ಆರ್‌ಆರ್‌ಟಿ ಪ್ರಕರಣ: ತಹಸೀಲ್ದಾರ್‌ ವಿರುದ್ಧ ತನಿಖೆಗೆ ಆಗ್ರಹ

KannadaprabhaNewsNetwork |  
Published : Sep 24, 2025, 01:00 AM IST
೨೩ಕೆಎಲ್‌ಆರ್-೬ತಹಸೀಲ್ದಾರ್ ನಯನರ ಅವಧಿಯಲ್ಲಿನ ಆರ್.ಆರ್.ಟಿ ಕೇಸಸ್, ಆರ್.ಆರ್.ಟಿ ತಿದ್ದುಪಡಿ, ಎಲ್.ಎಸ್.ಡಿ.ಖಾತೆ, ಹಾಗೂ ಸಾಗುವಳಿ ಚೀಟಿ ಸಂಬಂಧಿಸಿದ ಎಲ್ಲಾ ಆದೇಶಗಳನ್ನು ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಕೋಲಾರದ ತಹಸೀಲ್ದಾರ್ ಕಛೇರಿ ಎದುರು ಜಿಲ್ಲಾ ವಾಲ್ಮೀಕಿ ನಾಯಕ ಸಂಘಟನೆಗಳ ಸಮನ್ವಯ ಸಮಿತಿಯಿಂದ ಪ್ರತಿಭಟನೆ ನಡೆಸುತ್ತಿರುವುದು. | Kannada Prabha

ಸಾರಾಂಶ

ರೈತರಿಗೆ ನೀಡುವ ಎಲ್.ಎನ್.ಡಿ.ಖಾತೆ ಮತ್ತು ಸಾಗುವಳಿ ಚೀಟಿ ವಿಭಾಗದಲ್ಲಿ ತಹಸೀಲ್ದಾರ್‌ ಕಾನೂನು ಉಲ್ಲಂಘನೆ ಮಾಡಿದ್ದು ಕಂದಾಯ ಇಲಾಖೆಗೆ ಕಪ್ಪುಚುಕ್ಕೆ ತಂದಿದ್ದಾರೆ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಅವರ ಅವಧಿಯ ಎಲ್ಲಾ ಆದೇಶಗಳನ್ನು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.

ಕನ್ನಡಪ್ರಭ ವಾರ್ತೆ ಕೋಲಾರ ತಾಲೂಕಿನಲ್ಲಿ ಆರ್.ಆರ್.ಟಿ ಪ್ರಕರಣಗಳು, ತಿದ್ದುಪಡಿ ಹಾಗೂ ಸಾಗುವಳಿ ಚೀಟಿಗೆ ಸಂಬಂಧಿಸಿದಂತೆ ತಹಸೀಲ್ದಾರ್ ನಯನ ಅವರು ಕೈಗೊಂಡಿರುವ ಆದೇಶಗಳ ಬಗ್ಗೆ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಹಸೀಲ್ದಾರ್ ಕಚೇರಿ ಎದುರು ಜಿಲ್ಲಾ ವಾಲ್ಮೀಕಿ ನಾಯಕ ಸಂಘಟನೆಗಳ ಸಮನ್ವಯ ಸಮಿತಿ ಪ್ರತಿಭಟನೆ ನಡೆಸಿತು.ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆ ಸದಸ್ಯ ಎನ್.ಅಂಬರೀಷ್, ತಹಸೀಲ್ದಾರ್ ನಯನ ಅವರು, ಆರ್.ಆರ್.ಟಿ ಕೇಸಸ್‌ಗಳಲ್ಲಿ ನ್ಯಾಯ ಸಮ್ಮತವಾದ ಆದೇಶಗಳನ್ನು ಮಾಡುವಲ್ಲಿ ಲೋಪ ಮಾಡಿರುವ ಅನುಮಾನಗಳು ದಟ್ಟವಾಗಿವೆ, ಈ ಬಗ್ಗೆ ಒಂದು ವಾರದೊಳಗೆ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ತನಿಖೆ ಮಾಡಬೇಕು. ಇಲ್ಲದೇ ಹೋದರೆ ಬೆಂಗಳೂರು ಕಚೇರಿ ಮುಂದೆ ಧರಣಿ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಕಾನೂನು ಉಲ್ಲಂಘನೆ ಆರೋಪ

