ಪ್ರಪಂಚದಲ್ಲೇ 2ನೇ ಅತಿ ಹೆಚ್ಚು ರಾಜಸ್ವ ನೀಡುವ ನಗರವಾಗಿದೆ ಬೆಂಗಳೂರು : ಗಣೇಶ ಹೆಗಡೆ

KannadaprabhaNewsNetwork |  
Published : Jun 27, 2025, 12:48 AM IST
ನರಸಿಂಹರಾಜಪುರ ಪಟ್ಟಣದ ಒಕ್ಕಲಿಗರ ಸಂಘದ ಆವರಣದಲ್ಲಿ ತಾಲೂಕು ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆದ ನಾಡ ಪ್ರಭು ಕೆಂಪೇಗೌಡ  ಜಯಂತಿ ಕಾರ್ಯಕ್ರಮವನ್ನು ತಾಲೂಕು ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಪದ್ಮ ಸತೀಶ್ ಉದ್ಘಾಟಿಸಿದರು. | Kannada Prabha

ಸಾರಾಂಶ

ನರಸಿಂಹರಾಜಪುರನಾಡಪ್ರಭು ಕೆಂಪೇಗೌಡರು 6 ರಿಂದ 60 ಕಿ.ಮೀ. ವ್ಯಾಪ್ತಿಗೆ ವಿಸ್ತರಿಸಿ ನಿರ್ಮಿಸಿದ ಬೆಂಗಳೂರು ಈಗ ದಕ್ಷಿಣ ಭಾರತದ ಶ್ರೀಮಂತ, ಸ್ವಚ್ಛ ಹವಾಮಾನದ ನಗರವಾಗಿ ಬೆಳೆದಿದೆ. ಪ್ರಪಂಚದಲ್ಲೇ 2ನೇ ಅತಿ ಹೆಚ್ಚು ರಾಜಸ್ವ ನೀಡುತ್ತಿರುವ

ಒಕ್ಕಲಿಗರ ಸಂಘದಲ್ಲಿ ನಾಡಪ್ರಭು ಕೆಂಪೇಗೌಡ ದಿನಾಚರಣೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ನಾಡಪ್ರಭು ಕೆಂಪೇಗೌಡರು 6 ರಿಂದ 60 ಕಿ.ಮೀ. ವ್ಯಾಪ್ತಿಗೆ ವಿಸ್ತರಿಸಿ ನಿರ್ಮಿಸಿದ ಬೆಂಗಳೂರು ಈಗ ದಕ್ಷಿಣ ಭಾರತದ ಶ್ರೀಮಂತ, ಸ್ವಚ್ಛ ಹವಾಮಾನದ ನಗರವಾಗಿ ಬೆಳೆದಿದೆ. ಪ್ರಪಂಚದಲ್ಲೇ 2ನೇ ಅತಿ ಹೆಚ್ಚು ರಾಜಸ್ವ ನೀಡುತ್ತಿರುವ

ಗುರುವಾರ ಪಟ್ಟಣದ ಒಕ್ಕಲಿಗರ ಸಂಘದ ಆವರಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿಯಲ್ಲಿ ಉಪನ್ಯಾಸ ನೀಡಿದರು. ನಾಡಪ್ರಭು ಕೆಂಪೇಗೌಡರು ಮೂಲತಃ ತಮಿಳು ನಾಡಿನವರು ಎಂದು ಇತಿಹಾಸದಿಂದ ತಿಳಿದು ಬಂದಿದೆ. ಕೇಂಪೇಗೌಡರಿಗೆ ಸಂಸ್ಕೃತ ಭಾಷೆಯಲ್ಲಿ ಹಿಡಿತವಿತ್ತು. ಪ್ರಾಮಾಣಿ ಕತೆ, ಸ್ವಾಮಿ ನಿಷ್ಠೆ ಬೆಳೆಸಿಕೊಂಡಿದ್ದರು. ಕೆಂಪೇಗೌಡರನ್ನು ಜಾತಿಗೆ ಸೀಮಿತ ಮಾಡದೆ ಅವರು ನಾಡಿನ ಆಸ್ತಿಯಾಗಬೇಕು. ಅವರ ಬದುಕಿನ ಚಿಂತನೆ, ರಾಜಕೀಯ ನೈಪುಣ್ಯತೆ ಪ್ರತಿಯೊಬ್ಬರಿಗೂ ಮಾದರಿಯಾಗಬೇಕು ಎಂದರು.

