ಸುಗ್ಗಿಕಟ್ಟೆ ಅಭಿವೃದ್ಧಿಗೆ 80 ಲಕ್ಷ ರು.: ಡಾ.ಮಂತರ್‌ ಗೌಡ

KannadaprabhaNewsNetwork |  
Published : Mar 16, 2026, 01:45 AM IST
ತಾಲೂಕಿನ ಸುಗ್ಗಿಕಟ್ಟೆಗಳ ಅಭಿವೃದ್ಧಿಗೆ ರೂ. ೮೦ ಲಕ್ಷಗಳ ಅನುದಾನ-ಶಾಸಕ ಡಾ.ಮಂಥರ್‌ ಗೌಡ | Kannada Prabha

ಸಾರಾಂಶ

ತಾಲೂಕಿನ ಸುಗ್ಗಿಕಟ್ಟೆಗಳ ಅಭಿವೃದ್ಧಿಗೆ ರು. 80 ಲಕ್ಷಗಳ ಅನುದಾನ ಕಲ್ಪಿಸಲಾಗಿದೆ ಎಂದು ಶಾಸಕ ಡಾ. ಮಂತರ್ ಗೌಡ ಹೇಳಿದರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ತಾಲೂಕಿನ ಸುಗ್ಗಿಕಟ್ಟೆಗಳ ಅಭಿವೃದ್ಧಿಗೆ ರು. 80 ಲಕ್ಷಗಳ ಅನುದಾನ ಕಲ್ಪಿಸಲಾಗಿದೆ ಎಂದು ಶಾಸಕ ಡಾ. ಮಂತರ್ ಗೌಡ ಹೇಳಿದರು.ತಾಲೂಕಿನ ಯಡೂರು ಗ್ರಾಮದ ಶ್ರೀ ಸುಬ್ಬಮ್ಮ ದೇವಿ ಸುಗ್ಗಿಕಟ್ಟೆಯಲ್ಲಿ 8 ಗ್ರಾಮಗಳ ಸುಗ್ಗಿಕಟ್ಟೆಗಳ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ತಾಲೂಕಿನ ಹಲವು ಗ್ರಾಮಗಳಲ್ಲಿ ಸುಗ್ಗಿಕಟ್ಟೆಗಳನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ಮೂಲಭೂತ ಸೌಕರ್ಯಗಳ ಕಲ್ಪಿಸಬೇಕಿದೆ. ಮೊದಲ ಹಂತದಲ್ಲಿ ಯಡೂರು, ಹಾನಗಲ್ ಶೆಟ್ಟಳ್ಳಿ, ತಾಕೇರಿ, ತಲ್ತಾರೆಶೆಟ್ಟಳ್ಳಿ, ನಗರಳ್ಳಿ, ಕುಮಾರಳ್ಳಿ, ತೋಳೂರುಶೆಟ್ಟಳ್ಳಿ, ಚೌಡ್ಲು ಗ್ರಾಮಗಳ ಸುಗ್ಗಿಕಟ್ಟೆಗಳಿಗೆ ತಲಾ ರು. 10 ಲಕ್ಷ ಗಳನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇತರ ಗ್ರಾಮಗಳಿಗೂ ನೀಡಲಾಗುವುದು ಎಂದು ಹೇಳಿದರು.ಮುಖ್ಯಮಂತ್ರಿಗಳು ತಮ್ಮ ವಿಶೇಷ ಅನುದಾನದಲ್ಲಿ ರು. 50 ಕೋಟಿಗಳನ್ನು ನನ್ನ ಕ್ಷೇತ್ರಕ್ಕೆ ನೀಡಿದ್ದಾರೆ. ಸುಗ್ಗಿಕಟ್ಟೆ ಅಭಿವೃದ್ಧಿಗೆ 1 ಕೋಟಿ ರು. ಗಳಷ್ಟು ಹಣವನ್ನು ನೀಡಿದ್ದೇನೆ. ಸೋಮವಾರಪೇಟೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಭವನ ಕಾಮಗಾರಿ ಪೂರ್ಣಗೊಳಿಸಲು 2 ಕೋಟಿ ರು. ಅನುದಾನವನ್ನು ಕಲ್ಪಿಸಲಾಗಿದೆ. ಇನ್ನು ವಿವಿಧ ಕಾಮಗಾರಿಗಳಿಗೆ ಅನುದಾನ ಕಲ್ಪಿಸಲಾಗಿದೆ ಎಂದು ಹೇಳಿದರು. ಗ್ರಾಮೀಣ ಭಾಗಗಳ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ರಸ್ತೆ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಹಲವು ಗ್ರಾಮೀಣ ರಸ್ತೆಗಳಿಗೆ ಡಾಮರೀಕರಣ ಹಾಗೂ ಕಾಂಕ್ರೀಟಿಕರಣ ಈಗಾಗಲೇ ಪ್ರಗತಿಯಲ್ಲಿದ್ದು, ಜನರ ಸಂಚಾರ ಸುಗಮವಾಗಲು ಕ್ರಮ ಕೈಗೊಳ್ಳಲಾಗುತ್ತಿದೆ.ಸರ್ಕಾರದಲ್ಲಿ ಹಣವಿಲ್ಲ ಎಂದು ವಿರೋಧ ಪಕ್ಷಗಳ ನಾಯಕರು ಟೀಕೆ, ಪ್ರತಿಭಟನೆ ಮಾಡುತ್ತಿದ್ದಾರೆ. ಕಳೆದ ಎರಡೂವರೆ ವರ್ಷಗಳಿಂದ ಅಭಿವೃದ್ಧಿ ಮೂಲಕ ಉತ್ತರ ನೀಡುತ್ತಿದ್ದೇವೆ. ಮುಂದಿನ ದಿನದಲ್ಲಿ ಕ್ಷೇತ್ರಕ್ಕೆ ಇನ್ನು ಹೆಚ್ಚಿನ ಅನುದಾನ ತಂದು ಎಲ್ಲಾ ಗ್ರಾಮಗಳ ರಸ್ತೆಗಳನ್ನು ಅಭಿವೃದ್ಧಿಪಡಿಸಿ ತೋರಿಸುತ್ತೇವೆ ಎಂದು ಭರವಸೆಯ ಮಾತನಾಡಿದರು. ವಿರೋಧ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ರಾಜಕೀಯ ಮಾಡಲು ಗಮನ ಹರಿಸಿದರೆ ಒಳ್ಳೆಯದು ಎಂದು ಕಿವಿಮಾತು ಹೇಳಿದರು.ಯಡೂರು ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಮೋಹನ್ ಕುಮಾರ್, ತೋಳೂರುಶೆಟ್ಟಳ್ಳಿ ಮಂಡಳಿ ಅಧ್ಯಕ್ಷ ರಾಜಗೋಪಾಲ್, ನಗರಳ್ಳಿ ಗ್ರಾಮದ ಅಧ್ಯಕ್ಷ ಜಗದೀಶ್, ಹಾನಗಲ್ಲು ಗ್ರಾಮದ ಅಧ್ಯಕ್ಷ ಉಲ್ಲಾಸ್, ಶಾಂತಳ್ಳಿ ಗ್ರಾಮದ ಉಪಾಧ್ಯಕ್ಷ ಸುರೇಶ್, ಕುಮಾರಳ್ಳಿ ಗ್ರಾಮದ ಅಧ್ಯಕ್ಷ ದೇಶ್‌ರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಲೋಕೇಶ್ ಕುಮಾರ್, ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್, ಪ್ರಮುಖರಾದ ಸಿ.ಆರ್. ಸತೀಶ್, ಬಸವರಾಜ್, ಯಡೂರು ನಾಗರಾಜ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಆಧಾರ್ ಸೀಡಿಂಗ್ - ಮ್ಯಾಪಿಂಗ್ ಕಡ್ಡಾಯ: ಶಶಿಧರ್ ಕೋಸಂಬೆ
ಅನೈತಿಕ ಚಟುವಟಿಕೆಗಳ ಬಗ್ಗೆ ನಿಗಾ: ಡಾ.ಮಂತರ್ ಗೌಡ ಸೂಚನೆ