. ಡಾ. ದೇವದಾಸ್ ರೈ ಅವರು ರೋಟರಿ ಅಂತಾರಾಷ್ಟ್ರೀಯ ಸಂಸ್ಥೆಯ ಸಮುದಾಯ ಸೇವೆಗೆ 1,10,000 ರು.ಗಳನ್ನು ವೈಯುಕ್ತಿಕ ದೇಣಿಗೆಯಾಗಿ ನೀಡಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಸಂಸ್ಥೆಯ ಆಶ್ರಯದಲ್ಲಿ ರೋಟರಿ ವಿಶ್ವ ದಿನಾಚರಣೆ ನಗರದಲ್ಲಿ ನಡೆಯಿತು. ಎಂಟು ಮಂದಿ ಸದಸ್ಯರನ್ನು ಅವರು ತಮ್ಮ ಕ್ಷೇತ್ರದಲ್ಲಿ ಸಾಧಿಸಿದ ಸಾಧನೆಯನ್ನು ಪರಿಗಣಿಸಿ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಲಾಯಿತು.ಸಂಸ್ಥೆಯ ಅಧ್ಯಕ್ಷ ರಾಜೇಶ್ ಶೆಟ್ಟಿ ಸ್ವಾಗತಿಸಿ, ರೋಟರಿ ವಿಶ್ವ ದಿನಾಚರಣೆಯ ಮಹತ್ವ ಮತ್ತು ಉದ್ದೇಶವನ್ನು ವಿವರಿಸಿದರು. ಡಾ. ದೇವದಾಸ್ ರೈ ಅವರು ರೋಟರಿ ಸಂಸ್ಥೆಯ ಸ್ಥಾಪನಾ ದಿನಾಚರಣೆ ಹಾಗೂ ಸಂಸ್ಥೆಯ 119 ವರ್ಷಗಳ ಬೆಳವಣಿಗೆ ಮತ್ತು ವಿಶ್ವಕ್ಕೆ ನೀಡಿದ ಮಹತ್ತರ ಕೊಡುಗೆಯನ್ನು ಸ್ಮರಿಸಿದರು.ಈ ಸಂದರ್ಭ ನಿತಿನ್ ಶೆಟ್ಟಿ (ಲೆಕ್ಕ ಪರಿಶೋಧಕರು), ಕೆ.ಎಂ. ಹೆಗ್ಡೆ (ಜೀವ ವಿಮಾ ಸಲಹೆಗಾರರು), ನಾಗೇಂದ್ರ (ಸಂಗೀತ ಕಲೆ), ರಾಜ್‌ಗೋಪಾಲ್ ರೈ (ರಾಜಕೀಯ), ಮಂಜುನಾಥ್ ರೇವಣ್ಣಕ್ಕರ್ (ಶಿಕ್ಷಣ), ಎಸ್.ಎಸ್. ನಾಯಕ್ (ದೃಶ್ಯ ಮಾಧ್ಯಮ), ಡಾ. ಚಂದ್ರಕಾಂತ್ ಭಟ್ (ಆರ್ಥಿಕ ಸಲಹೆಗಾರ), ಡಾ. ದೇವದಾಸ್ ರೈ (ವೈದ್ಯಕೀಯ ಸೇವೆ) ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ಕಾರ್ಯದರ್ಶಿ ರವಿ ಜಲನ್ ಮಾತನಾಡಿದರು. ಡಾ. ದೇವದಾಸ್ ರೈ ಅವರು ರೋಟರಿ ಅಂತಾರಾಷ್ಟ್ರೀಯ ಸಂಸ್ಥೆಯ ಸಮುದಾಯ ಸೇವೆಗೆ 1,10,000 ರು.ಗಳನ್ನು ವೈಯುಕ್ತಿಕ ದೇಣಿಗೆಯಾಗಿ ನೀಡಿದರು.ನಗರದ ಮಿಲಾಗ್ರಿಸ್ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಾದ ಸುದೇಶ್ ಶೇಟ್ ಹಾಗೂ ಅಕ್ಷಯ್ ಶೇಟ್ ಅವರಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ನಿಯೋಜಿತ ಅಧ್ಯಕ್ಷ ಬ್ರಿಯಾನ್ ಪಿಂಟೋ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.