)
- ಅವ್ರು ಕೊಟ್ಟು ಕೋಡಂಗಿ ಆಗಲಿಲ್ಲ, ಇವ್ರು ಇಸ್ಕೊಂಡು ಈರಭದ್ರ ಆಗಲಿಲ್ಲ ಎಂಬಂಥ ಬಜೆಟ್! - ಅಹಿಂದ ಶಕ್ತಿ ತುಂಬಿದ, ಸಿದ್ದರಾಮೋತ್ಸವ ಮೂಲಕ ಶಕ್ತಿ ವೃದ್ಧಿಸಿದ್ದ ದಾವಣಗೆರೆ ಮರೆತ ಸಿಎಂ
ನಾಗರಾಜ ಎಸ್.ಬಡದಾಳ್
ಕನ್ನಡಪ್ರಭ ವಾರ್ತೆ ದಾವಣಗೆರೆಉಪ ಚುನಾವಣೆ ಹೊಸ್ತಿಲಲ್ಲಿರುವ ದಾವಣಗೆರೆ ದಕ್ಷಿಣಕ್ಕೆ ₹100 ಕೋಟಿ ಅನುದಾನ, ಚನ್ನಗಿರಿ ತಾಲೂಕಿನ 41 ಕೆರೆ ತುಂಬಿಸುವ ಯೋಜನೆ, ನೇರ ರೈಲ್ವೆ ಮಾರ್ಗಕ್ಕೆ ಭೂ ಸ್ವಾಧೀನ ಮತ್ತು ನಿರ್ಮಾಣಕ್ಕೆ ಅನುದಾನ ಸೇರಿದಂತೆ ಕೆಲವೊಂದಿಷ್ಟು ಯೋಜನೆ, ಕಾರ್ಯಕ್ರಮ ಘೋಷಿಸುವ ಮೂಲಕ ಹಸಿದವರ ಬಾಯಿಗೆ ಒಂದಿಷ್ಟು ನೀರುಣಿಸುವ ಪ್ರಯತ್ನವನ್ನು ರಾಜ್ಯ ಬಜೆಟ್ ಮೂಲಕ ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿ, ಕೈ ತೊಳೆದುಕೊಂಡಿದ್ದಾರೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಸೋಲಿಲ್ಲದ್ದ ಶಾಸಕರಾಗಿದ್ದ ಡಾ.ಶಾಮನೂರು ಶಿವಶಂಕರಪ್ಪ ಇದ್ದಾಗಲಾದರೂ ₹100 ಕೋಟಿ ಅನುದಾನ ನೀಡಿದ್ದರೆ ಸಿಎಂ ಸಿದ್ದರಾಮಯ್ಯ ಕಳಕಳಿಗೆ ಜನರು ಮೆಚ್ಚುತ್ತಿದ್ದರು. ದಾವಣಗೆರೆ ಹಳೇ ಊರು- ಹೊಸ ಊರು ಎಂಬುದಾಗಿ ಅಭಿವೃದ್ಧಿ ವಿಚಾರದಲ್ಲಿ ಉತ್ತರ-ದಕ್ಷಿಣ ಕ್ಷೇತ್ರಗಳಾಗಿವೆ. ಅಂತಹ ಪರಿಸ್ಥಿತಿಯಲ್ಲಿ ಶಾಮನೂರು ಶಿವಶಂಕರಪ್ಪನವರು ಇದ್ದಾಗಲೇ ₹100 ಕೋಟಿ ಅನುದಾನ ಬಿಡುಗಡೆ ಮಾಡಿ, ಪರಿಶಿಷ್ಟರು, ಅಲ್ಪ ಸಂಖ್ಯಾತರು ವಾಸಿಸುವ ಪ್ರದೇಶಗಳ ಅಭಿವೃದ್ಧಿಗೆ ಮುಂದಾಗಿದ್ದರೆ ಸ್ವತಃ ಶಾಮನೂರು ಅವರೇ ಸಿಎಂಗೆ ತಮ್ಮ ಕ್ಷೇತ್ರಕ್ಕೆ ಆಹ್ವಾನಿಸಿ, ಅದ್ಧೂರಿ ಕಾರ್ಯಕ್ರಮ ಮಾಡುತ್ತಿದ್ದರು. ಈಗ ಯಜಮಾನ ಇಲ್ಲದ ಮನೆಯಂತಹ ಪರಿಸ್ಥಿತಿಯಲ್ಲಿ ದಕ್ಷಿಣ ಕ್ಷೇತ್ರವಿದೆ. ಉಪ ಚುನಾವಣೆ ಎದುರು ನೋಡುತ್ತಿದೆ. ಉಪ ಸಮರ ಗಮನದಲ್ಲಿಟ್ಟುಕೊಂಡೇ, ದಾವಣಗೆರೆ ದಕ್ಷಿಣ ಕ್ಷೇತ್ರವನ್ನು ಉಳಿಸಿಕೊಳ್ಳಲು ₹100 ಕೋಟಿ ಅನುದಾನದ ದಾಳವನ್ನು ಸಿದ್ದರಾಮಯ್ಯ ಉರುಳಿಸಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.