ವಾಲ್ಮೀಕಿ ಸಮುದಾಯದ ರಾಜ್ಯ ಮುಖಂಡ ಮಾಲೂರು ವೆಂಕಟರಾಮ್ ಮಾತನಾಡಿ, ರೈತರಿಗೆ ನೀಡುವ ಎಲ್.ಎನ್.ಡಿ.ಖಾತೆ ಮತ್ತು ಸಾಗುವಳಿ ಚೀಟಿ ವಿಭಾಗದಲ್ಲಿ ಕಾನೂನು ಉಲ್ಲಂಘನೆಯಾಗಿದ್ದು ಕಂದಾಯ ಇಲಾಖೆಗೆ ಕಪ್ಪುಚುಕ್ಕೆ ತಂದಿದ್ದಾರೆ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಅವರ ಅವಧಿಯ ಎಲ್ಲಾ ಆದೇಶಗಳನ್ನು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.ವಾಲ್ಮೀಕಿ ಸಮಾಜದ ಅಧ್ಯಕ್ಷ ಎಂ.ಬಾಲಗೋವಿಂದ್ ಮಾತನಾಡಿ, ಸಣ್ಣ ಕೆಲಸಕ್ಕಾಗಿ ದಿನನಿತ್ಯ ಅಲೆದರು ಕೆಲಸವಾಗಲ್ಲ ಅದೇ ಹಣವಂತರು ಬಂಡವಾಳಗಾರ ಕೆಲಸಗಳು ಮಾತ್ರ ಹೇಗೆ ಬೇಗ ಮಾಡಿಕೊಡುತ್ತಾರೆ ದಲಿತರು, ರೈತರು ಮತ್ತು ಬಡವರ ಧ್ವನಿಯಾಗಿ ಕೆಲಸ ನಿರ್ವಹಿಸಬೇಕಾದ ತಹಸೀಲ್ದಾರ್ ನಯನ ಅವರು ಕೆಲವು ಪ್ರಭಾವಿಗಳಿಗೆ ಅನುಕೂಲವಾಗುವಂತೆ ಕೆಲಸ ಮಾಡಿಕೊಡಲು ಹೊರಟಿದ್ದಾರೆ. ಇದರಿಂದ ರೈತರಿಗೆ, ಬಡವರಿಗೆ ದ್ರೋಹ ಮಾಡಿದಂತಾಗಿದೆ. ಕೂಡಲೇ ಇವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.ಬೇರೆಯವರಿಗೆ ಹಕ್ಕುಪತ್ರ

ವಾಲ್ಮೀಕಿ ಸಮಾಜದ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೋಟೆ ಶ್ರೀನಿವಾಸ್ ಮಾತನಾಡಿ ನರಸಾಪುರ ಹೋಬಳಿಯ ರಾಮಸಂದ್ರ ಗ್ರಾಮದಲ್ಲಿ ೧೯೫೬ ರಲ್ಲಿ ವಾಲ್ಮೀಕಿ ಸಮಾಜದ ಬಡವರಿಗೆ ಹಂಚಿಕೆ ಮಾಡಿದ್ದ ಹಿಡುವಳಿ ಜಮೀನನ್ನು ೧೯೭೭ ರಲ್ಲಿ ಹಿಂಡಿಕರಣ ಮಾಡಿ ಹೊಸ ಸರ್ವೆ ನಂಬರ್ ಕೊಟ್ಟಿದ್ದರು. ಆದರೆ ೨೦೨೩-೨೪ ರಲ್ಲಿ ಬೇರೆಯವರಿಗೆ ಹಕ್ಕುಪತ್ರ ಕೊಟ್ಟು ವಾಲ್ಮೀಕಿ ಸಮಾಜಕ್ಕೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದರು.ಪ್ರತಿಭಟನೆಯಲ್ಲಿ ವಾಲ್ಮೀಕಿ ಸಮಾಜದ ಮುಖಂಡರಾದ ಕುಡುವನಹಳ್ಳಿ ಆನಂದ್, ಸಂಗೊಂಡಹಳ್ಳಿ ಪಿಳ್ಳಪ್ಪ, ಈನೆಲ ಈಜಲ ವೆಂಕಟಾಚಲಪತಿ, ಅಡ್ಡಗಲ್ ನರೇಶ್, ನರಸಿಂಹಪ್ಪ, ಬೈರಂಡಹಳ್ಳಿ ನಾಗೇಶ್, ತಿರುಮಲೇಶ್, ಕಲ್ಲಂಡೂರು ನಾರಾಯಣಸ್ವಾಮಿ, ದಿಂಬಚಾಮನಹಳ್ಳಿ ರಾಮಪ್ಪ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