ಭರಮಸಮುದ್ರ, ಜಗಳೂರು ಕೆರೆಗಳ ಅಭಿವೃದ್ಧಿಗೆ ₹13 ಕೋಟಿ: ದೇವೇಂದ್ರಪ್ಪ ಭರವಸೆ

KannadaprabhaNewsNetwork |  
Published : Sep 22, 2025, 01:00 AM IST
21 ಜೆ.ಜಿ.ಎಲ್.2) ಜಗಳೂರು ತಾಲ್ಲೂಕು ಭರಮಸಮುದ್ರ ಕೆರೆಗೆ ಭಾನುವಾರ ಶಾಸಕ ಬಿ.ದೇವೇಂದ್ರಪ್ಪ, ಮಾಜಿ ಶಾಸಕ ಎಚ್.ಪಿ.ರಾಜೇಶ್, ವಿನಯ್ ಕುಮಾರ್ ಸೇರಿದಂತೆ ಗಣ್ಯರು ಬಾಗೀನ ಅರ್ಪಿಸಿಸಿದರು. 21 ಜೆ.ಜಿ.ಎಲ್.3) ನಂತರ ಎಲ್ಲಮ್ಮ ದೇವಸ್ಥಾನದ ಬಳಿ ವೇದಿಕೆ ಕಾರ್ಯಕ್ರಮ ಶಾಸಕ ಬಿ.ದೇವೇಂದ್ರಪ್ಪ, ಮಾಜಿ ಶಾಸಕ ಎಚ್.ಪಿ.ರಾಜೇಶ್, ವಿನಯ್ ಕುಮಾರ್ ಸೇರಿದಂತೆ ಗಣ್ಯರು ಉದ್ಘಾಟಿಸಿದರು | Kannada Prabha

ಸಾರಾಂಶ

ಭರಮಸಮುದ್ರ ಕೆರೆ ಅಭಿವೃದ್ಧಿಗೆ ₹3 ಕೋಟಿ, ಜಗಳೂರು ಕೆರೆ ಏರಿ ಮೇಲೆ ಪುಟ್ ಪಾತ್‌ ನಿರ್ಮಾಣ, ವಿದ್ಯುತ್ ಬಲ್ಬ್‌ ಅಳವಡಿಕೆ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ₹10 ಕೋಟಿ ಅನುದಾನ ನೀಡಲಾಗುವುದು ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಜಗಳೂರು

ಭರಮಸಮುದ್ರ ಕೆರೆ ಅಭಿವೃದ್ಧಿಗೆ ₹3 ಕೋಟಿ, ಜಗಳೂರು ಕೆರೆ ಏರಿ ಮೇಲೆ ಪುಟ್ ಪಾತ್‌ ನಿರ್ಮಾಣ, ವಿದ್ಯುತ್ ಬಲ್ಬ್‌ ಅಳವಡಿಕೆ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ₹10 ಕೋಟಿ ಅನುದಾನ ನೀಡಲಾಗುವುದು ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಭರಮಸಮುದ್ರ ಕೆರೆಗೆ ಭಾನುವಾರ ಬಾಗಿನ ಅರ್ಪಿಸಿ, ನಂತರ ಎಲ್ಲಮ್ಮ ದೇವಸ್ಥಾನ ಬಳಿ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತಾಲೂಕಿನಾದ್ಯಂತ ಕೆರೆಗಳಲ್ಲಿ ನೀರು ಭರ್ತಿಯಾಗಿದ್ದು, ರೈತರು ಅಡಕೆ ಬೆಳೆಯತ್ತ ಮುಖಮಾಡಿದ್ದಾರೆ. ಮಲೆನಾಡು ಮೀರಿಸುವ ಕಾಲಸನ್ನಿಹಿತವಾಗಲಿದೆ. ಕೆರೆ ನೀರು ಖಾಲಿಯಾದ ನಂತರ ಮುಂದಿನ ದಿನಗಳಲ್ಲಿ ಹಂತಹಂತವಾಗಿ ಹೂಳೆತ್ತುವ ಕಾಮಗಾರಿಗೆ ಕ್ರಮ ಕೈಗೊಳ್ಳಲಾಗುವುದು. ತಾಲೂಕಿನಾದ್ಯಂತ ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಶಾಲೆಗಳ ಕಟ್ಟಡ ದುರಸ್ತಿಗೆ ₹10 ಕೋಟಿ ಅನುದಾನ ಒದಗಿಸಲಾಗಿದೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪಶು ಆಸ್ಪತ್ರೆ ಕೇಂದ್ರ ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಗ್ರಾಮಸ್ಥರ ಬೇಡಿಕೆಯಂತೆ ಶಾಲಾ ಕೊಠಡಿ ನಿರ್ಮಾಣ, ಪಶು ಆಸ್ಪತ್ರೆಗೆ ಅನುದಾನ ನೀಡುವೆ ಎಂದರು.

