44.41ಲಕ್ಷ ರು. ಉಳಿತಾಯದ ಆಯವ್ಯಯ ಮಂಡನೆ

KannadaprabhaNewsNetwork |  
Published : Mar 31, 2026, 01:30 AM IST
ಫೋಟೋ 30ಪಿವಿಡಿ4ಪಾವಗಡ,ಇಲ್ಲಿನ ಪುರಸಭೆಯ 2026-27ನೇ ಸಾಲಿನ ಬಜೆಟ್‌ನ್ನು ಆಡಳಿತಾಧಿಕಾರಿ ಹಾಗೂ ಉಪವಿಭಾಗಧಿಕಾರಿ ಗುಟೂರು ಶಿವಪ್ಪ ಮಂಡಿಸಿದ್ದು ಮುಖ್ಯಾಧಿಕಾರಿ ಜಾಫರ್‌ ಷರೀಷ್‌ ಇದ್ದರು. | Kannada Prabha

ಸಾರಾಂಶ

ಪ್ರಸಕ್ತ 2026-27ನೇ ಸಾಲಿಗೆ 44.41ಲಕ್ಷ ರು. ಉಳಿತಾಯದ ಆಯವ್ಯಯ ಪುರಸಭೆ ಆಡಳಿತಾಧಿಕಾರಿ ಹಾಗೂ ಮಧುಗಿರಿ ಉಪವಿಭಾಗಧಿಕಾರಿ ಗುಟೂರು ಶಿವಪ್ಪ ಮಂಡಿಸಿದರು.

ಕನ್ನಡಪ್ರಭ ವಾರ್ತೆ ಪಾವಗಡ

ಪ್ರಸಕ್ತ 2026-27ನೇ ಸಾಲಿಗೆ 44.41ಲಕ್ಷ ರು. ಉಳಿತಾಯದ ಆಯವ್ಯಯ ಪುರಸಭೆ ಆಡಳಿತಾಧಿಕಾರಿ ಹಾಗೂ ಮಧುಗಿರಿ ಉಪವಿಭಾಗಧಿಕಾರಿ ಗುಟೂರು ಶಿವಪ್ಪ ಮಂಡಿಸಿದರು. ಪ್ರಸಕ್ತ ಸಾಲಿಗೆ ಎಸಿ ಅಧ್ಯಕ್ಷತೆಯಲ್ಲಿ ಪುರಸಭೆಯ ಬಜೆಟ್‌ ಮಂಡನೆ ಸಭೆ ನಡೆದಿದ್ದು, ಪುರಸಭೆ ವ್ಯಾಪ್ತಿಯಲ್ಲಿ ನಾಗರಿಕರಿಗೆ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಗೆ ಬೇಕಾದ ಖರ್ಚು ವೆಚ್ಚಗಳನ್ನು ಲೆಕ್ಕಹಾಕಿ ಎಲ್ಲಾ ಮೂಲಗಳಿಂದ ಒಟ್ಟು 777.92 ಲಕ್ಷ ರು.ಗಳ ಆದಾಯ ನಿರೀಕ್ಷಿಸಲಾಗಿದೆ. ಆಸ್ತಿ ತೆರಿಗೆ 230ಲಕ್ಷದಲ್ಲಿ ಶುಲ್ಕ 151 ಲಕ್ಷ, ಕಟ್ಟಡಗಳ ಬಾಡಿಗೆ 270 ಲಕ್ಷ, ಲೇಔಟ್ ಅಭಿವೃದ್ಧಿ ಶುಲ್ಕವಾಗಿ 30 ಲಕ್ಷ, ಕಂದಾಯ ಶಾಖೆಯಿಂದ 13ಲಕ್ಷ, ಇತರೆ 38ಲಕ್ಷ ಆದಾಯಗಳು, ಶೌಚಾಲಯ ಬಾಡಿಗೆ 3.5ಲಕ್ಷ, ಖಾತೆ ಬದಲಾವಣೆ ಶುಲ್ಕ 6 ಲಕ್ಷ, ಕಟ್ಟಡ ಪರವಾನಿಗೆ ಶುಲ್ಕ 5ಲಕ್ಷ, ಬಸ್ ನಿಲ್ದಾಣದ ಶುಲ್ಕ6.10ಲಕ್ಷ ವಾರ್ಷಿಕ ಒಟ್ಟು 777.92 ಆದಾಯವಾಗಲಿದೆ ಎಂದು ಅಂದಾಜಿಸಲಾಗಿದೆ ಎಂದರು.

