೪.೨೫ ಕೋಟಿ ರು. ಕಾಮಗಾರಿಗೆ ಅನುಮೋದನೆ

KannadaprabhaNewsNetwork |  
Published : Jun 07, 2025, 12:09 AM ISTUpdated : Jun 07, 2025, 12:10 AM IST
೪.೨೫ ಕೋಟಿ ಕಾಮಗಾರಿಗಳಿಗೆ ಅನುಮೋದನೆ | Kannada Prabha

ಸಾರಾಂಶ

ಚಾಮರಾಜನಗರ ನಗರಸಭೆಯ ಸಭಾಂಗಣದಲ್ಲಿ ನಗರಸಭಾ ಅಧ್ಯಕ್ಷ ಸರೇಶ್ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆ ನಡೆಯಿತು. ಉಪಾಧ್ಯಕ್ಷೆ ಮಮತಾ, ಪೌರಾಯುಕ್ತ ರಾಮದಾಸ್ ಇದ್ದಾರೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನಗರಸಭೆಯ ಸಭಾಂಗಣದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ೧೫ನೇ ಹಣಕಾಸು ಆಯೋಗದ ಅನುದಾನದಡಿ ಹಂಚಿಕೆಯಾಗಿರುವ ೪.೨೫. ಕೋಟಿ ತಯಾರಿಸಿರುವ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಯಿತು.

ನಗರಸಭಾ ಅಧ್ಯಕ್ಷ ಸರೇಶ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒಪ್ಪಿಗೆ ಸೂಚಿಸಿ ಅನುಮೋದನೆ ನೀಡಿದರು, ನಿರ್ಬಂಧಿತ ಅನುದಾನ: (ಘನತ್ಯಾಜ್ಯ ನಿರ್ವಹಣೆ/ಕುಡಿಯುವ ನೀರು) ಹಂಚಿಕೆಯಾದ ಒಟ್ಟು ಮೊತ್ತದ ಶೇ.೩೦ರಷ್ಟು, ₹೧೨೭.೫೦ ಲಕ್ಷಗಳು. ಘನತ್ಯಾಜ್ಯ ನಿರ್ವಹಣೆ-ಶೇ.೩೦ ನೈರ್ಮಲ್ಯ (ಘನತ್ಯಾಜ್ಯ ಮತ್ತು ತ್ಯಾಜ್ಯ ನೀರಿನ ನಿರ್ವಹಣೆ ಒಳಗೊಂಡಂತೆ) ಮತ್ತು ಘನತ್ಯಾಜ್ಯ ನಿರ್ವಹಣೆ ಹಾಗೂ ವಸತಿ ನಗರ ವ್ಯವಹಾರಗಳ ಮಂತ್ರಾಲಯದಿಂದ ಅಭಿವೃದ್ಧಿ ಪಡಿಸಿರುವ ಸ್ಟಾರ್ ರೇಟಿಂಗ್‌ಗಳ ಸಾಧನೆ ಶೇ.೩೦, ₹೧೨೭.೫೦ ಲಕ್ಷ, ಘನತ್ಯಾಜ್ಯ ವಸ್ತು ನಿರ್ವಹಣಾ ಘಟಕಕ್ಕೆ ಗಾಳಿಪುರ ಕಡೆಯಿಂದ ಹೋಗುವ ರಸ್ತೆಯನ್ನು ಟಿ.ಎಂ.ಐ ಬ್ಯಾಂಕ್ ಸರ್ಕಲ್‌ನಿಂದ ಹೊಸ ಹೆಲ್ತ್‌ಕೇರ್‌ ಆಸ್ಪತ್ರೆವರೆಗೆ ರಸ್ತೆ ಅಭಿವೃದ್ಧಿ ಪಡಿಸುವುದು.

