ಆರ್‌ಎಸ್ಎಸ್‌ನ ಚಟುವಟಿಕೆಗಳನ್ನು ನಿಷೇಧಿಸುವಂತೆ ಸಚಿವ ಪ್ರಿಯಾಂಕ ಖರ್ಗೆ ಪತ್ರ ಬರೆದಿರುವುದು ಖಂಡನೀಯ. ಆರ್‌ಎಸ್ಎಸ್ ಸಂಘಟನೆಗೆ 100 ವರ್ಷ ತುಂಬಿದ್ದು, ಸಂಘದ ಕಾರ್ಯಚಟುವಟಿಕೆಯನ್ನು ದೇಶವೇ ಮೆಚ್ಚಿದೆ ಎಂದು ಉಡುಪಿ ಮಾಜಿ ಶಾಸಕ ರಘುಪತಿ ಭಟ್ಟ್ ಹೇಳಿದ್ದಾರೆ.
ಉಡುಪಿ: ಆರ್‌ಎಸ್ಎಸ್ ಬಗ್ಗೆ ಭಯ ಇದೆ. ಆರ್‌ಎಸ್ಎಸ್ ಎಂದೂ ಕೂಡ ರಾಷ್ಟ್ರ ವಿರೋಧಿ, ಧರ್ಮವಿರೋಧಿ ಕೆಲಸ ಬೋಧನೆ ಮಾಡಿಲ್ಲ. ಆರ್‌ಎಸ್ಎಸ್ ಬೆಳೆದಷ್ಟು ಭಾರತಕ್ಕೆ ಒಳ್ಳೆಯದಾಗುತ್ತದೆ. ಆದರೆ ಕಾಂಗ್ರೆಸಿನ ಕೆಲವರಿಗೆ ಆರ್‌ಎಸ್ಎಸ್ ಅಂದ್ರೇ ಭಯವಿದೆ ಎಂದು ಮಾಜಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಆರ್‌ಎಸ್ಎಸ್‌ನ ಚಟುವಟಿಕೆಗಳನ್ನು ನಿಷೇಧಿಸುವಂತೆ ಸಚಿವ ಪ್ರಿಯಾಂಕ ಖರ್ಗೆ ಪತ್ರ ಬರೆದಿರುವುದು ಖಂಡನೀಯ. ಆರ್‌ಎಸ್ಎಸ್ ಸಂಘಟನೆಗೆ 100 ವರ್ಷ ತುಂಬಿದ್ದು, ಸಂಘದ ಕಾರ್ಯಚಟುವಟಿಕೆಯನ್ನು ದೇಶವೇ ಮೆಚ್ಚಿದೆ. ನೆಹರು ಕಾಲದಲ್ಲಿ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಆರ್‌ಎಸ್ಎಸ್ ಪಥಸಂಚಲ ಮಾಡಿದೆ. ಭಾರತವನ್ನು ಪ್ರೀತಿಸುವವರೆಲ್ಲರೂ ಹಿಂದುಗಳು ಎನ್ನುವುದು ಆರ್‌ಎಸ್ಎಸ್‌ನ ತತ್ವವಾಗಿದೆ. ಆರ್‌ಎಸ್ಎಸ್‌ಗೆ ಹಿಂದೂ, ಕ್ರೈಸ್ತ, ಮುಸಲ್ಮಾನ ಎಂಬ ಭೇದಭಾವ ಇಲ್ಲ. ವಾಜಪೇಯಿ, ಮೋದಿ ಆರ್‌ಎಸ್ಎಸ್‌ನಿಂದಲೇ ಬಂದವರು, ಅವರ ಕೆಲಸವನ್ನು ದೇಶವೇ ಮೆಚ್ಚಿದೆ ಎಂದರು.
ಡಿಕೆಶಿ, ಕರಿ ಟೋಪಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅದು ಕರಿ ಟೋಪಿಯಲ್ಲ, ಅದು ಆರ್‌ಎಸ್ಎಸ್‌ನ ಸಮವಸ್ತ್ರದ ಒಂದು ಭಾಗ. ಅದನ್ನು ಕರಿ ಟೋಪಿ ಎಂದು ಕರೆಯುವ ಸ್ವಭಾವ ಒಳ್ಳೆಯದಲ್ಲ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.