ರೋವರ್ಸ್ - ರೇಂಜರ್ಸ್ ಬೀಚ್ ಸ್ವಚ್ಛತೆ

KannadaprabhaNewsNetwork |  
Published : Aug 19, 2026, 02:30 AM IST
18ಬೀಚ್ | Kannada Prabha

ಸಾರಾಂಶ

ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರೋವರ್ ರೇಂಜರ್ಸ್ ವಿದ್ಯಾರ್ಥಿಗಳು, ಲೈಫ್ ಗಾರ್ಡ್ ಮತ್ತು ಹೋಮ್ ಗಾರ್ಡ್ ಸಹಭಾಗಿತ್ವದಲ್ಲಿ ಮಲ್ಪೆ ಸಮುದ್ರ ತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮವು ನಡೆಯಿತು.

ಮಲ್ಪೆ: ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರೋವರ್ ರೇಂಜರ್ಸ್ ವಿದ್ಯಾರ್ಥಿಗಳು, ಲೈಫ್ ಗಾರ್ಡ್ ಮತ್ತು ಹೋಮ್ ಗಾರ್ಡ್ ಸಹಭಾಗಿತ್ವದಲ್ಲಿ ಮಲ್ಪೆ ಸಮುದ್ರ ತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮವು ನಡೆಯಿತು.ರೇಂಜರ್ಸ್ ಲೀಡರ್ ಸುಷ್ಮಾ ಟಿ. ಅವರು ಮಾತನಾಡಿ "ವಿದ್ಯಾರ್ಥಿಗಳ ಸ್ವಚ್ಛತೆ ಕೇವಲ ಒಂದು ದಿನದ ಕಾರ್ಯಕ್ರಮ ಆಗಿರಬಾರದು. ಸ್ವಚ್ಛ ಕಡಲ ತೀರ - ಆರೋಗ್ಯಕರ ಪರಿಸರ ಎಂಬ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ನಾವು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು, ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಸೂಕ್ತವಾಗಿ ವಿಲೇವಾರಿ ಮಾಡಬೇಕು ಮತ್ತು ಇತರರಿಗೂ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಬೇಕು " ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ನಿಪುಣ್ ಮತ್ತು ರಾಜ್ಯ ಪುರಸ್ಕಾರ ಪರೀಕ್ಷೆ ಬರೆಯುವ ರೋವರ್, ರೇಂಜರ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ರೋವರ್ಸ್ ಲೀಡರ್ ಮರ್ವಿನ್ ಡಿಸೋಜ ಆಯೋಜಿಸಿದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದ್ಭಾವನಾ ವೇದಿಕೆ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ
ನಿರಂತರ ಶ್ರಮದಿಂದ ಯಶಸ್ಸು: ಸಿಎ ರಾಘವೇಂದ್ರ ಶೆಟ್ಟಿ