ಕನ್ನಡಪ್ರಭ ವಾರ್ತೆ ನಾಪೋಕ್ಲು
ನಾಪೋಕ್ಲು ಠಾಣಾ ವರಿಷ್ಠಾಧಿಕಾರಿಗಳಾದ ಮಂಜುನಾಥ್ ಅವರು ಮತ್ತು ಶಾಲೆಯ ಅಧ್ಯಕ್ಷ ರಾಜ ಚರ್ಮಣ ಧ್ವಜ ಹಾರಿಸಿ ಮ್ಯಾರಥಾನ್ ಸ್ಪರ್ಧೆ ಗೆ ಚಾಲನೆ ನೀಡಿದರು.
ನಂತರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಅವರು ಮಕ್ಕಳಿಗೆ ಸ್ವತಂತ್ರ ಪೂರ್ವ ಮತ್ತು ಸ್ವತಂತ್ರ ನಂತರದ ಭಾರತದ ಇತಿಹಾಸವನ್ನು ಅತ್ಯುತ್ತಮವಾಗಿ ವಿವರಿಸಿದ್ದರು. ಹಿಂದೆ ಬ್ರಿಟಿಷರು ನಮ್ಮನ್ನು ಹೇಗೆ ಆಳ್ವಿಕೆ ಮಾಡಿದರು. ಅದಕ್ಕಾಗಿ ಹೋರಾಡಿದವರನ್ನ ಸ್ಮರಿಸಿ ಅವರಿಗೆ ಗೌರವವನ್ನು ಸಲ್ಲಿಸಿದರು.ನಂತರ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿ ರತ್ನ ಚರ್ಮಣ, ವಿವಿಧ ಶಾಲೆಯ ಶಿಕ್ಷಕರೂ, ಸಿಬ್ಬಂದಿ ಮತ್ತು ಪೋಷಕರು, ಹಾಜರಿದ್ದರು.
ಬಾಲಕಿಯರ ವಿಭಾಗದಲ್ಲಿ ಅಂಕುರು ಪಬ್ಲಿಕ್ ಶಾಲೆಯ ಪಾತಿಮತ್ ಮುಪೀದ ಪಿ.ಎ ಪ್ರಥಮ, ರಾಮಟ್ರಸ್ಟ್‌ನ ಕೃಪ ಡಿ.ಪಿ. ದ್ವಿತೀಯ, ಹಾಗೂ ಕರ್ನಾಟಕ ಪಬ್ಲಿಕ್ ಶಾಲೆಯ ಸಫವಾನ, ತೃತೀಯ ಬಹುಮಾನ ಪಡೆದುಕೊಂಡರು. ಕೊನೆಗೆ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.