸ್ಯವಲ್ಲ. ಜಮಖಂಡಿಯ ರೋಟರಿ ಸಂಸ್ಥೆ ಬಹಳ ವರ್ಷಗಳ ಕಾಲ ಸಮಾಜ ಸೇವೆ ಮಾಡುತ್ತಾ ಬಂದಿದೆ. ಬಹಳ ಅನುಭವಿ ಸದಸ್ಯರ ಒಳಗೊಂಡಿದೆ. ಅನೇಕ ಜನರು ಸಂಸ್ಥೆಯಲ್ಲಿ ಹೊಸದಾಗಿ ಸೇರ್ಪಡೆಯಾಗಿ ಕೊಡುಗೆ ನೀಡಬೇಕು ಎಂದು ತಿಳಿಸಿದರು.
ರೊಟರಿ ಸಂಸ್ಥೆಯ ಸದಸ್ಯರು ಹಾಗೂ ಅಸಿಸ್ಟೆಂಟ್ ಗವರ್ನರ್ ಆರ್.ಪಿ .ನ್ಯಾಮಗೌಡ ಮಾತನಾಡಿ, 1905ರಲ್ಲಿ ಪಾಲ್ ಹ್ಯಾರಿಸ್ ಅವರು ಹವ್ಯಾಸಕ್ಕಾಗಿ, ಇನ್ನೊಬ್ಬರ ವೃತ್ತಿಯನ್ನು ತಿಳಿದುಕೊಳ್ಳುವ ಸಲುವಾಗಿ ನಾಲ್ಕು ಜನರು ಸೇರಿಕೊಂಡು ಕಟ್ಟಿದರು. 1920 ರಲ್ಲಿ ಭಾರತದ ಕಲ್ಕತ್ತಾದಲ್ಲಿ ಪ್ರಾರಂಭಗೊಂಡು ತದನಂತರ ಮುಂಬೈ ಹೀಗೆ 224 ದೇಶಗಳಲ್ಲಿ 34 ಜೂನ್ 535 ಜಿಲ್ಲೆ 3,000 ಕ್ಲಬ್, 14 ಲಕ್ಷ ಸದಸ್ಯರನ್ನು ಒಳಗೊಂಡಿದೆ. ಜಮಖಂಡಿಯಲ್ಲಿ ರೋಟರಿಸಂಸ್ಥೆ 1960 ರಲ್ಲಿ ಪ್ರಾರಂಭವಾಯಿತು. ಪ್ರತಿ ವರ್ಷ ಹನ್ನೆರಡು ಕಾರ್ಯಕ್ರಮಗಳು ಮಾಡುತ್ತಾ ಬಂದಿದೆ. ಪೋಲಿಯೋ ನಿರ್ಮೂಲನೆ, ಶಿಕ್ಷಣ ಆರೋಗ್ಯ,ಸಾಮಾಜಿಕ ಸೇವೆ, ಕೌಶಲ್ಯಯುಳ್ಳವರನ್ನು ಗುರುತಿಸಿ ಸನ್ಮಾನಿಸುವುದು ಹೀಗೆ ಅನೇಕ ಕಾರ್ಯಕ್ರಮ ಮಾಡುತ್ತಾ ಬಂದಿದೆ ಎಂದು ತಿಳಿಸಿದರು.ಓಲೇಮಠದ ಆನಂದ ದೇವರು ಆಶೀರ್ವಚನ ನೀಡಿ, ಒಗ್ಗಟ್ಟಿನಿಂದ ಕೆಲಸ ಸಾಧ್ಯ. ಸಂಪಾದನೆ, ಆಸ್ತಿ ಮಾಡುವುದು ಶಾಶ್ವತವಲ್ಲ. ನಾವು ಮಾಡುವ ಸಮಾಜ ಸೇವೆಯೇ ಶಾಶ್ವತ. ಮನುಷ್ಯ ಇರುವುದರೊಳಗೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು. ಅಲೆಕ್ಸಾಂಡರ್ ಸಾವಿನ ಸಂದರ್ಭದಲ್ಲಿ ನಡೆದ ಕಥೆಯನ್ನು ನೆನಪಿಸಿ, ಪ್ರತಿಯೊಬ್ಬರು ಯಾವ ಕ್ಷಣದಲ್ಲಿ ಜೀವ ಹೋಗುತ್ತದೆ ಗೊತ್ತಿಲ್ಲ. ಆದಕಾರಣ ದಾನ, ಧರ್ಮ, ಸಹಾಯ ಮಾಡಬೇಕು. ಈಗಿನ ಯುವಕರು ಸೋಮಾರಿಗಳಾಗಿದ್ದಾರೆ. ಜಮಖಂಡಿ ರೋಟರಿ ಸಂಸ್ಥೆಯವರು ಉದ್ಯೋನ್ಮುಖ ಸಮಾಜ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ರೋಟರಿ ಸಂಸ್ಥೆಯ ಸದಸ್ಯರು ಸ್ಥಿತಿವಂತರಿದ್ದರೂ ಬಿಡುವಿನ ಸಮಯದಲ್ಲಿ ಬಡವರಿಗೆ, ಮಕ್ಕಳಿಗೆ, ಅನಾಥರಿಗೆ ಸಹಾಯ ಮಾಡುತ್ತಿರುವುದು ಬಹಳ ಸಂತಸ ತಂದಿದೆ ಎಂದರು.
ಅಧ್ಯಕ್ಷ ಕಿರಣ ಕುಮಾರ್ ದೇಸಾಯಿ ಸ್ವಾಗತಿಸಿದರು. ಭಾವನಾ ಬೆಳಗಲಿ ಹಾಗೂ ತ್ರಿಶಾ ಬುಜರುಕ ಪ್ರಾರ್ಥಿಸಿದರು. ಮಲ್ಲಪ್ಪ ಬುಜರುಕ ವಂದಿಸಿದರು. ಪ್ರಕಾಶ ಗೌಡರ, ಶಶಿಧರ ಕಡಿಬಾಗಿಲ ನಿರೂಪಿಸಿದರು. ವಿಶ್ವ ಶಾಂತಿಗಾಗಿ ಮೌನಾಚರಣೆ, ಒಂದೇ ಮಾತರಂ ಗೀತೆ, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.ಲಯನ್ಸ್ ಸಂಸ್ಥೆ ಅಧ್ಯಕ್ಷ ಚಿನ್ಮಯ ಜಿರಲಿ, ರೋಟರಿ ರಾಮ್ ತೀರ್ಥ ಸಂಸ್ಥೆ ಅಧ್ಯಕ್ಷ ಕಿರಣ ಜಾಲಿಹಾಳ, ಇನ್ನರ್‌ವ್ಹೀಲ್ ಸಂಸ್ಥೆ ಅಧ್ಯಕ್ಷೆ ಅಲ್ಕಾ ಮಾಳಗಿ, ಶಂಕರ ಪಟ್ಟಣಶೆಟ್ಟಿ ,ಡಾ.ಆರ್.ವಿ. ಮೆಟಗುಡ್ಡ, ರಾಜು ಕೋವಳ್ಳಿ, ಪ್ರವೀಣ ಜಾಡ್ , ಡಾ.ಕೆ.ಐ. ಗುರುಮಠ, ಎಸ್.ವೈ. ಬಿರಾದಾರ, ಪ್ರಕಾಶ ಶಿಂಧೆ, ಜಿ.ಬಿ. ಕೌಜಲಗಿ, ಗೋಪಾಲಕೃಷ್ಣ ಪ್ರಭು, ಸುಭಾಷ್ ಕಾಸಿದ, ಕಡ್ಲಿಮಟ್ಟಿ ಧರ್ಮದಾಸ ನಿ,ಶಂಕರ ತೇಲಿ, ಶ್ರೀಶೈಲ ತೇಲಿ, ಆರ್ ಎಸ್ ಬಿರಾದರ, ಚನ್ನಪ್ಪ ಬಿರಾದರ ಇತರರು ಇದ್ದರು.