ಆರ್‌ಎಸ್‌ಬಿ ಮಹಿಳಾ ವೇದಿಕೆಯಿಂದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ

KannadaprabhaNewsNetwork |  
Published : Aug 06, 2026, 02:45 AM IST
05ಆರ್‌ಎಸ್‌ಬಿ | Kannada Prabha

ಸಾರಾಂಶ

ಇಲ್ಲಿನ ರಾಜಾಪುರ ಸಾರಸ್ವತ ಮಹಿಳಾ ವೇದಿಕೆ ವತಿಯಿಂದ ಆರ್‌ಎಸ್‌ಬಿ ಸಭಾಭವನದಲ್ಲಿ ಜರುಗಿದ ವಾರ್ಷಿಕ ಮಹಾಸಭೆ, 2025 - 26 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಮತ್ತು ಆರ್ಥಿಕವಾಗಿ. ಹಿಂದುಳಿದ 53 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಅಶಕ್ತ ಮತ್ತು ಅಸಹಾಯಕ ಇಬ್ಬರು ಮಹಿಳೆಯರಿಗೆ ಸಹಾಯಧನ ನೀಡಲಾಯಿತು.

ಮಣಿಪಾಲ: ಇಲ್ಲಿನ ರಾಜಾಪುರ ಸಾರಸ್ವತ ಮಹಿಳಾ ವೇದಿಕೆ ವತಿಯಿಂದ ಆರ್‌ಎಸ್‌ಬಿ ಸಭಾಭವನದಲ್ಲಿ ಜರುಗಿದ ವಾರ್ಷಿಕ ಮಹಾಸಭೆ, 2025 - 26 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಮತ್ತು ಆರ್ಥಿಕವಾಗಿ. ಹಿಂದುಳಿದ 53 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಅಶಕ್ತ ಮತ್ತು ಅಸಹಾಯಕ ಇಬ್ಬರು ಮಹಿಳೆಯರಿಗೆ ಸಹಾಯಧನ ನೀಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ವೇದಿಕೆಯ ಅಧ್ಯಕ್ಷೆ ರೂಪಾ ನಾಯಕ್ ವಹಿಸಿದ್ದರು. ಹಿರಿಯ ಸದಸ್ಯೆಯರಾದ ರವಿಜಾ ನಾಯಕ್, ಸುಮಾ ಎಸ್. ನಾಯಕ್ ವೇದಿಕೆಯಲ್ಲಿದ್ದರು. ಕಾರ್ಯದರ್ಶಿ ಚಂದ್ರಿಕಾ ನಾಯಕ್ ವಾರ್ಷಿಕ ವರದಿ ಓದಿದರು. ಕೋಶಾಧಿಕಾರಿ ಪುಷ್ಪಾ ಪ್ರಭು ವಾರ್ಷಿಕ ಆಯವ್ಯಯ ಮಂಡಿಸಿದರು. ವೇದಿಕೆಯ ಸ್ಥಾಪಕ ಅಧಕ್ಷೆ ಸುನೀತಾ ಎನ್. ನಾಯಕ್ ವೇದಿಕೆ ಸಾಧನೆಗಳ ಬಗ್ಗೆ ಮಾತನಾಡಿದರು. ಮೋಹಿನಿ ಎನ್. ನಾಯಕ್ ದಾನಿಗಳ ಹೆಸರು ವಾಚಿಸಿದರು. ಭಾರತಿ ನಾಯಕ್, ಪ್ರೀತಿ ಕಾಮತ್ ಪ್ರಾರ್ಥಿಸಿದರು. ಉಪಾಧ್ಯಕ್ಷೆ ಉಜ್ವಲಾ ನಾಯಕ್ ಸ್ವಾಗತಿಸಿದರು. ಡಾ. ವಿದ್ಯಾಲತಾ ನಾಯಕ್ ಧನ್ಯವಾದವಿತ್ತರು. ಜಯಶ್ರೀ ಎಂ.ನಾಯಕ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೂಡುಬಿದಿರೆಯಲ್ಲಿ ಶ್ರೀ ಶಾರದಾ ನಾಟ್ಯಾಲಯದಿಂದ ಆಟಿಡೊಂಜಿ ದಿನ
ಮಂಗಳೂರಿನಲ್ಲಿ ಬಿಪಿಸಿಎಲ್‌ನ ‘ಭಾರತ್‌ಗ್ಯಾಸ್ ಲೈಟ್ ಜಿಪ್’ ಶುಭಾರಂಭ