ಕನ್ನಡಪ್ರಭ ವಾರ್ತೆ ಹಾಸನ
ಬುಧವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಜೊತೆಯಲಿದ್ದವರೊಂದಿಗೆ ಕುಡಿತ್ತಾ ಕುಡಿದ ಮತ್ತಿನಲ್ಲಿ ಅಶ್ಲೀಲವಾಗಿ ಒಬ್ಬರನ್ನೊಬ್ಬರು ನಿಂದಿಸಿಕೊಂಡಿದ್ದಾರೆ. ಅದರಲ್ಲೂ ಜಿಸಿಬಿ ಮಂಜು ತನ್ನ ಗೆಳೆಯ ಯೋಗಿಹಳ್ಳಿ ರಾಜಿ ಮತ್ತಾತನ ಸಹಚರರಿಗೆ ಅತ್ಯಂತ ಕೆಟ್ಟದಾಗಿ ನಿಂದಿಸಿದ್ದಾನೆ. ಈ ವೇಳೆಯೇ ಕೈ ಕೈ ಮಿಲಾಯಿಸಿದ್ದು ಅಷ್ಟರಲ್ಲಿ ಸ್ಥಳದಲ್ಲಿದ್ದವರು ಇಬ್ಬರನ್ನು ಅಲ್ಲಿಂದ ಕಳುಹಿಸಿದ್ದಾರೆ. ಬಳಿಕ ರಾತ್ರಿ 9ರ ವೇಳೆಗೆ ಜೆಸಿಬಿ ಮಂಜುಗೆ ಕರೆ ಮಾಡಿದ ಗೆಳೆಯ ಯೋಗಿಹಳ್ಳಿ ರಾಜು ನಾವು ನಾವೇ ಹೀಗೆ ಜಗಳ ಮಾಡಿಕೊಂಡರೇ ಹೇಗೆ ಎಂದು ಮಾತಿಗೆ ಕರೆದಿದ್ದಾನೆ.
ಮಾತುಕತೆಗೆ ಬಂದವನ ಕೊಲೆಗೆ ಯತ್ನ:ಇನ್ನು ಯೋಗಿಹಳ್ಳಿ ರಾಜು ಮಾತು ಕೇಳಿ ಮನೆಯಲ್ಲಿದ್ದ ಜೆಸಿಬಿ ಮಂಜ. ರಿಂಗ್ ರಸ್ತೆಯ ಸತ್ಯಮಂಗಲ ಕೆರೆ ಕೋಡಿ ಹರಿಯುವ ಬ್ರಿಡ್ಜ್ ಬಳಿ ಬಂದ ವೇಳೆ ಯೋಗಿಹಳ್ಳಿ ರಾಜಿ ಮತ್ತು 20 ಮಂದಿಯಿದ್ದ ತಂಡ ಏಕಾಏಕಿ ದಾಳಿಗೆ ಮುಂದಾಗಿದೆ. ಈ ವೇಳೆ ರಾಜು ( ರಾಜಿ) ಬೀಸಿದ ಭರ್ಜಿ ಜೆಸಿಬಿ ಮಂಜನ ಕುತ್ತಿಗೆಯ ಗದ್ದದ ಬಳಿ ದಾಳಿ ಮಾಡಿದ್ದು ಕೂದಲೆಳೆಯಲ್ಲಿ ಮಂಜು ಸಾವಿನ ಮನೆಯಿಂದ ಪಾರಾಗಿದ್ದಾನೆ.
ನಾನು ಮನೆಯಲ್ಲಿ ಮಲಗಿದ್ದೆ. ಸ್ನೇಹಿತರು ಕರೆದರು ಅಂತ ಮನೆಯಿಂದ ಹೊರಹೋದೆ. ಮಾತಾಡುವ ವೇಳೆಗೆ ರಾಜಿ ಭರ್ಜಿಯಿಂದ ಇರಿದ. ಅವನಿಗೂ ನನಗೂ ಯಾವುದೇ ದ್ವೇಷವಿಲ್ಲ. ಆದರೂ ಯಾಕೆ ಕೊಲೆ ಮಾಡಲು ಬಂದರೆಂಬುದೇ ತಿಳಿಯುತ್ತಿಲ್ಲ.