ರಟ್ಟೀಹಳ್ಳಿ: ಆರ್.ಎಸ್.ಎಸ್. ಕಳೆದ 100 ವರ್ಷಗಳಿಂದ ಹಿಂದೂಗಳ ಒಗ್ಗಟ್ಟಿಗಾಗಿ, ಧರ್ಮ ರಕ್ಷಣೆಗಾಗಿ, ಗೋ ರಕ್ಷಣೆಗಾಗಿ, ಒಂದಾಗಲಿ ಎಂಬ ಹೋರಾಟದ ಪರಿಶ್ರಮ ಇನ್ನೂ ಸಿಕ್ಕಿಲ್ಲ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಶ್ರೀರಾಮ್ ಸೇನೆ ಸಂಸ್ಥಾಪಕ ಪ್ರಮೊದ ಮುತಾಲಿಕ್ ಕಳವಳ ವ್ಯಕ್ತಪಡಿಸಿದರು.
ಇತ್ತೀಚೆಗೆ ನೀಟ್ ಹೋರಾಟ ಒಂದು ಸಣ್ಣ ಜಿರಳೆ ಹೆಸರು ಇಟ್ಟುಕೊಂಡು ನೀಟ್ ಪರೀಕ್ಷೆ ನೆಪ ಮಾಡಿಕೊಂಡು ದೇಶ ವಿರೋಧಿ ಉಮರ ಖಾಲೀದ್ ಬೆಂಬಲಿಗರು, ತುಕುಡೆ ಗ್ಯಾಂಗ್‍ಗಳು ಭಾಗಿಯಾಗಿದ್ದು, ವಿದ್ಯಾರ್ಥಿಗಳ ಹೋರಾಟಕ್ಕೂ ಅವರಿಗೆ ಏನು ಸಂಬಂಧ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಜಿರಳೆಗಳ ಹೋರಾಟಕ್ಕೆ ಪಾಕಿಸ್ತಾನ, ಬಾಂಗ್ಲಾ, ಕೆನಡಾ, ಟರ್ಕಿ, ಇರಾನ್ ಸೇರಿದಂತೆ ಇನ್ನೂ ಅನೇಕ ದೇಶಗಳು ಸಣ್ಣ ಜಿರಳೆ ಪಕ್ಷಕ್ಕೆ ಬೆಂಬಲ ಮಾಡುವ ಮೂಲಕ ದೇಶವನ್ನು ಅಭದ್ರಗೊಳಿಸುವ ಹುನ್ನಾರ ಜಗಜ್ಜಾಹೀರ ಆಗಿದೆ. ಇನ್ನಾದರೂ ಹಿಂದೂಗಳು ಒಗ್ಗಟ್ಟಾಗದಿದ್ದರೆ ನಮಗಿರುವ ಏಕೈಕ ಭಾರತವನ್ನು ಬಿಟ್ಟು ಪಲಾಯನ ಮಾಡುವಂತ ಪರಿಸ್ಥಿತಿ ಮುಂಬರುವ ದಿನಗಳಲ್ಲಿ ನಿರ್ಮಾಣವಾಗಲಿದೆ. ಆದ್ದರಿಂದ ಬಹು ಸಂಖ್ಯಾತ ಹಿಂದೂಗಳು ಒಗ್ಗಟ್ಟಾಗಿ ಜಾಗೃತರಾಗಬೇಕಿದೆ ಎಂದರು.ಪಟ್ಟಣದಲ್ಲಿ ಬಡ ಹಿಂದೂವಿನ ಕೊಲೆಯಾದರೂ ಹಿಂದೂ ಸಮಾಜ ತಲೆ ತಗ್ಗಿಸಿಕೊಂಡು ಓಡಾಡುತ್ತಿದೆ. ಯಾಕೆ ನಿಮ್ಮ ರಕ್ತ ಕುದಿಯಲ್ಲವೇ? ನಿಮ್ಮಲ್ಲಿ ಆಕ್ರೋಶ ವ್ಯಕ್ತಪಡಿಸುವ ಕನಿಷ್ಠ ಶಕ್ತಿಯು ಇಲ್ಲವೇ? ಮತಾಂಧ ಶಕ್ತಿಗಳಿಗೆ ಹೆದರಿ ಜೀವಕ್ಕೆ ಭಯ ಪಟ್ಟು ಬದುಕಿದರೆ ಮುಂಬರುವ ದಿನಗಳಲ್ಲಿ ಈಗ ಶಿವಾಜಿರಾವ್ ಕೊಲೆಯಾಗಿದ್ದಾನೆ. ಮುಂದೆ ನಮ್ಮ ಮನೆ ಬಾಗಿಲಿಗೂ ಬರಲಿದೆ. ಒಂದಿಲ್ಲೊಂದು ದೀನ ಬೀದಿ ಕಾಳಗ ಆಗುವುದಿದೆ ಎಂದು ಎಚ್ಚರಿಸಿದರು.