- ಕೆನರಾ ಬ್ಯಾಂಕ್ ಸಹಯೋಗದಲ್ಲಿ ಅಪಘಾತ ವಿಮೆ ಚೆಕ್ ಹಸ್ತಾಂತರ: ಡಿಸಿ- - -
ಕನ್ನಡಪ್ರಭ ವಾರ್ತೆ ದಾವಣಗೆರೆಚನ್ನಗಿರಿ ತಾಲೂಕಿನ ಎಕ್ಕೆಗೊಂದಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಕೆ.ಬಿ.ತಿಪ್ಪಣ್ಣ ಅಪಘಾತದಲ್ಲಿ ಮೃತರಾಗಿದ್ದು, ಕೆನರಾ ಬ್ಯಾಂಕ್ ಸಹಯೋಗದಲ್ಲಿ ಅವರ ಅವಲಂಬಿತ ಕುಟುಂಬಕ್ಕೆ ಅಪಘಾತ ವಿಮೆ ಪಾಲಿಸಿಯಡಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ₹1 ಕೋಟಿ ಪರಿಹಾರ ಮೊತ್ತ ನೀಡಲಾಯಿತು.
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಪರಿಹಾರ ಚೆಕ್ ವಿತರಿಸಿ ಮಾತನಾಡಿ, ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ಅವುಗಳನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಪಡೆದುಕೊಳ್ಳುತ್ತಿಲ್ಲ. ಕಷ್ಟದ ಸಂದರ್ಭಗಳಲ್ಲಿ ಹಲವಾರು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತವೆ. ಆದ್ದರಿಂದ ಪ್ರತಿಯೊಬ್ಬ ಸರ್ಕಾರಿ ನೌಕರ ವೇತನ ಪ್ಯಾಕೇಜ್ ಖಾತೆ ಮಾಡಿಕೊಳ್ಳಬೇಕು. ಯಾವುದೇ ಒಬ್ಬ ವ್ಯಕ್ತಿ ಆಕಸ್ಮಿಕವಾಗಿ ಮರಣ ಹೊಂದಿದಲ್ಲಿ ಅಪಘಾತ ಅಥವಾ ವಿವಿಧ ರೀತಿಯ ವೈಯಕ್ತಿಕ ಅಪಘಾತ ಹಾಗೂ ವೈಮಾನಿಕ ಅಪಘಾತ ವಿಮೆ ಸೇವೆಗಳಡಿ ₹50 ಲಕ್ಷದಿಂದ ₹1 ಕೋಟಿವರೆಗೆ ಪರಿಹಾರವನ್ನು ಅವಲಂಬಿತ ಕುಟುಂಬಗಳಿಗೆ ನೀಡಲಾಗುತ್ತದೆ ಎಂದು ವಿವರಿಸಿದರು.ಈ ಯೋಜನೆಯೂ ಕೇವಲ ಸರ್ಕಾರಿ ನೌಕರರಿಗೆ ಅಲ್ಲದೇ, ಅರೆ ಸರ್ಕಾರಿ ನೌಕರರಿಗೂ ವಿವಿಧ ಪ್ಯಾಕೇಜ್‌ಗಳಲ್ಲಿ ಸೇವೆ ಲಭ್ಯವಿದೆ. ಪ್ರತಿಯೊಬ್ಬರು ಸದುಪಯೋಗ ಪಡೆದುಕೊಳ್ಳಬೇಕು. ಕೇಂದ್ರ ಸರ್ಕಾರವೂ ಪ್ರಧಾನಮಂತ್ರಿ ಭೀಮಾ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ಯೋಜನೆ ಜಾರಿ ಮಾಡಿದೆ. ಜೀವ ವಿಮಾ ನೋಂದಣಿಯೊಂದಿಗೆ ವಾರ್ಷಿಕ ₹430 ಪಾವತಿಸಿದಲ್ಲಿ ₹1 ಲಕ್ಷದಿಂದ ₹5 ಲಕ್ಷದವರೆಗೆ ವಿಮೆ ಪಾವತಿ ಮಾಡಲಾಗುತ್ತದೆ. ಕಷ್ಟದ ಸುಳಿಗೆ ಸಿಲುಕಿಕೊಳ್ಳುವ ಬದಲಾಗಿ ಇಂತಹ ಯೋಜನೆಗಳ ನೋಂದಣಿ ಮೂಲಕ ಭವಿಷ್ಯದಲ್ಲಿ ಎದುರಾಗುವ ಸಂಕಷ್ಟಗಳಿಂದ ಮುಕ್ತರಾಗಿ ಎಂದರು.
ಈ ಸಂದರ್ಭ ಶಾಸಕರಾದ ಕೆ.ಎಸ್. ಬಸವಂತಪ್ಪ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪಡದಯ್ಯ ಹಿರೇಮಠ್, ಡಿಜಿಎಂ ತನ್ಮಯ್ ದಾಸ್, ಡಿಡಿಪಿಐ ಕೊಟ್ರೇಶ್ ಮತ್ತಿತರರು ಇದ್ದರು.- - -
-11ಕೆಡಿವಿಜಿ42:ದಾವಣಗೆರೆಯಲ್ಲಿ ಅಪಘಾತದಲ್ಲಿ ಮೃತ ಕುಟುಂಬಕ್ಕೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ₹1 ಕೋಟಿ ಮೊತ್ತದ ಪರಿಹಾರ ಚೆಕ್ ವಿತರಿಸಿದರು.