ದೊಡ್ಡಬಳ್ಳಾಪುರ: ರುಮಾಲೆ ಚನ್ನಬಸವಯ್ಯ ಒಬ್ಬ ಅಭಿಜಾತ ಚಿತ್ರ ಕಲಾವಿದರಾಗಿದ್ದು ಅವರ ಕಲಾಕೃತಿಗಳು ವಿಶಿಷ್ಟ ಸೃಜನಶೀಲ ಅಭಿವ್ಯಕ್ತಿಯಾಗಿದೆ. ಅವುಗಳ ಅನುಕರಣೆ ಅಥವಾ ನಕಲು ಕಷ್ಟ ಸಾಧ್ಯ ಎಂದು ಚಿತ್ರಕಲಾಕಾರ ಆರ್.ರಂಗಸ್ವಾಮಿ ಅಭಿಪ್ರಾಯಪಟ್ಟರು.
ಚಿತ್ರಕಲಾವಿದ ಶಿವಕುಮಾರ್ ಮಾತನಾಡಿ, ಕಲಾವಿದನಾಗಿ ನಮ್ಮ ದೊಡ್ಡಬಳ್ಳಾಪುರದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ರುಮಾಲೆ ಅವರನ್ನು ಪಡೆದದ್ದು ನಮ್ಮ ಪುಣ್ಯ. ಅವರ ಒಂದೊಂದು ಕಲಾಕೃತಿಗಳು ಇಂದು ಕೋಟ್ಯಂತರ ರುಪಾಯಿ ಬೆಲೆ ಬಾಳುತ್ತವೆ. ತನ್ನ ಕಲೆಯಿಂದಲೇ ಅವರು ಜೀವಂತವಾಗಿದ್ದಾರೆ ಎಂದರು.
ಆರ್.ಎಲ್.ಜಾಲಪ್ಪ ಸಮೂಹ ಸಂಸ್ಥೆಯ ಜೆ.ಆರ್.ರಾಕೇಶ್ ಮಾತನಾಡಿ, ರುಮಾಲೆ ಕಲಾವಂತಿಕೆಯ ವಿರಾಟ್ ಪರಿಚಯ ಹಾಗೂ ಪ್ರಾಮುಖ್ಯತೆ ತಿಳಿದದ್ದೇ ಈ ಕಾರ್ಯಕ್ರಮ ಆಯೋಜನೆ ಮಾಡಲು ಡಿ.ಆರ್.ನಾಗರಾಜ್ ಬಳಗದ ಗೆಳೆಯರು ಸಹಕಾರ ಕೇಳಿದಾಗ. ಇದರ ಭಾಗವಾಗಿದ್ದಕ್ಕೆ ಬಹಳ ಸಂತಸವಿದೆ ಎಂದರು.ಹಿರಿಯ ಕಲಾವಿದ ಅಪ್ಪಾ ಸಾಹೇಬ್ ಗಾಣಿಗಾರ್ ಮಾತನಾಡಿ, ರುಮಾಲೆ ಚನ್ನಬಸವಯ್ಯ ''''''''ಭಾರತದ ವ್ಯಾನ್ ಗಾಗ್'''''''' ಎಂದೇ ಕರೆಯಲಾಗುತ್ತದೆ. ಅವರ ಜನ್ಮಶತಾಬ್ದಿಯ ಸಮಯದಲ್ಲಿ ವಿವಧ ಕಲಾವಿದರನ್ನು ಕರೆಸಿ ''''''''ವರ್ಣ ಮೈತ್ರಿ'''''''' ಎಂಬ ಕಾರ್ಯಕ್ರಮ ಆಯೋಜಿಸಿದ್ದು ನೆನಪಿನಂಗಳದಲ್ಲಿ ಉಳಿದಿದೆ ಎಂದರು.
ಮಾಜಿ ಪುರಸಭಾ ಸದಸ್ಯ ರುಮಾಲೆ ನಾಗರಾಜ್ ಮಾತನಾಡಿ, ಚನ್ನಬಸವಯ್ಯ ಯೋಗಿಯಾಗಿ ಕಲೆಗಾಗಿ ಜೀವಿಸಿದರು. ಹಾಗಾಗಿಯೇ ಅವರನ್ನು ಕಲಾ ತಪಸ್ವಿ ಎಂದು ಕರೆಯುತ್ತಾರೆ. ಕೇವಲ ಕಲಾವಿದರಾಗಿ ಮಾತ್ರವಲ್ಲದೆ ಸ್ವಾತಂತ್ರ್ಯ ಸೇನಾನಿಯಾಗಿ, ಗಾಂಧೀಜಿ ಅವರ ಅನುಯಾಯಿಯಾಗಿ, ವಿಧಾನ ಪರಿಷತ್ ಸದಸ್ಯರಾಗಿ ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು. ಬಹುಮಾನಿತರು:ದೀಕ್ಷಿತಾಶ್ರೀ-ಕೊಂಗಾಡಿಯಪ್ಪ ಪಿಯು ಕಾಲೇಜು(ಪ್ರಥಮ), ಎಸ್.ಪವನ್‌ಕುಮಾರ್-ಸರ್ಕಾರಿ ಪಿಯು ಕಾಲೇಜು(ದ್ವಿತೀಯ), ಶಿವಾನಿ-ಕೊಂಗಾಡಿಯಪ್ಪ ಪಿ.ಯು ಕಾಲೇಜು(ತೃತೀಯ), ಗಾನಶ್ರೀ-ಲಾವಣ್ಯ ಪಿಯು ಕಾಲೇಜು ಮತ್ತು ಐಶ್ವರ್ಯ-ಕೊಂಗಾಡಿಯಪ್ಪ ಪಿಯು ಕಾಲೇಜು(ಸಮಾಧಾನಕರ) ಬಹುಮಾನಗಳನ್ನು ಪಡೆದರು.
ಕಾಯ್ರಕ್ರಮದಲ್ಲಿ ಸ್ಪರ್ಧೆಯ ದೀಪಾ ನರೇಂದ್ರ ಹಾಗೂ ಪವನ್ ಧನಂಜಯ್, ಡಿ.ಆರ್.ನಾಗರಾಜ್ ಬಳಗದ ಚಂದ್ರಶೇಖರಯ್ಯ, ಕಾರ್ಯಕ್ರಮ ಸಂಚಾಲಕ ಹೇಮಂತ್ ಲಿಂಗಪ್ಪ, ಕಾರ್ಯದರ್ಶಿ ದಯಾನಂದ್ ಗೌಡ, ವಿವಿಧ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು, ರುಮಾಲೆ ಕುಟುಂಬದ ಸದಸ್ಯರು ಹಾಜರಿದ್ದರು.24ಕೆಡಿಬಿಪಿ1-
ದೊಡ್ಡಬಳ್ಳಾಪುರದಲ್ಲಿ ರುಮಾಲೆ ಚನ್ನಬಸವಯ್ಯ ಅವರ ಚಿತ್ರಕಲಾಕೃತಿಗಳ ಪ್ರದರ್ಶನ ವೀಕ್ಷಿಸುತ್ತಿರುವ ಕಲಾಸಕ್ತರು.