ಗ್ಯಾರಂಟಿ ಯೋಜನೆಯಡಿ ದ.ಕ. ಜಿಲ್ಲೆಗೆ 4 ಸಾವಿರ ಕೋಟಿ ರು. ವ್ಯಯ: ಭರತ್‌

KannadaprabhaNewsNetwork |  
Published : Nov 24, 2026, 01:30 AM IST
ಸಂಸ್ಥೆಯ ಜಿಲ್ಲಾ ಶಿಕ್ಷಕರ ಸಂಯೋಜಕಿ ಶರಾವತೀ ರವಿನಾರಾಯಣ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು  | Kannada Prabha

ಸಾರಾಂಶ

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 2023ರ ಜೂನ್‌ನಿಂದ 2026ರ ಅಕ್ಟೋಬರ್‌ವರೆಗೆ ಪಂಚ ಗ್ಯಾರಂಟಿ ಯೋಜನೆಯಡಿ ದ.ಕ. ಜಿಲ್ಲೆಗೆ ನಾಲ್ಕು ಸಾವಿರ ಕೋಟಿ ರು.ಗೂ ಅಧಿಕ ಮೊತ್ತ ವ್ಯಯಿಸಲಾಗಿದೆ ಎಂದು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ದ.ಕ. ಜಿಲ್ಲಾಧ್ಯಕ್ಷ ಭರತ್‌ ಮುಂಡೋಡಿ ತಿಳಿಸಿದರು.

ಮಂಗಳೂರು : ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 2023ರ ಜೂನ್‌ನಿಂದ 2026ರ ಅಕ್ಟೋಬರ್‌ವರೆಗೆ ಪಂಚ ಗ್ಯಾರಂಟಿ ಯೋಜನೆಯಡಿ ದ.ಕ. ಜಿಲ್ಲೆಗೆ ನಾಲ್ಕು ಸಾವಿರ ಕೋಟಿ ರು.ಗೂ ಅಧಿಕ ಮೊತ್ತ ವ್ಯಯಿಸಲಾಗಿದೆ ಎಂದು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ದ.ಕ. ಜಿಲ್ಲಾಧ್ಯಕ್ಷ ಭರತ್‌ ಮುಂಡೋಡಿ ತಿಳಿಸಿದರು.

ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈವರೆಗೆ (2023ರ ಜೂ.ನಿಂದ 2026ರ ಅ.) ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ 17,40,35,631 ಫಲಾನುಭವಿಗಳು ಯೋಜನೆಯ ಪ್ರಯೋಜನ ಪಡೆದಿದ್ದು, 6,04,06,70,776 ರು. ವ್ಯಯಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ 18,72,204 ಫಲಾನುಭವಿಗಳು ಪ್ರಯೋಜನ ಪಡೆದಿದ್ದು, 2,94,15,00,000 ರು. ವ್ಯಯಿಸಲಾಗಿದೆ. ಯುವನಿಧಿ ಯೋಜನೆಯಡಿ 8,172 ಮಂದಿ ಫಲಾನುಭವಿಗಳು 23,21,02,500 ರು. ಮೊತ್ತದ ಪ್ರಯೋಜನ ಪಡೆದಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ 3,82,922 ಫಲಾನುಭವಿಗಳಿದ್ದು, 22,65,51,76,000 ರು. ಮೊತ್ತ ವ್ಯಯಿಸಲಾಗಿದೆ. ಗೃಹಜ್ಯೋತಿ ಯೋಜನೆಯಡಿ 6,75,724 ಫಲಾನುಭವಿಗಳಿದ್ದು, 13,59,95,92,000 ರು. ಮೊತ್ತ ವ್ಯಯಿಸಲಾಗಿದೆ. ಒಟ್ಟು ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಯಡಿ 17,69,74,653 ಫಲಾನುಭವಿಗಳು 45,37,90,41,276 ರು. ಮೊತ್ತದ ಪ್ರಯೋಜನ ಪಡೆದಿದ್ದಾರೆ ಎಂದರು.

ಮೃತರ ಖಾತೆಗೆ ಜಮೆಯಾದ ಹಣ ಶೇ.70 ವಾಪಸ್‌:

ಗೃಹಲಕ್ಷ್ಮಿ ಯೋಜನೆಯಡಿ ದ.ಕ. ಜಿಲ್ಲೆಯಲ್ಲಿ ಮೃತರಾದವರ ಖಾತೆಗೆ ಜಮೆಯಾಗಿದ್ದ ಹಣದಲ್ಲಿ ಶೇ.70ರಷ್ಟು ಮಂದಿಯ ಖಾತೆಗೆ ಜಮೆಯಾದ ಹಣವನ್ನು ಅವರ ಮನೆಯರಲ್ಲಿ ಮಾಹಿತಿ ನೀಡಿ ವಾಪಸ್‌ ಪಡೆಯಲಾಗಿದೆ. ಉಳಿಕೆಯಾಗಿರುವರಲ್ಲಿ ಮರಣಪತ್ರ ಪಡೆದು ಹಣ ವಾಪಸ್‌ ಪಡೆಯಲು ಕ್ರಮ ವಹಿಸಲಾಗುತ್ತಿದೆ. ಈ ಪ್ರಕರಣದಲ್ಲಿ ಮೃತರ ಮರಣ ಪತ್ರವನ್ನು ನೇರವಾಗಿ ಸರ್ಕಾರ ಪಡೆಯಲು ಕ್ರಮಕ್ಕೆ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದರು.ಪ್ರಮುಖರಾದ ಉಮಾನಾಥ ಶೆಟ್ಟಿ, ರಫೀಕ್‌, ಪಿ.ಎಸ್.ಗಂಗಾಧರ, ಆಲ್ವಿನ್, ಜಯಂತಿ ಪೂಜಾರಿ, ಶೇಖರ್‌ ಕುಕ್ಕೆಟ್ಟಿ, ನಾರಾಯಣ ನಾಯ್ಕ, ಸುರೇಖಾ ಚಂದ್ರಹಾಸ್‌, ಆಲಿಸ್ಕಾರ್‌, ರಂಜಿತ್‌ ಮೇನಾಲ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೇಕೋಡು ಪ್ರಜಾಸೇವಾ ಆಂದೋಲನ
17ನೇ ಮಣಿಪಾಲ ಕಾರ್ಡಿಯಾಲಜಿ ಅಪ್‌ಡೇಟ್ ಸಂಪನ್ನ