ಸೈನಿಕರ ಶ್ರೇಯೋಭಿವೃದ್ಧಿಗಾಗಿ 100 ಜನ ವೇದ ವಿದ್ವಾಂಸರಿಂದ ರುದ್ರ ಘನ ಪಾರಾಯಣ

KannadaprabhaNewsNetwork |  
Published : Jun 16, 2025, 01:45 AM IST
15ಕೆಎಂಎನ್ ಡಿ26,27 | Kannada Prabha

ಸಾರಾಂಶ

ಭಾರತೀಯ ಸೈನಿಕರ ಶ್ರೇಯೋಭಿವೃದ್ಧಿ, ದೇಶದ ಹಿತ ಹಾಗೂ ಲೋಕ ಕಲ್ಯಾಣಕ್ಕಾಗಿ 100 ಜನ ವೇದ ವಿಧ್ವಾಂಸರಿಂದ ಮದ್ದೂರು ಪಟ್ಟಣದ ಪುರಾಣ ಪ್ರಸಿದ್ಧ ಶ್ರೀಕಾಶಿ ವಿಶ್ವನಾಥಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ರುದ್ರ ಘನ ಪಾರಾಯಣ ಹಾಗೂ ಕಾಶಿ ವಿಶ್ವನಾಥನಿಗೆ ಮಹಾ ರುದ್ರಾಭಿಷೇಕ ಅದ್ಧೂರಿಯಾಗಿ ನೆರವೇರಿತು.

ಕನ್ನಡಪ್ರಭ ವಾರ್ತೆ ಮದ್ದೂರು

ಭಾರತೀಯ ಸೈನಿಕರ ಶ್ರೇಯೋಭಿವೃದ್ಧಿ, ದೇಶದ ಹಿತ ಹಾಗೂ ಲೋಕ ಕಲ್ಯಾಣಕ್ಕಾಗಿ 100 ಜನ ವೇದ ವಿಧ್ವಾಂಸರಿಂದ ಪಟ್ಟಣದ ಪುರಾಣ ಪ್ರಸಿದ್ಧ ಶ್ರೀಕಾಶಿ ವಿಶ್ವನಾಥಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ರುದ್ರ ಘನ ಪಾರಾಯಣ ಹಾಗೂ ಕಾಶಿ ವಿಶ್ವನಾಥನಿಗೆ ಮಹಾ ರುದ್ರಾಭಿಷೇಕ ಅದ್ಧೂರಿಯಾಗಿ ನೆರವೇರಿತು.

ಬೆಳಗ್ಗೆ 9ರಿಂದ ದೇಗುದಲ್ಲಿ ರುದ್ರ ಘನ ಪಾರಾಯಣ, ಮಹಾ ರುದ್ರಾಭಿಷೇಕ, ಹಾಲಿನ ಅಭಿಷೇಕ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.

ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿ, ದೇವರನ್ನು ಪೂಜಿಸುವುದರಿಂದ ಜೀವನದಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ನೆಲಸುತ್ತದೆ. ದೇವಾಲಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ ಎಂದರು.

ದೇವರ ದಯೆಯಿಂದ ಎಲ್ಲರಿಗೂ ಒಳ್ಳೆಯದಾಗಲಿ, ದೇಗುಲದಲ್ಲಿ ಭಾರತೀಯ ಸೈನಿಕರ ಶ್ರೇಯೋಭಿವೃದ್ಧಿ, ದೇಶದ ಹಿತ ಹಾಗೂ ಲೋಕ ಕಲ್ಯಾಣಕ್ಕಾಗಿ 100 ಜನ ವೇದ ವಿದ್ವಾಂಸದರಿಂದ ರುದ್ರ ಘನ ಪಾರಾಯಣ ಹಾಗೂ ಕಾಶಿ ವಿಶ್ವನಾಥನಿಗೆ ಮಹಾ ರುದ್ರಾಭಿಷೇಕ ಮಾಡಿಸುತ್ತಿರುವುದು ಮೆಚ್ಚುಗೆಯ ವಿಷಯ ಎಂದು ಹರ್ಷ ವ್ಯಕ್ತಪಡಿಸಿದರು.

ಪುರೋಹಿತ ಡಾ.ಎಂ.ಎಸ್.ರಾಘವೇಂದ್ರ ರಾವ್ ಮಾತನಾಡಿ, ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಲೋಕ ಕಲ್ಯಾಣಕ್ಕಾಗಿ 100 ಜನ ವಿದ್ವಾಂಸರಿಂದ ರುದ್ರ ಘನ ಪಾರಾಯಣ ಮಾಡಿಸುವ ಮೂಲಕ ಇತಿಹಾಸ ನಿರ್ಮಾಣವಾಗಿದೆ ಎಂದರು.

ಸರ್ವರಿಗೂ ಒಳ್ಳೆಯದಾಗಲಿ, ಎಲ್ಲೆಡೆ ಶಾಂತಿ, ನೆಮ್ಮದಿ ನೆಲಸಲಿ ಎಂಬ ಉದ್ದೇಶದಿಂದ ಈ ಧಾರ್ಮಿಕ ಕಾರ್ಯಕ್ರಮವನ್ನು ಬೆ೦ಗಳೂರಿನ ಶ್ರೀನಿವಾಸಪುರ ಓ೦ಕಾರಶ್ರಮ ಮಹಾ ಸ೦ಸ್ಥಾನದ ಡಾ.ಆಚಾರ್ಯ ಮಹಾಮ೦ಡಲೇಶ್ವರ ಶ್ರೀ ಮಧುಸೂಧನಾನ೦ದಪುರಿ ಸ್ವಾಮಿಗಳು ನೇತೃತ್ವದಲ್ಲಿ ಅದ್ಧೂರಿಯಾಗಿ ನೆರವೇರಿಸಲಾಯಿತು ಎಂದರು.

ಪಟ್ಣಣದ ಸೇರಿದಂತೆ ತಾಲೂಕಿನಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ಭಾಗವಹಿಸಿ ದೇಶದ ಸೈನಿಕರ ಕಲ್ಯಾಣಕ್ಕೆ ನಡೆಯುತ್ತಿರುವ ಪೂಜಾ ಕೈಂಕರ್ಯಕ್ಕೆ ಶುಭ ಹಾರೈಸಿದರು. ಈ ವೇಳೆ ಆಧುನಿಕ ಶ್ರವಣಕುಮಾರ (ಕೃಷ್ಣಕುಮಾರ), ಹಿಂದು ಸಂಘಟನೆ ಮುಖಂಡ ಕೆ.ಟಿ.ನವೀನ್‌ಕುಮಾರ್, ಶಂಕರ ಸಭಾ ಅಧ್ಯಕ್ಷ ಗುರುಸ್ವಾಮಿ, ತಾಲೂಕು ಬ್ರಾಹ್ಮಣ ಮಹಾ ಸಭಾದ ಕಾರ್ಯದರ್ಶಿ ಸತ್ಯನಾರಾಯಣರಾವ್, ಸಹಾಯ ಅರ್ಚಕ ನರಸಿಂಹಪ್ರಸಾದ್, ಸಾಹಿತಿ ಟಿ.ಎಸ್.ಪ್ರಭಾಕರ್‌ರಾವ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''