ರಡ್ಡಿ ಸಮಾಜದ ಭಾವನೆಗಳಿಗೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ-ಶಾಸಕ ಪಾಟೀಲ

KannadaprabhaNewsNetwork |  
Published : Aug 18, 2025, 12:00 AM IST
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ರೋಣ ಶಾಸಕ ಜಿ.ಎಸ್.ಪಾಟೀಲ ಮಾತನಾಡಿದರು.  | Kannada Prabha

ಸಾರಾಂಶ

ರಾಜ್ಯದಲ್ಲಿ ಕೆಲವರು ರಡ್ಡಿ ಸಮಾಜದ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಧರ್ಮದ ಕಾಲಂನಲ್ಲಿ ಹಿಂದೂ ಹಾಗೂ ಉಪಜಾತಿ ಕಾಲಂನಲ್ಲಿ ರಡ್ಡಿ ಅಂತ ನಮೂದಿಸುವಂತೆ ಹೇಳುತ್ತಿದ್ದಾರೆ. ಇದನ್ನು ತಕ್ಷಣವೇ ನಿಲ್ಲಿಸಬೇಕು. ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ ರಡ್ಡಿ ಹಾಗೂ ಉಪಜಾತಿ ಕಾಲಂನಲ್ಲಿ ರಡ್ಡಿ ಅಂತ ನಮೂದಿಸಬೇಕು ಎಂದು ವೀರಶೈವ ಲಿಂಗಾಯತ ರಡ್ಡಿ ಸಮಾಜದ ರಾಜ್ಯ ಗೌರವಾಧ್ಯಕ್ಷ, ರೋಣ ಶಾಸಕ ಜಿ. ಎಸ್. ಪಾಟೀಲ ಹೇಳಿದರು.

ಗದಗ: ರಾಜ್ಯದಲ್ಲಿ ಕೆಲವರು ರಡ್ಡಿ ಸಮಾಜದ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಧರ್ಮದ ಕಾಲಂನಲ್ಲಿ ಹಿಂದೂ ಹಾಗೂ ಉಪಜಾತಿ ಕಾಲಂನಲ್ಲಿ ರಡ್ಡಿ ಅಂತ ನಮೂದಿಸುವಂತೆ ಹೇಳುತ್ತಿದ್ದಾರೆ. ಇದನ್ನು ತಕ್ಷಣವೇ ನಿಲ್ಲಿಸಬೇಕು. ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ ರಡ್ಡಿ ಹಾಗೂ ಉಪಜಾತಿ ಕಾಲಂನಲ್ಲಿ ರಡ್ಡಿ ಅಂತ ನಮೂದಿಸಬೇಕು ಎಂದು ವೀರಶೈವ ಲಿಂಗಾಯತ ರಡ್ಡಿ ಸಮಾಜದ ರಾಜ್ಯ ಗೌರವಾಧ್ಯಕ್ಷ, ರೋಣ ಶಾಸಕ ಜಿ. ಎಸ್. ಪಾಟೀಲ ಹೇಳಿದರು.

ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ನೂತನ ಜನಗಣತಿ ಪ್ರಾರಂಭವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ವೀರಶೈವ ಲಿಂಗಾಯತ ರಡ್ಡಿ ಸಮಾಜದ ಸದಸ್ಯತ್ವ ನೋಂದಣಿಯನ್ನು ಅತೀ ಶೀಘ್ರದಲ್ಲಿ ಮಾಡುವಂತೆ ಕರೆ ನೀಡಲಾಗುವುದು. ರಡ್ಡಿ ಸಮಾಜ ಪ್ರಾಚೀನ ಕಾಲದಿಂದ ಇಷ್ಟಲಿಂಗ ಪೂಜೆ ಮಾಡಿಕೊಂಡು ಬಂದಿದೆ. ನಮ್ಮದೇ ಆದ ವಿಧಿ-ವಿಧಾನದ ಸರಣಿ ಹೊಂದಿದ್ದೇವೆ ಎಂದರು.