ಘನತ್ಯಾಜ್ಯ ವಸ್ತು ನಿರ್ವಹಣಾ ಘಟಕಕ್ಕೆ ಗಾಳಿಪುರ ಕಡೆಯಿಂದ ಹೋಗುವ ರಸ್ತೆಯನ್ನು ಕರು ಮಾರಿಯಮ್ಮ ದೇವಸ್ಥಾನದಿಂದ ಹೊಸ ಗ್ಯಾಲಕ್ಷಿ ಶಾಲೆವರೆಗೆ ರಸ್ತೆ ಅಭಿವೃದ್ಧಿ, ಘನತ್ಯಾಜ್ಯ ವಸ್ತು ನಿರ್ವಹಣಾ ಘಟಕದ ಒಳಭಾಗದಲ್ಲಿ ಬೋರ್ ವೆಲ್ ಕೊರೆದು ಪೈಪ್‌ಲೈನ್ ಆಳವಡಿಸುವುದು. ಮಿನಿ ನೀರು ಸರಬರಾಜು ಘಟಕ ನಿರ್ಮಾಣ ಮಾಡುವುದು. ನಗರಸಭಾ ವ್ಯಾಪ್ತಿಯಲ್ಲಿ ದೊಡ್ಡ ಮಳೆ ನೀರು ಚರಂಡಿಗಳಲ್ಲಿ ಹೂಳು ತೆಗೆಯುವುದು ಸೇರಿದಂತೆ ಹಲವಾರು ಕಾಮಗಾರಿಗಳಿಗೆ ಅನುಮೋದನೆ ನೀಡಲಾಯಿತು.

ಅನಿರ್ಬಂಧಿತ ಅನುದಾನ: ಹಂಚಿಕೆಯಾದ ಒಟ್ಟು ಮೊತ್ತ ಶೇ.೪೦, ₹೧೭೦ ಲಕ್ಷಒಳಚರಂಡಿ ವ್ಯವಸ್ಥೆ, ರಸ್ತೆ, ಸೇತುವೆ ಮತ್ತು ಪಾದಚಾರಿ ಮಾರ್ಗಗಳು, ಮಳೆ ನೀರು ಚರಂಡಿ, ಬೀದಿ ದೀಪ, ಸ್ಮಶಾನ ಚಿತಾಗಾರ, ವಿದ್ಯುತ್ ಚಿತಗಾರ, ಉದ್ಯಾನವನಗಳ ಅಭಿವ್ಥದ್ದಿಯ ಕಾಮಗಾರಿಗಳಿಗೆ ಸಭೆ ಅನುಮೋದನೆ ನೀಡಿತು.ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯರು ಈಗಾಗಲೇ ನಡೆಯುತ್ತಿರುವ ನಗೋರೋತ್ಥಾನ ಕಾಮಗಾರಿಗಳು ಅಪೂರ್ಣಗೊಂಡಿದ್ದು ತಕ್ಷಣ ಈ ಬಗ್ಗೆ ಕ್ರಮಕೈಗೊಳ್ಳಬೇಕು. ಅದೇ ರೀತಿ ೪೨೫ ಲಕ್ಷ ಕಾಮಗಾರಿಗಳು ಶೀಘ್ರವಾಗಿ ಪ್ರಾರಂಭಿಸಿ ಮುಗಿಸಬೇಕು, ಮುಂದಿನ ತಿಂಗಳು ಚಾಮರಾಜೇಶ್ವರ ರಥೋತ್ಸವ ಇರುವುದರಿಂದ ದೇವಸ್ಥಾನದ ಸುತ್ತ ಮುತ್ತ ಹಾಗೂ ರಥದ ಬೀದಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಬೇಗ ಮುಗಿಸಬೇಕೆಂದು ಒತ್ತಾಯಿಸಿದರು. ಅಧ್ಯಕ್ಷ ಸುರೇಶ್ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ವಿಶೇಷ ಸಭೆಯಲ್ಲಿ ಉಪಾಧ್ಯಕ್ಷೆ ಮಮತಾ, ಪೌರಾಯುಕ್ತ ರಾಮದಾಸ್, ಸದಸ್ಯರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು : ನಗರದ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ-ಎಲ್ಲೆಲ್ಲಿ ?
ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