- ಕರ್ಣಾಟಕ ಬ್ಯಾಂಕ್ ಗ್ರಾಹಕ ಮೃತ ಎಲ್.ನಾಗರಾಜ್ ಕುಟುಂಬಕ್ಕೆ ಚೆಕ್ ವಿತರಣೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ ನಗರದ ಪಿ.ಬಿ. ರಸ್ತೆ ಶಾಖೆಯ ಕರ್ಣಾಟಕ ಬ್ಯಾಂಕ್‌ನಲ್ಲಿ ತನ್ನ ವೈಯಕ್ತಿಕ ಖಾತೆ ತೆರೆಯುವಾಗ ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕರು ಕೇವಲ ₹369 ಮಾತ್ರ ತುಂಬಿ ಯುನಿವರ್ಸಲ್ ಸೋಂಪೋ ವಿಮೆ ಮಾಡಿಸಲು ತಿಳಿಸಿದಂತೆ ಎಲ್.ನಾಗರಾಜ್ (45) ಎನ್ನುವವರು ಈ ಹಣವನ್ನು ಪಾವತಿ ಮಾಡಿ ವಿಮಾ ಪಾಲಿಸಿ ಮಾಡಿಸಿದ್ದರು. ಆಕಸ್ಮಿಕವಾಗಿ ನಾಗರಾಜ್ ಅಪಘಾತದಲ್ಲಿ ನಿಧನ ಹೊಂದಿದ್ದರಿಂದ ಅವರ ಕುಟುಂಬಕ್ಕೆ ₹10,15,000 ಮೊತ್ತದ ಚೆಕ್ ಸೌಲಭ್ಯ ದೊರೆತಿದ್ದು, ಚಿಕ್ಕ ಹಣದ ಹೂಡಿಕೆ ಈಗ ಕುಟುಂಬಕ್ಕೆ ದೊಡ್ಡ ಆಸರೆಯಾದಂತಾಗಿದೆ.
ಬ್ಯಾಂಕ್ ವ್ಯವಸ್ಥಾಪಕ ರಾಕೇಶ್ ಶಾನಬೋಗ್ ಎಂ.ಎಸ್. ಈ ಸಂದರ್ಭ ಮಾತನಾಡಿ, ನಾವು ಗ್ರಾಹಕರಿಗೆ ಸವಲತ್ತುಗಳನ್ನು ನೀಡಲು ಪ್ರಯತ್ನಿಸುತ್ತಿದ್ದೇವೆ. ಜೊತೆಗೆ ಇಂತಹ ಸಂದರ್ಭ ಅತಿ ಚಿಕ್ಕ ಹಣದ ಹೂಡಿಕೆ ಕುಟುಂಬಕ್ಕೆ ಅತಿ ದೊಡ್ಡ ಆಸರೆಯಾಗುತ್ತದೆ. ನಮ್ಮ ಬ್ಯಾಂಕಿನಲ್ಲಿ ಹೆಚ್ಚು ಹೆಚ್ಚು ಖಾತೆಗಳನ್ನು ತೆರೆದು ವ್ಯವಹರಿಸಿರಿ, ಈ ಹಣ ಸಂಕಷ್ಟದಲ್ಲಿ ಕುಟುಂಬಕ್ಕೆ ಆಸರೆಯಾಗಬಹುದು ಎಂದು ಸಲಹೆ ನೀಡಿದರು.
ಈ ಸಂದರ್ಭ ವ್ಯವಸ್ಥಾಪಕ ಎಂ.ಎಸ್. ರಾಕೇಶ್ ಶಾನಬೋಗ್, ಸಹಾಯಕ ವ್ಯವಸ್ಥಾಪಕ ಶಾಖಾ ಎಂ.ಶಮಂತ್, ಸಹಾಯಕ ಮಹಾ ಪ್ರಬಂಧಕ ಎಚ್.ಎ. ನಾಗರಾಜ ಇತರರು ಉಪಸ್ಥಿತರಿದ್ದರು.- - - -20ಕೆಡಿವಿಜಿ36:
ದಾವಣಗೆರೆಯ ಕರ್ಣಾಟಕ ಬ್ಯಾಂಕ್ ಖಾತೆದಾರ ಎಲ್.ನಾಗರಾಜ ಅಪಘಾತದಿಂದ ಮರಣ ಹೊಂದಿದ್ದು, ಅವರ ಕುಟುಂಬದವರಿಗೆ ಬ್ಯಾಂಕ್‌ನಿಂದ ₹10,15,000 ಮೊತ್ತದ ವಿಮಾ ಹಣದ ಚೆಕ್ ವಿತರಿಸಲಾಯಿತು.