ಸಭೆ ಅಧ್ಯಕ್ಷತೆ ವಹಿಸಿದ್ದ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಚ್.ಟಿ.ರಾಜೇಂದ್ರ ಮಾತನಾಡಿ, ಕೇಂಪೇಗೌಡರಿಗೆ ಜಾತಿಯ ಸಂಕುಚಿತ ಭಾವನೆ ಇರಲಿಲ್ಲ. 64 ವೃತ್ತಿ ಮಾಡುವ 64 ಸಮುದಾಯದವರಿಗೂ ಪೇಟೆ ಕಟ್ಟಿಸಿಕೊಟ್ಟಿದ್ದರು. ಕಸುಬಿನ ಆಧಾರದಲ್ಲಿ ಬೆಂಗಳೂರಿನಲ್ಲಿ ಪೇಟೆಗಳು, ಮಾರುಕಟ್ಟೆಗಳು ನಿರ್ಮಾಣವಾಗಿವೆ. 500 ಕೆರೆಗಳನ್ನು ನಿರ್ಮಾಣ ಮಾಡಿದ್ದಾರೆ. ಕೋಟೆಗಳನ್ನು ಕಟ್ಟಿದ್ದರು. ಪ್ರತಿಯೊಂದು ಮನೆಗೂ ಬಾವಿ ತೆಗೆಸಿದ್ದರು. ಕೆಂಪೇಗೌಡರ ಅಧ್ಯಯನ ಕೇಂದ್ರ ಪ್ರಾರಂಭವಾಗಿದ್ದು ವಿದ್ಯಾರ್ಥಿಗಳು ಕೆಂಪೇಗೌಡರ ಬಗ್ಗೆ ಅಧ್ಯಯನ ಮಾಡಿ ಪ್ರಬಂಧ ಬರೆಯಬಹುದು. ಕೆಂಪೇಗೌಡರನ್ನು ಒಕ್ಕಲಿಗರಿಗೆ ಸೀಮಿತಗೊಳಿಸಬಾರದು ಎಂದರು.

ಮುಖ್ಯ ಅತಿಥಿಯಾಗಿದ್ದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಜನಪರ ಕಾಳಜಿ ಹೊಂದಿದ್ದು ದೂರದೃಷ್ಟಿ ಇಟ್ಟುಕೊಂಡು ಬೆಂಗಳೂರನ್ನು ನಿರ್ಮಾಣ ಮಾಡಿದ್ದರು. ಕೆಂಪೇಗೌಡರು ಯಾವುದೇ ಒಂದು ಜಾತಿಗೆ ಸೀಮಿತವಾಗಬಾರದು. ಎಲ್ಲರೂ ಕೆಂಪೇಗೌಡರ ಜಯಂತಿಯಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಕಸಾಪದಿಂದ ಶೀಘ್ರದಲ್ಲೇ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದವರನ್ನು ಸನ್ಮಾನ ಮಾಡಲಾಗುವುದು ಎಂದರು.

ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಪದ್ಮಸತೀಶ್ ಉದ್ಘಾಟಿಸಿದರು. ತಾಲೂಕು ಒಕ್ಕಲಿಗರ ಸಂಘದ ಸಹ ಕಾರ್ಯ ದರ್ಶಿ ಪಿ.ಕೆ.ಬಸವರಾಜಪ್ಪ, ರೋಟರಿ ಅಧ್ಯಕ್ಷ ದಿವಾಕರ್‌, ತಾಲೂಕು ಒಕ್ಕಲಿಗರ ಸಂಘದ ಕಾರ್ಯದರ್ಶಿ ಎಸ್.ಎಸ್.ಶಾಂತಕುಮಾರ್, ಉಪಾಧ್ಯಕ್ಷ ಎಲ್‌.ಎಂ.ಸತೀಶ್, ಖಜಾಂಚಿ ಎಸ್‌.ಎನ್‌.ಲೋಕೇಶ್,ವಾಲ್ಮೀಕಿ ಸಂಘದ ಕ್ಷೇತ್ರ ಅಧ್ಯಕ್ಷ ಎ.ಸಿ.ಶ್ರೀನಿವಾಸ್, ತಾಲೂಕು ಅಧ್ಯಕ್ಷ ಮಂಜುನಾಥ್,ಡಿಎಸ್ಎಸ್ ಮುಖಂಡ ಡಿ.ರಾಮು, ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷೆ ಸುನಂದಮ್ಮ, ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಶ್ರೀನಿವಾಸ್,ಡಿಸಿಎಂಸಿ ಶಾಲೆ ಪ್ರಾಂಶುಪಾಲೆ ಪದ್ಮರಮೇಶ್, ಮುಖ್ಯೋಪಾಧ್ಯಾಯ ಮಹಾವೀರ್ ಇದ್ದರು. ಎಸ್‌.ಎಸ್.ಶಾಂತಕುಮಾರ್ ಸ್ವಾಗತಿಸಿದರು. ನಿಷ್ಮಾಜೈನ್ ಕಾರ್ಯಕ್ರಮ ನಿರೂಪಿಸಿದರು. ನಿರಂಜಮೂರ್ತಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ರೈಲ್ವೆ ಬಡ್ತಿ ಪರೀಕ್ಷೆ ಕನ್ನಡದಲ್ಲೂ ನಡೆಸಲು ಸೋಮಣ್ಣ ತಾಕೀತು