ಅರಣ್ಯ ಇಲಾಖೆ ಬೇಜವಾಬ್ದಾರಿತನಕ್ಕೆ ರೋಟರಿ ಅಸಮಾಧಾನ

KannadaprabhaNewsNetwork |  
Published : Jun 27, 2025, 12:48 AM IST
26ಎಚ್ಎಸ್ಎನ್10 :  | Kannada Prabha

ಸಾರಾಂಶ

ರೋಟರಿ ಕ್ಲಬ್ ಬಳಿ ಇರುವ ಸರ್ಕಾರಿ ಶಾಲೆಯ ಪಕ್ಕದ ಕಾಂಪೌಡ್ ಬಳಿ ಇದ್ದ ಹಳೆಯ ಮರದ ಕೊಂಬೆಗಳನ್ನು ಅರಣ್ಯ ಇಲಾಖೆ ಕತ್ತರಿಸಿ ಹಾಗೇ ಬಿಟ್ಟಿದ್ದು ಮಳೆಯಿಂದ ಕೊಳೆತು ನಾರುತ್ತಿದ್ದು ಸಾಂಕ್ರಾಮಿಕ ರೋಗ ಹಬ್ಬಲು ಕಾರಣವಾಗಿದೆ ಎಂದು ರೋಟರಿ ಸಂಸ್ಥೆಯವರು ಆರೋಪ ಮಾಡಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ‌. ಈ ರಸ್ತೆಗಳಲ್ಲಿ ಸಾವು-ನೋವು ಸಂಭವಿಸುವ ಮೊದಲು ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂದು ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಬೇಲೂರುಪಟ್ಟಣದ ರೋಟರಿ ಕ್ಲಬ್ ಬಳಿ ಇರುವ ಸರ್ಕಾರಿ ಶಾಲೆಯ ಪಕ್ಕದ ಕಾಂಪೌಡ್ ಬಳಿ ಇದ್ದ ಹಳೆಯ ಮರದ ಕೊಂಬೆಗಳನ್ನು ಅರಣ್ಯ ಇಲಾಖೆ ಕತ್ತರಿಸಿ ಹಾಗೇ ಬಿಟ್ಟಿದ್ದು ಮಳೆಯಿಂದ ಕೊಳೆತು ನಾರುತ್ತಿದ್ದು ಸಾಂಕ್ರಾಮಿಕ ರೋಗ ಹಬ್ಬಲು ಕಾರಣವಾಗಿದೆ ಎಂದು ರೋಟರಿ ಸಂಸ್ಥೆಯವರು ಆರೋಪ ಮಾಡಿದ್ದಾರೆ.ಈ ವೇಳೆ ಮಾತನಾಡಿದ ರೋಟರಿ ಕ್ಪಬ್‌ನ ಜೋನಲ್ ಲೆಪ್ಟಿನೆಂಟ್ ವೈಡಿ ಲೋಕೇಶ್, ಈ ಹಿಂದೆ ಒಣಗಿದ ಮರವೊಂದು ಶಾಲೆಗೆ ಬಾಗಿದ ಹಿನ್ನೆಲೆಯಲ್ಲಿ ಆಗುವ ಅಪಾಯ ಕುರಿತು ಪತ್ರಿಕೆಗಳಲ್ಲಿ ಬಂದ ಸುದ್ದಿ ನಂತರ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ತೆರವುಗೊಳಿದರು. ಆದರೆ ಕತ್ತರಿಸಿದ ಮರದ ಕೊಂಬೆಗಳನ್ನು ಕಳೆದ ಎರಡು ವಾರಗಳಿಂದ ಹಾಗೇ ಬಿಡಲಾಗಿದೆ. ಈಗಾಗಲೇ ಪಟ್ಟಣದಲ್ಲಿ ಸತತವಾಗಿ ಮಳೆ ಬರುತ್ತಿದ್ದು, ಇದರಿಂದ ಮರದ ಎಲೆಗಳು ಕೊಳೆತು ಡೆಂಘೀನಂತಹ ಮಾರಕ ರೋಗಗಳು ಹರಡುವ ಸಾಧ್ಯತೆ ಇದ್ದು, ಕೂಡಲೇ ತೆರವು ಮಾಡುವಂತೆ ಆಗ್ರಹಿಸಿದರು.