ದಾವಣಗೆರೆಯಲ್ಲಿ ಮತ್ಸ್ಯದರ್ಶಿನಿ ಮೀನು ಮಾರಾಟ ಕೇಂದ್ರ ಸ್ಥಾಪಿಸುವುದಾಗಿ, ಹಿಂದುಳಿದ ವರ್ಗಗಳ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿ ನಿಲಯ ನಿರ್ಮಾಣ, ತುಮಕೂರು- ಚಿತ್ರದುರ್ಗ- ದಾವಣಗೆರೆ ನೇರ ರೈಲ್ವೆ ಮಾರ್ಗಗಳಿಗೆ ಭೂ ಸ್ವಾಧೀನ ಹಾಗೂ ನಿರ್ಮಾಣಕ್ಕೆ ಅನುದಾನವನ್ನೂ ಸಿಎಂ ಸಿದ್ದರಾಮಯ್ಯ ತಮ್ಮ ದಾಖಲೆಯ ಬಜೆಟ್‌ನಲ್ಲಿ ಮೀಸಲಿಟ್ಚಿದ್ದಾರೆ. ದಾವಣಗೆರೆ ತಾ. ಮಾಯಕೊಂಡ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಉನ್ನತೀಕರಿಸುವ, ಆನಗೋಡು ಗ್ರಾಮದಲ್ಲಿ ಹೊಸ ಪೊಲೀಸ್ ಠಾಣೆ ಸ್ಥಾಪಿಸುವ ಘೋಷಣೆ ಸಹ ಮಾಡಿದ್ದಾರೆ.
- - -
2, ಐಟಿ ಬಿಟಿ ಪಾರ್ಕ್ ಸ್ಥಾಪನೆ, ಕೈಗಾರಿಕೆಗಳನ್ನು ದಾವಣಗೆರೆಗೆ ನೀಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಇತ್ತ ಗಮನವನ್ನೇ ಹರಿಸಿಲ್ಲ. ಸ್ವಯಂ ಉದ್ಯೋಗಕ್ಕೆ, ಮಹಿಳಾ ಸಬಲೀಕರಣಕ್ಕ, ಯುವಜನರಿಗೆ ಇಲ್ಲಿ ಉದ್ಯೋಗ ಸೃಷ್ಟಿಸುವ ಬಗ್ಗೆ ಸಿಎಂ ಆಲೋಚನೆ ಮಾಡಿಲ್ಲ.
4. ಏಷ್ಯಾದಲ್ಲೇ ಅತೀ ದೊಡ್ಡ ಎರಡನೇ ಕೆರೆ ಸೂಳೆಕೆರೆ, ಸಂತೇಬೆನ್ನೂರಿನ ಪುಷ್ಕರಣಿ, ಗುಜರಾತ್‌ನ ಗೀರ್ ಮಾದರಿಯ ಮೂರು ರೀತಿಯ ಪುಟ್ಟ ಕಾಡನ್ನು ಹೊಂದಿರುವ ಜಗಳೂರು ತಾ. ರಂಗಯ್ಯನ ದುರ್ಗ, ದಾವಣಗೆರೆ ಗಾಜಿನ ಮನೆ, ಆನೆಕೊಂಡ, ಬೇತೂರು, ಜಗಳೂರಿನ ಕೊಡದಗುಡ್ಡ, ಹರಿಹರದ ಶ್ರೀ ಹರಿಹರೇಶ್ವರ ಹೀಗೆ ಪ್ರವಾಸಿ, ಪಣ್ಯ ಕ್ಷೇತ್ರಗಳನ್ನು ರಾಜ್ಯದ ಪ್ರವಾಸೋದ್ಯಮ ನಕ್ಷೆಗೆ ಸೇರಿಸಿ, ಇವುಗಳನ್ನೂ ಪ್ರವಾಸಿ ತಾಣವಾಗಿಸುವ ಸಣ್ಣ ಆಲೋಚನೆಯನ್ನೂ ರಾಜ್ಯ ಸರ್ಕಾರ ಮಾಡದಿರುವುದು ಮತ್ತೊಂದು ದುರ್ದೈವ.
6. ಕೃಷಿ ಮತ್ತು ತೋಟಗಾರಿಕೆ ಕಾಲೇಜು, ಸರ್ಕಾರಿ ವೈದ್ಯಕೀಯ ಕಾಲೇಜು ಎಂಬುದು ಮತ್ತೆ ಅರಣ್ಯ ರೋಧನವಾಗಿ ಉಳಿದಿದೆ ಎಲ್ಲಾ ಇಲ್ಲಗಳ ಮಧ್ಯೆಯೂ ದಾವಣಗೆರೆ ನಗರ, ಜಿಲ್ಲೆಯು ತನ್ನದೇ ಸಾಮರ್ಥ್ಯದ ಮೇಲೆ ಬೆಳೆಯುತ್ತಿದೆ. ದಾವಣಗೆರೆ ಜಿಲ್ಲೆಗೆ ವಿಶೇಷ ಯೋಜನೆ, ಕಾರ್ಯಕ್ರಮ ನೀಡುವ ಕಾಲ ಯಾವಾಗ ಬರುತ್ತದೋ ಎಂಬ ನಿರೀಕ್ಷೆಯಲ್ಲಿದ್ದಾರೆ ಮಧ್ಯ ಕರ್ನಾಟಕದ ಜನತೆ.
- - -(ಫೋಟೋ ಇದೆ.)