ಮಾಜಿ ಶಾಸಕ ಎಚ್.ಪಿ. ರಾಜೇಶ್ ಮಾತನಾಡಿ, ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ, ಸ್ವಾಭಿಮಾನಿ ಬಳಗ ರಾಜ್ಯಾಧ್ಯಕ್ಷ ಜಿ.ಬಿ. ವಿನಯ್ ಕುಮಾರ್ ಮಾತನಾಡಿದರು. ಮುಸ್ಟೂರು ಓಂಕಾರೇಶ್ವರ ಮಠದ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ವಿಕಲಚೇತನರ ರಾಜ್ಯಾಧ್ಯಕ್ಷ ಮಹಾಂತೇಶ್ ಬ್ರಹ್ಮ ಗ್ರಾಮದ ಅಹವಾಲುಗಳನ್ನು ಶಾಸಕರ ಮುಂದಿಟ್ಟರು.

ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಪತ್ನಿ ಇಂದಿರಮ್ಮ, ಜಿಪಂ ಮಾಜಿ ಸದಸ್ಯ ಕೆ.ಪಿ. ಪಾಲಯ್ಯ, ವೀರಶೈವ ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಅಜ್ಜಪ್ಪ ಹನುಮಂತಪುರ ಗ್ರಾಪಂ ಅಧ್ಯಕ್ಷ ಅಶ್ವಿನಿ ಅಂಜಿನಪ್ಪ, ಉಪಾಧ್ಯಕ್ಷ ತಿಪ್ಪೇಸ್ವಾಮಿ ಸದಸ್ಯರಾದ ಕಿರಣ್, ಬಸವರಾಜ್, ಹನುಮಕ್ಕ ಪೆದ್ದಣ್ಣ, ಲಕ್ಷ್ಮೀ ಮಹಾಂತೇಶ್, ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಘ ರಾಜ್ಯಾಧ್ಯಕ್ಷ, ಪತ್ರಕರ್ತರಾದ ಮಹಾಂತೇಶ್ ಬ್ರಹ್ಮ, ಕಾಂಗ್ರೇಸ್ ಮಹಿಳೆ ಘಟಕದ ಅಧ್ಯಕ್ಷೆ ಕಲ್ಪನ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹನುಮಂತ ರೆಡ್ಟಿ, ಸುರೇಶ್, ಪ್ರಹ್ಲಾದ್ , ತಿರುಕಪ್ಪರ ರಾಜಣ್ಣ, ಸೇರಿದಂತೆ ಇತರರು ಹಾಜರಿದ್ದರು.

- - -

-21ಜೆ.ಜಿ.ಎಲ್2.ಜೆಪಿಜಿ:

ಜಗಳೂರು ತಾಲೂಕು ಭರಮಸಮುದ್ರ ಕೆರೆಗೆ ಭಾನುವಾರ ಶಾಸಕ ಬಿ.ದೇವೇಂದ್ರಪ್ಪ, ಮಾಜಿ ಶಾಸಕ ಎಚ್.ಪಿ.ರಾಜೇಶ್, ವಿನಯ್ ಕುಮಾರ್ ಇನ್ನಿತರ ಗಣ್ಯರು ಬಾಗಿನ ಅರ್ಪಿಸಿದರು.

PREV

Recommended Stories

ಸಿಬ್ಬಂದಿ ಕೊರತೆ ಬೆಂಗಳೂರು ನಗರದಲ್ಲಿ ಜಾತಿ ಗಣತಿ ವಿಳಂಬ
ಸಮೀಕ್ಷೆ ಹೆಸರಿನಲ್ಲಿ ಹಿಂದೂ ಸಮಾಜ ಒಡೆಯುವ ಹುನ್ನಾರ