ರೋಟರಿ ಕ್ಲಬ್ ಅಧ್ಯಕ್ಷ ಶಂಭುಗೌಡ ಮಾತನಾಡಿ, ಹಳೆ ಮರಗಳು ಈ ರಸ್ತೆಯಲ್ಲಿ ಮಾತ್ರವಲ್ಲದೆ ಪಟ್ಟಣದ ಬಿಕ್ಕೋಡು ರಸ್ತೆ ಸೇರಿದಂತೆ ಹಲವು ಕಡೆ ರಸ್ತೆಯಲ್ಲಿ ಸಂಚಾರ ಮಾಡುವವರಿಗೆ ಯಮಪಾಶದಂತೆ ಕಾಡುತ್ತಿವೆ. ಈಗಾಗಲೇ ಮರಗಳು ಒಣಗಿ ಬೀಳುವ ಹಂತದಲ್ಲಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ‌. ಈ ರಸ್ತೆಗಳಲ್ಲಿ ಸಾವು-ನೋವು ಸಂಭವಿಸುವ ಮೊದಲು ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂದು ಮನವಿ ಮಾಡಿದರು. ರೋಟರಿ ಕ್ಲಬ್ ಕಾರ್ಯದರ್ಶಿ ಬಿ.ಬಿ ಶಿವರಾಜ್ ಮಾತನಾಡಿ, ಈ ಹಿಂದೆ ಇದ್ದ ಹಳೇ ಮರವನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿದ್ದರಿಂದ ತೆರವು ಮಾಡಿದ್ದರು. ಅದರ ರೆಂಬೆಕೊಂಬೆಗಳನ್ನು ಕಡಿದು ಶಾಲೆಯ ಪಕ್ಕದಲ್ಲೇ ಹಾಕಿ ಎರಡು ವಾರವಾದರೂ ಇತ್ತ ತಲೆ ಹಾಕಿಲ್ಲ. ರೋಟರಿ ಕ್ಲಬ್ ಬಳಿಯೂ ಹಾಕಿದ್ದಾರೆ‌. ಅರಣ್ಯ ಇಲಾಖೆಯವರು ತೆರವು ಮಾಡಲು ನಿರ್ಲಕ್ಷ್ಯ ವಹಿಸಿರುವ ಬಗ್ಗೆ ಕೇಳಿದರೆ ಇದು ಪುರಸಭೆಯವರು ಮಾಡಬೇಕು ಎಂದು ಹೇಳುತ್ತಾರೆ‌. ಆದರೆ ಪುರಸಭೆಯಲ್ಲಿ ವಿಚಾರಿಸಿದರೆ ಇದು ಅರಣ್ಯ ಇಲಾಖೆಗೆ ಸೇರಿದ್ದು ನಮಗೆ ಅವರು ಮರ ಕಡಿಯುವ ಬಗ್ಗೆ ಹಾಗೂ ಅದನ್ನು ವಿಲೇವಾರಿ ಮಾಡುವ ವಿಚಾರವು ನಮಗೆ ತಿಳಿಸಿಲ್ಲ‌‌ ಎನ್ನುತ್ತಾರೆ. ಮಳೆಗಾಲದಲ್ಲಿ ಸಾಕಷ್ಟು ಸೊಳ್ಳೆಗಳ ಪ್ರಮಾಣ ಹೆಚ್ಚು ಇರುವುದರಿಂದ ಡೆಂಘೀ, ಮಲೇರಿಯಾ ಕಾಯಿಲೆಗಳು ಹೆಚ್ಚಾಗುವ ಲಕ್ಷಣವಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಕೆಡವಿದ ಮರಗಳನ್ನು ತೆರವುಗೊಳಿಸದಿದ್ದರೆ ರೋಟರಿ ಕ್ಲಬ್ ವತಿಯಿಂದ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ರೋಟರಿ ಕ್ಲಬ್‌ನ ಮೊಗಪ್ಪಗೌಡ, ಯೋಗೇಶ್ ಗೌಡ, ಸಂದೇಶ್, ಗಣೇಶ್, ಎಚ್ ಕೆ ರಮೇಶ್, ನಾರಾಯಣ ಸ್ವಾಮಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ರೈಲ್ವೆ ಬಡ್ತಿ ಪರೀಕ್ಷೆ ಕನ್ನಡದಲ್ಲೂ ನಡೆಸಲು ಸೋಮಣ್ಣ ತಾಕೀತು