ಪತ್ರಕರ್ತರಿಗೆ ಆರೋಗ್ಯ ವಿಮೆ: 5 ಲಕ್ಷ ಸ್ವಚ್ಛತಾ ನಿರ್ವಹಣೆಯ ಚಾಲಕರ ವೇತನ 61 ಲಕ್ಷ ರು. ನೀರು ಸರಬರಾಜು ನಿರ್ವಹಣೆಗೆ 67 ಲಕ್ಷ, ನೀರು ಸಾಮಾಗ್ರಿಗಾಗಿ 20 ಲಕ್ಷ, ಪಂಗ್ ಮೋಟಾರ್ ದುರಸ್ತಿಗಾಗಿ 15ಲಕ್ಷ, ವಿದ್ಯುತ್‌ ಕಂಬಗಳ ಸ್ಥಳಾಂತರಕ್ಕಾಗಿ, 15ಲಕ್ಷ, ಪೈಪ್ ಲೈನ್, ಚರಂಡಿ, ರಸ್ತೆ ದುರಸ್ತಿಗಾಗಿ 20 ಲಕ್ಷ, ಕಂದಾಯ ಇಲಾಖೆ ನಿರ್ವಹಣೆಗೆ 11 ಲಕ್ಷ, ಆರೋಗ್ಯ ಇಲಾಖೆ ನಿರ್ವಹಣೆಗೆ 110 ಲಕ್ಷ, ಆಡಳಿತ ವಿಭಾಗದಲ್ಲಿ 36 ಲಕ್ಷ ವೆಚ್ಚ ದಾಸ್ತಾನು ಶಾಖೆಯಲ್ಲಿ 8 ಲಕ್ಷ ಸರ್ಕಾರದ ಇತರೆ ವಂತಿಕೆಗಳು ಮತ್ತು ಕರಗಳ ವೆಚ್ಚ 35ಲಕ್ಷ ಹಾಗೂ ಸಾಮನ್ಯ ಇತರೆ ವೆಚ್ಚಗಳು ಸೇರಿದಂತೆ ಒಟ್ಟು 733.51ಲಕ್ಷ ರು ವೆಚ್ಚವಾಗಲಿದ್ದು 44.41ಲಕ್ಷ ಉಳಿತಾಯವಾಲಿದೆ ಎಂದು ಅಂದಾಜಿಸಿ ಬಜೆಟ್‌ ಮಂಡಿಸಲಾಗಿದೆ ಎಂದರು. ಇದೇ ವೇಳೆ ಪುರಸಭೆಯ ಮುಖ್ಯಾಧಿಕಾರಿ ಜಾಫರ್ ಷರೀಫ್‌, ಹಿರಿಯ ಆರೋಗ್ಯ ನಿರೀಕ್ಷಕ ಶಂಷುದ್ದೀನ್, ಎಂಜಿನಿಯರ್‌ ಯಂಜೇಶ್‌ ಬಾಬು,ಕಂದಾಯ ಅಧಿಕಾರಿ ಶಾಂತಕುಮಾರ್‌,ಲೆಕ್ಕಾಧಿಕಾರಿ ಹರೀಶ್‌ ಹಾಗೂ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೃಹಬಳಕೆ ಅಡುಗೆ ಅನಿಲಕ್ಕೆ ಭಾರೀ ಡಿಮ್ಯಾಂಡ್...!
ಡಾ.ಜೆ.ಪಾಪೇಗೌಡರಿಗೆ ಎಂ.ಶಿವಲಿಂಗಯ್ಯ ಸಮಾಜಸೇವಾ ಪ್ರಶಸ್ತಿ