ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ನಂತರ ಮಾತನಾಡಿದ ಶಾಸಕರು, ತ್ವರಿತವಾಗಿ ಶ್ರೀರಂಗಪಟ್ಟಣದಿಂದ ಬೆಂಗಳೂರಿಗೆ ಪ್ರಯಾಣ ನಡೆಸುವರಿಗೆ ತಡೆ ರಹಿತ ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರು ಇದರ ಸೌಲಭ್ಯ ಪಡೆದುಕೊಳ್ಳಬೇಕು. ಶ್ರೀರಂಗಪಟ್ಟಣ-ಬೆಂಗಳೂರು ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಕಡಿಮೆ ಸಮಯದ ಅವಧಿಯಲ್ಲಿ ಬೆಂಗಳೂರಿಗೆ ತಲುಪಲು ಅನುಕೂಲವಾಗುವಂತೆ ತಡೆರಹಿತ ಅಶ್ವಮೇಧ ಸಾರಿಗೆ ಪ್ರಾರಂಭಿಸಲಾಗಿದೆ ಎಂದರು.
ಶ್ರೀರಂಗಪಟ್ಟಣ-ಬೆಂಗಳೂರು (ತಡೆರಹಿತ) ಶ್ರೀರಂಗಪಟ್ಟಣ-ಚನ್ನರಾಯಪಟ್ಟಣ, ಶ್ರೀರಂಗಪಟ್ಟಣ-ಪಾಂಡವಪುರ-ಕೆ.ಆರ್.ಪೇಟೆ-ಚನ್ನರಾಯಪಟ್ಟಣ ನಡುವೆ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿಯಾಗಿ ಅಶ್ವಮೇಧ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಜೊತೆಗೆ ಅರಕೆರೆ-ಮಂಡ್ಯ-ಬೆಂಗಳೂರು ನಡುವೆ ಗ್ರಾಮೀಣ ಭಾಗದಿಂದ ನೇರ ಬೆಂಗಳೂರಿಗೆ ಅಶ್ವಮೇಧ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.ಅಲ್ಲದೇ ಕೆಆರ್‌ಎಸ್-ಶ್ರೀರಂಗಪಟ್ಟಣ-ಬೆಂಗಳೂರಿಗೆ ಪ್ರಯಾಣಿಸುವ ನೇರ ಪ್ರಯಾಣಿಕರಿಗೆ ಕಡಿಮೆ ಸಮಯದ ಅವಧಿಯಲ್ಲಿ ಬೆಂಗಳೂರಿಗೆ ತಲುಪಲು ಅನುಕೂಲವಾಗುವಂತೆ ಅಶ್ವಮೇಧ ಸಾರಿಗೆ ಪ್ರಾರಂಭಿಸಲಾಗಿದೆ. ಒಟ್ಟು ನಾಲ್ಕು ಮಾರ್ಗವಾಗಿ ಶ್ರೀರಂಗಪಟ್ಟಣ ದಿಂದಲೆ ನೇರವಾಗಿ ತಡೆ ರಹಿತ ಬಸ್‌ಗಳಲ್ಲಿ ಪ್ರಯಾಣಿಸಬಹುದು ಎಂದರು.
ಈ ವೇಳೆ ಸಾರಿಗೆ ಇಲಾಖೆಯ ವಿಭಾಗೀಯ ನಿಯಂತ್ರಾಧಿಕಾರಿ ಎಸ್. ಪಿ. ನಾಗರಾಜು, ವಿಭಾಗೀಯ ಸಂಚರಣಾಧಿಕಾರಿ ಎಸ್.ಎಸ್ ಪರಮೇಶ್ವರಪ್ಪ, ಹರ್ಷಿತಾ ಸೇರಿದಂತೆ ಇತರರು ಇದ್ದರು.