ಸಮಾಜ ಅಭಿವೃದ್ಧಿ ರೋಟರಿ ಸಂಸ್ಥೆಯ ಕೊಡುಗೆ ಅಪಾರ: ಡಾ. ರವಿಶಂಕರ್ ರಾವ್

KannadaprabhaNewsNetwork |  
Published : Mar 24, 2026, 02:30 AM IST
ರೋಟರಿ ಸಂಸ್ಥೆಯಿಂದ ವಾಷಿಂಗ್‌ ಮಷಿನ್‌, ಪ್ರಿಢ್ಜ್‌ ಹಸ್ತಾಂತರ. | Kannada Prabha

ಸಾರಾಂಶ

ವಿವಿಧ ದೇಶಗಳಲ್ಲಿ ರೋಟರಿ ಸಂಸ್ಥೆ ನಿಸ್ವಾರ್ಥ ಸೇವಾ ಮನೋಭಾವದೊಂದಿಗೆ ಆರೋಗ್ಯ, ಶಿಕ್ಷಣ, ಆರ್ಥಿಕ ಅಭಿವೃದ್ಧಿ, ಪರಿಸರ ಸಂರಕ್ಷಣೆ ಮತ್ತು ಮೂಲಭೂತ ಸೌಕರ್ಯ ಒದಗಿಸುವ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಎಂದು ರೋಟರಿ ವಲಯ ಸಹಾಯಕ ಗೌವರ್ನರ್‌ ಡಾ.ರವಿಶಂಕರ್‌ ರಾವ್‌ ತಿಳಿಸಿದ್ದಾರೆ.

ಮಂಗಳೂರು: ವಿವಿಧ ದೇಶಗಳಲ್ಲಿ ರೋಟರಿ ಸಂಸ್ಥೆ ನಿಸ್ವಾರ್ಥ ಸೇವಾ ಮನೋಭಾವದೊಂದಿಗೆ ಆರೋಗ್ಯ, ಶಿಕ್ಷಣ, ಆರ್ಥಿಕ ಅಭಿವೃದ್ಧಿ, ಪರಿಸರ ಸಂರಕ್ಷಣೆ ಮತ್ತು ಮೂಲಭೂತ ಸೌಕರ್ಯ ಒದಗಿಸುವ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಎಂದು ರೋಟರಿ ವಲಯ ಸಹಾಯಕ ಗೌವರ್ನರ್‌ ಡಾ.ರವಿಶಂಕರ್‌ ರಾವ್‌ ತಿಳಿಸಿದ್ದಾರೆ.

ರೋಟರಿ ಮಂಗಳೂರು ಸಿಟಿ ಸಂಸ್ಥೆ ವತಿಯಿಂದ ನಗರದ ಬಿಕರ್ನಕಟ್ಟೆ ಪ್ರದೇಶ ಲಲಿತ ಗೀತಾ ಅನಾಥಾಶ್ರಮಕ್ಕೆ ಸುಮಾರು ೫೦,೦೦೦ ಮೌಲ್ಯದ ರೆಫ್ರಿಜರೇಟರ್ ಮತ್ತು ವಾಷಿಂಗ್ ಮೆಶಿನ್ ಹಸ್ತಾಂತರಿಸಿ ಮಾತನಾಡಿದರು.

ಸಮಾಜದ ಶ್ರೇಯೋಭಿವೃದ್ಧಿಗೆ ರೋಟರಿ ಕೊಡುಗೆ ಅಪಾರ. ಸಂಸ್ಥೆಯ ಜನಪರ ಸೇವೆಯು ಜನಾರ್ದನ ಸೇವೆಗೆ ಸಮಾನವೆಂದು ತಿಳಿಸಿದರು.

ರೋಟರಿ ಸಂಸ್ಥೆಯ ಸ್ಥಾಪನಾ ಡಾ. ರಂಜನ್ ರಾವ್ ಈ ಯೋಜನೆಯು ನಮ್ಮ ಸಂಸ್ಥೆಯ ಸಮುದಾಯ ಸೇವೆಯ ಭಾಗ ಎಂದು ತಿಳಿಸಿದರು. ಸಂಸ್ಥೆಯ ಅದ್ಯಕ್ಷೆ ಸಜ್ನಾ ಭಾಸ್ಕರ್‌ ಸ್ವಾಗತಿಸಿದರು. ಸಂಸ್ಥೆಯ ವಲಯ ಪ್ರತಿನಿಧಿ ಪ್ರಶಾಂತ್ ರೈ, ಮಂಗಳ ರೈ ಮತ್ತು ಸಂಸ್ಥೆಯ ಸಲಹೆಗಾರ ಹಾಗೂ ಉದ್ಯಮಿ ಪ್ರದೀಪ್ ಮಿಸ್ಕಿತ್ಉಪಸ್ಥಿತರಿದ್ದರು. ಅನಾಥಾಶ್ರಮದ ಅದ್ಯಕ್ಷೆ ಲಲಿತ ರೋಟರಿ ಸಂಸ್ಥೆಯ ಉದಾತ್ತಕೊಡುಗೆಗೆ ಕೃತಜ್ಞತೆ ಸಲ್ಲಿಸಿ ಆಶ್ರಮದಲ್ಲಿ ೪೫ ಅನಾಥ ಪುರುಷರು ಮತ್ತು ಮಹಿಳೆಯರುವಾಸಿಸುತ್ತಿದ್ದಾರೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಶಾಲನಗರ: ರಕ್ತದಾನ ಶಿಬಿರ ಉದ್ಘಾಟನೆ
ಅಂಬಾತನಯ ಮುದ್ರಾಡಿ ಪುಸ್ತಕ ಪ್ರಶಸ್ತಿಗೆ ನಾಟಕ ವಿಮರ್ಶಾಕೃತಿಗಳಿಗೆ ಆಹ್ವಾನ