₹1.34 ಕೋಟಿ ವೆಚ್ಚದ ವಾಣಿಜ್ಯ ಸಂಕೀರ್ಣಕ್ಕೆ ಗುದ್ದಲಿಪೂಜೆ

KannadaprabhaNewsNetwork |  
Published : Feb 17, 2025, 12:30 AM IST
ಹೊನ್ನಾಳಿ ಫೋಟೋ 16ಎಚ್.ಎಲ್.ಐ2.  ಪಟ್ಟಣದ ತುಮ್ಮಿನಕಟ್ಟೆ ರಸ್ತೆಯಲ್ಲಿರುವ ಟಿಎಪಿಸಿಎಂಎಸ್ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಶಾಸಕ ಡಿ.ಜಿ. ಶಾಂತನಗೌಡ ಭೂಮಿ ಪೂಜೆ ನೆರವೇರಿಸಿದರು.  | Kannada Prabha

ಸಾರಾಂಶ

ಪಟ್ಟಣದ ತುಮ್ಮಿನಕಟ್ಟೆ ರಸ್ತೆಯ ಪಶು ಆಸ್ಪತ್ರೆ ಮುಂಭಾಗದಲ್ಲಿರುವ ಟಿಎಪಿಸಿಎಂಎಸ್‌ಗೆ ಸೇರಿದ 72*45 ಅಳತೆ ನಿವೇಶನದಲ್ಲಿ ಎರಡು ಅಂತಸ್ತಿನ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗುವುದು ಎಂದು ಸಂಘದ ನಿರ್ದೇಶಕರೂ ಆಗಿರುವ ಶಾಸಕ ಡಿ.ಜಿ. ಶಾಂತನಗೌಡ ಹೇಳಿದ್ದಾರೆ.

- ಹೊನ್ನಾಳಿಯಲ್ಲಿ ಟಿಎಪಿಸಿಎಂಎಸ್‌ಗೆ ಸೇರಿದ ನಿವೇಶನದಲ್ಲಿ ಶಾಸಕ ಶಾಂತನಗೌಡ ಚಾಲನೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪಟ್ಟಣದ ತುಮ್ಮಿನಕಟ್ಟೆ ರಸ್ತೆಯ ಪಶು ಆಸ್ಪತ್ರೆ ಮುಂಭಾಗದಲ್ಲಿರುವ ಟಿಎಪಿಸಿಎಂಎಸ್‌ಗೆ ಸೇರಿದ 72*45 ಅಳತೆ ನಿವೇಶನದಲ್ಲಿ ಎರಡು ಅಂತಸ್ತಿನ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗುವುದು ಎಂದು ಸಂಘದ ನಿರ್ದೇಶಕರೂ ಆಗಿರುವ ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ಭಾನುವಾರ ಕಟ್ಟಡ ನಿರ್ಮಾಣ ಸಂಬಂಧ ಭೂಮಿ ಪೂಜೆ ನೆರವೇರಿಸಿದ ಶಾಸಕರು, ಪತ್ರಕರ್ತರೊಂದಿಗೆ ಮಾತನಾಡಿದರು. ಈ ಜಾಗದಲ್ಲಿ ತುಂಬಾ ಹಳೇಯ ಕಟ್ಟಡವಿತ್ತು. ತುಮ್ಮಿನಕಟ್ಟೆ ರಸ್ತೆ ಅಗಲೀಕರಣ ಕೂಡ ಇದೇ ಸಂದರ್ಭದಲ್ಲಿ ಬಂದಿದೆ. ಆದ್ದರಿಂದ ಹಳೇಯ ಕಟ್ಟಡ ತೆರವುಗೊಳಿಸಿದ್ದೇವೆ. ಈಗ ₹ 1.34 ಕೋಟಿ ವೆಚ್ಚದಲ್ಲಿ ನೂತನ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ ಎಂದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುರುಗೇಶ್ ಮಾತನಾಡಿ, ಸಂಘದ ನಿವೇಶನದ ಒಂದಿಷ್ಟು ಜಾಗ ರೋಡ್ ಮಾರ್ಜಿನ್‌ಗೆ ಹೋಗಿದ್ದರಿಂದ ಅದಕ್ಕೆ ಪರಿಹಾರವಾಗಿ ದೊರೆತ ₹32 ಲಕ್ಷ, ನಬಾರ್ಡ್‌ನಿಂದ ₹50 ಲಕ್ಷ, ನಮ್ಮ ಸಂಘದಿಂದ ₹20 ಲಕ್ಷವನ್ನು ಕ್ರೋಢೀಕರಿಸಿ, ಬ್ಯಾಂಕಿನಿಂದ ₹32 ಲಕ್ಷ ಸಾಲ ಪಡೆದು ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ. ಶೀಘ್ರದಲ್ಲಿಯೇ ಕಟ್ಟಡ ನಿರ್ಮಾಣ ಕಾಮಗಾರಿಯೂ ಆರಂಭವಾಗಲಿದೆ ಎಂದರು.

ಸಂಘದ ಅಧ್ಯಕ್ಷ ಎಚ್. ಬಸವರಾಜ್, ಉಪಾಧ್ಯಕ್ಷರಾದ ಎಚ್.ಡಿ. ಬಸವರಾಜಪ್ಪ ಬಸವನಹಳ್ಳಿ, ನಿರ್ದೇಶಕರಾದ ಡಿ.ಮಂಜುನಾಥ್, ಕೆ.ಚೇತನ್, ಎಚ್.ಸಿ.ಶೇಖರಪ್ಪ, ಎಂ.ಜಿ. ಹಾಲಪ್ಪ, ಬಸಮ್ಮ, ಎಚ್.ಜಿ. ಶಂಕರಮೂರ್ತಿ, ಕೆ.ಬಿ.ಸಿದ್ದನಗೌಡ, ನಾಗಮ್ಮ, ಅನಂತನಾಯ್ಕ, ರಾಜು ಸರಳಿನಮನೆ, ಎಂ.ಎಚ್. ಗಜೇಂದ್ರಪ್ಪ, ಎಚ್.ಸಿ. ಪ್ರಕಾಶ್, ಸಂಘದ ಸಿಬ್ಬಂದಿ ಗೋಪಿನಾಥ್, ಸುರೇಶ್ ಇತರರು ಹಾಜರಿದ್ದರು.

- - - -16ಎಚ್ಎಲ್ಐ2.ಜೆಪಿಜಿ:

ಹೊನ್ನಾಳಿ ಪಟ್ಟಣದ ತುಮ್ಮಿನಕಟ್ಟೆ ರಸ್ತೆಯ ಟಿಎಪಿಸಿಎಂಎಸ್ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಶಾಸಕ ಡಿ.ಜಿ. ಶಾಂತನಗೌಡ ಭೂಮಿಪೂಜೆ ನೆರವೇರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