ಹೊಸಕೋಟೆ: ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ವೆಚ್ಚವಾಗುವ ಆರೋಗ್ಯ ಸೇವೆಗಳನ್ನು ಬಡ ಮಧ್ಯಮ ವರ್ಗದವರಿಗೆ ಉಚಿತವಾಗಿ ಒದಗಿಸುವ ಗುರಿಯೊಂದಿಗೆ ರೋಟರಿ ಶ್ರಮಿಸುತ್ತಿದೆ ಎಂದು ರೋಟರಿ ಕೋಲಾರ ವಲಯ ಮೇಲ್ವಿಚಾರಕ ರಾಜ್ ಕುಮಾರ್ ತಿಳಿಸಿದರು.
ಅವರು, ಆರೋಗ್ಯ ಸೇವೆ ಇಂದಿನ ದಿನಗಳಲ್ಲಿ ವ್ಯಾಪಾರೀಕರಣ ಆಗಿದೆ. ಬಡವರಿಗೆ ಚಿಕಿತ್ಸೆಗಳು ದುಬಾರಿಯಾಗಿದ್ದು ರೋಟರಿಯ ಉಚಿತ ಆರೋಗ್ಯ ಶಿಬಿರಗಳನ್ನು ಬಡವರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಗ್ಯಾಸ್ಟ್ರೊ ಎಂಟರಲಾಜಿಸ್ಟ್ ಡಾ.ಯೋಗಾನಂದರೆಡ್ಡಿ ಮಾತನಾಡಿ, ರಾಜ್ಯದಲ್ಲೇ ಮೊದಲ ಮತ್ತು ದೇಶದಲ್ಲೇ 3ನೇ ದೊಡ್ಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾದರಿಯ ಗ್ಯಾಸ್ಟ್ರೊಎಂಟರಾಲಾಜಿ ಅನ್ ವಿಲ್ಸ್ ವಾಹನದಲ್ಲಿ ಎಂಡೋಸ್ಕೋಪಿ, ಜಠರ, ಕರಳು ಪರೀಕ್ಷೆ ಎಪಟೈಟಿಸಿ ಬಿ ಮತ್ತು ಸಿ ವೈರಸ್, ಲಿವರ್ ಸ್ಕಾನ್, ಪೌಷ್ಟಿಕಾಂಶ ತಪಾಸಣೆ ಮಾಡಲಾಗಿದೆ. ಅಲ್ಸರ್, ಪ್ಯಾಟಿಲಿವರ್, ಕ್ಯಾನ್ಸರ್ ಮೊದಲಾದ ಕಾಯಿಲೆಗಳಿದ್ದ ಸಂದರ್ಭದಲ್ಲೂ ಗ್ಯಾಸ್ಟ್ರಿಕ್ ಇರುತ್ತೆ ಎಂಬುದು ಜನರಿಗೆ ಗೊತ್ತಾಗುತ್ತಿಲ್ಲ. ಇವುಗಳನ್ನು ಆರಂಭಿಕ ಹಂತದಲ್ಲೇ ಚಿಕಿತ್ಸೆಯಿಂದ ಗುಣಪಡಿಸಬಹುದು ಎಂದರು.ಹೊಸಕೋಟೆ ರೋಟರಿ ಅಧ್ಯಕ್ಷ ಸುಬ್ರಮಣಿ, ಕಾರ್ಯದರ್ಶಿ ಬಚ್ಚಣ್ಣ, ರೋಟರಿ ಕಬ್ಬನ್ ಪಾರ್ಕ್ ಅಧ್ಯಕ್ಷ ರಾಯ್ ವೈದ್ಯಾಧಿಕಾರಿಗಳಾದ ಡಾ.ಶೈಲಜಾ ರೆಡ್ಡಿ, ಡಾ.ಶ್ಯಾಮಲಾ, ಡಾ.ವಿದ್ಯಾರಾಣಿ, ಡಾ.ಉಮಾವೆಂಕಟೇಶ್, ಡಾ.ವರದರಾಜು, ಡಾ.ಹರೀಶ್, ಡಾ.ಚಿನ್ಮಯ್ ಇತರರಿದ್ದರು.
ಹೊಸಕೋಟೆಯಲ್ಲಿ ರೋಟರಿ ಸಹಯೋಗದಲ್ಲಿ ಉಚಿತ ಗ್ಯಾಷ್ಟ್ರಿಕ್ ತಪಾಸಣಾ ಶಿಬಿರವನ್ನು ರೋಟರಿ ಕೋಲಾರ ವಲಯ ಮೇಲ್ವಿಚಾರಕ ರಾಜ್ ಕುಮಾರ್, ಹೊಸಕೋಟೆ ರೋಟರಿ ಅಧ್ಯಕ್ಷ ಸುಬ್ರಮಣಿ, ಹಿರಿಯ ಗ್ಯಾಸ್ಟ್ರೊ ಎಂಟರಲಾಜಿಸ್ಟ್ ಡಾ. ಯೋಗಾನಂದರೆಡ್ಡಿ ಉದ್ಘಾಟಿಸಿದರು.