ದೇವದುರ್ಗ: ಸರ್ವರಿಗೂ ರುದ್ರಭೂಮಿ ಪವಿತ್ರ ಸ್ಥಳವಾಗಿದ್ದು, ಇಲ್ಲಿ ಸಸಿ ನೆಡುವದು ಶ್ಲಾಘನೀಯ ಸೇವೆ. ಈ ಪರಂಪರೆ ನಿರಂತರವಾಗಿ ನಡೆಯಬೇಕು ಹಾಗೇ ಗಿಡ-ಮರಗಳ ಸಂರಕ್ಷಣೆಗೆ ಹೆಚ್ಚು ಆದ್ಯತೆ ನೀಡಬೇಕೆಂದು ಸಾಹಿತಿ ಅಮರೇಶ ಬಲ್ಲಿದವ ತಿಳಿಸಿದರು.
ರುದ್ರಭೂಮಿಯಲ್ಲಿ ಆಸನಗಳು, ಕುಡಿವ ನೀರು, ಸ್ವಚ್ಛತೆಯಂತಹ ಕಾರ್ಯಗಳಿಗೆ ದಾನ ಮಡುವರೆಲ್ಲರ ಬದುಕು ಸಾರ್ಥಕ. ಈ ಬೆಳವಣಗೆ ತಾಲೂಕಿನ ಎಲ್ಲಾ ಗ್ರಾಮ, ಪಟ್ಟಣಗಳಲ್ಲಿ ರುದ್ರಭೂಮಿಗಳ ನಿರ್ಮಾಣವಾಗಬೇಕೆಂದು ಅಭಿಪ್ರಾಯ ಪಟ್ಟರು.
ಈ ವೇಳೆ ಉದ್ಯಮಿ ಭಾನುಪ್ರಕಾಶ ಖೆಣೇದ್, ಜಿಪಂ ಮಾಜಿ ಅಧ್ಯಕ್ಷ ರಾಮಣ್ಣ ಇರಬಗೇರಾ, ಪುರಸಭೆ ಮಾಜಿ ಅಧ್ಯಕ್ಷ ಚಂದಪ್ಪ ಅಕ್ಕರಕಿ, ನಿವೃತ್ತ ಸೈನಿಕ ಪಂಪಣ್ಣ ಅಕ್ಕರಕಿ, ಉಪನ್ಯಾಸಕ ಸುಭಾಶ್ಚಂದ್ರ ಪಾಟೀಲ್, ಬಸವರಾಜ ಮಡಿವಾಳರ, ಸಾಮಾಜಿಕ ಅರಣ್ಯ ಅಧಿಕಾರಿ ಬಸವರಾಜ ಹಾಗೂ ಇತರರು ಪಾಲ್ಗೊಂಡಿದ್ದರು.