ಸಮಾಜದ ರಾಜ್ಯಾಧ್ಯಕ್ಷ ಶೇಖರಗೌಡ ಮಾಲೀಪಾಟೀಲ ಮಾತನಾಡಿ, ರಡ್ಡಿ ಸಮಾಜ ಸ್ವಾಮೀಜಿಗಳು ಕಳೆದ ಎರಡು ವಾರಗಳಿಂದ ಹಿಂದೂ ರಡ್ಡಿ ಎಂದು ನಮೂದಿಸಿ ಅಂತ ರಾಜ್ಯಾದ್ಯಂತ ಪ್ರವಾಸ ಮಾಡಿ ಹೇಳಿಕೆ ನೀಡುತ್ತಿದ್ದಾರೆ. ಆದರೆ, ನಾವು ನಮ್ಮ ಸಂಸ್ಕೃತಿ ಬಿಡಬಾರದು. ನಾವು ವೀರಶೈವ ರಡ್ಡಿ ಸಮಾಜದಲ್ಲಿ ಮುಂದುವರಿಯೋಣ. ಸಮೀಕ್ಷೆ ಪ್ರಕಾರ ವೀರಶೈವ ಲಿಂಗಾಯತ ರಡ್ಡಿ ಸಮಾಜದ ಜನಸಂಖ್ಯೆ ಕೇವಲ 70 ಲಕ್ಷ ಜನಸಂಖ್ಯೆ ಬಂದಿದೆ. ಆದರೆ 1 ಕೋಟಿಗೂ ಅಧಿಕ ಜನಸಂಖ್ಯೆ ರಾಜ್ಯದಲ್ಲಿದ್ದೇವೆ. ರಾಜ್ಯದಲ್ಲಿ ಮತ್ತೊಮ್ಮೆ ಸಮೀಕ್ಷೆ ಮಾಡಿ ನಮ್ಮ ನಿಜವಾದ ಜನಸಂಖ್ಯೆಯನ್ನು ಕಂಡುಹಿಡಿಯುತ್ತೇವೆ. ನಮ್ಮ ಸಮುದಾಯ ಅನೇಕ ಪಂಗಡಗಳಾಗಿ ಒಡೆದು ಹೋಗಿದೆ. ಇದು ಸರ್ಕಾರದ ತಪ್ಪು ಅಲ್ಲ. ರಾಜಕೀಯ ಶಕ್ತಿಗಾಗಿ ನಾವೆಲ್ಲರೂ ಒಂದಾಗಬೇಕು. ಇಲ್ಲದಿದ್ದರೆ ನಮ್ಮ ಮುಂದಿನ ಪೀಳಿಗೆ ನಮಗೆ ಶಾಪ ಹಾಕುವ ಸಮಯ ಬರುತ್ತದೆ. ಈ ಹಿನ್ನೆಲೆಯಲ್ಲಿ ನಾವು ಎಚ್ಚೆತ್ತುಕೊಳ್ಳಬೇಕಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶೇಖರಗೌಡ ಮಾಲಿಪಾಟೀಲ, ಡಾ. ಕೋಟ್ರೇಶ ಬಿದರಿ, ರೇವಣಸಿದ್ದಪ್ಪ, ಡಾ. ವಾಮದೇವ, ರಘುನಾಥಗೌಡ ಕೆಂಪಲಿಂಗನಗೌಡ್ರ, ಕುಮಾರ ಗಡಗಿ, ಎಸ್. ಎಸ್. ಪಾಟೀಲ, ಫಕ್ಕಿರಪ್ಪ ಕಟ್ಟಿಮನಿ, ಶರಣಗೌಡ ಪಾಟೀಲ ಸರ್ಜಾಪೂರ, ಜಗದೀಶ, ಸುರೇಶ ಶಿರೋಳ, ಲೋಕೇಶ್, ಬಿ.ವ್ಹಿ. ಲೋಹಿತ್, ಅನಿಲಕುಮಾರ ತೆಗ್ಗಿನಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ನಮ್ಮ ಜನಾಂಗ ತಮ್ಮ ಶಾಲಾ ದಾಖಲಾತಿಗಳಲ್ಲಿ ವೀರಶೈವ ರಡ್ಡಿ, ಲಿಂಗಾಯತ ರಡ್ಡಿ ದಾಖಲಾತಿ ಮಾಡಿಕೊಂಡಿದ್ದಾರೆ. ಆದರೆ, ಸರ್ಕಾರದಿಂದ ಕೊಡುವ ಜಾತಿ ಪ್ರಮಾಣ ಪತ್ರಗಳು ವೀರಶೈವ ಲಿಂಗಾಯತ ಇರುವುದರಿಂದ ನಮ್ಮ ಸಮುದಾಯದ ಇತ್ತೀಚಿನ ಪೀಳಿಗೆ ರಡ್ಡಿ ಹೆಸರಿನ ಇನ್ನೊಂದು ಪಂಥದ ಹಾಗೂ ಇನ್ನೊಂದು ಪ್ರವರ್ಗದ ಜಾತಿ ಪ್ರಮಾಣ ಪತ್ರಗಳನ್ನು ಪಡೆಯುತ್ತಿರುವುದರಿಂದ ಅವರ ಶೈಕ್ಷಣಿಕ ಮತ್ತು ಉದ್ಯೋಗಕ್ಕೆ ಕಂಟಕ ಆಗುತ್ತಿದೆ ಎಂದು ಮೈಸೂರು ಜಿಲ್ಲಾಧ್ಯಕ್ಷ ಡಾ. ವಾಮದೇವ ಹೇಳಿದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