ಕೆಜಿಎಫ್‌ನಲ್ಲಿ ಇಂದಿರಾ ಕ್ಯಾಂಟೀನ್‌ಗೆ ಸಾಸಕರಿಂದ ಚಾಲನೆ

KannadaprabhaNewsNetwork |  
Published : Jun 21, 2025, 12:49 AM ISTUpdated : Jun 21, 2025, 01:22 PM IST
20ಕೆಜಿಎಫ್‌6 | Kannada Prabha

ಸಾರಾಂಶ

ಜನರು ತಮಗೆ ವ್ಯಾಟ್ಸಪ್ ನಲ್ಲಿ ಕೆಜಿಎಫ್ ನಗರದಲ್ಲಿ ಯಾವಾಗ ಇಂದಿರಾ ಕ್ಯಾಂಟೀನ್ ಆರಂಭವಾಗಲಿದೆ ಎಂದು ಪ್ರಶ್ನೆ ಮಾಡುತ್ತಿದ್ದರು. ಇದೀಗ ಅಧಿಕೃತ ವಾಗಿ ಇಂದಿರಾ ಕ್ಯಾಂಟೀನ್ ಲೋಕಾರ್ಪಣೆಗೊಳಿಸಿದ್ದು ನನಗೆ ಸಂತಸ ನೀಡಿದೆ ಎಂದು ಶಾಸಕಿ ರೂಪಕಲಾಶಶಿಧರ್ ಹೇಳಿದರು.

  ಕೆಜಿಎಫ್ :  ಜನರು ತಮಗೆ ವ್ಯಾಟ್ಸಪ್ ನಲ್ಲಿ ಕೆಜಿಎಫ್ ನಗರದಲ್ಲಿ ಯಾವಾಗ ಇಂದಿರಾ ಕ್ಯಾಂಟೀನ್ ಆರಂಭವಾಗಲಿದೆ ಎಂದು ಪ್ರಶ್ನೆ ಮಾಡುತ್ತಿದ್ದರು. ಇದೀಗ ಅಧಿಕೃತ ವಾಗಿ ಇಂದಿರಾ ಕ್ಯಾಂಟೀನ್ ಲೋಕಾರ್ಪಣೆಗೊಳಿಸಿದ್ದು ನನಗೆ ಸಂತಸ ನೀಡಿದೆ ಎಂದು ಶಾಸಕಿ ರೂಪಕಲಾಶಶಿಧರ್ ಹೇಳಿದರು. ರಾಬರ್ಟ್‌ಸನ್ ಪೇಟೆ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ಪ್ರಾರಂಭಿಸಲಾಗಿರುವ ಇಂದಿರಾ ಕ್ಯಾಂಟೀನ್ ಲೋಕಾರ್ಪಣೆ ಗೊಳಿಸಿದ ಶಾಸಕಿ ರೂಪಕಲಾಶಶಿಧರ್ ಅವರು ಮಾತನಾಡಿದರು.

ಬಡವರಿಗೆ ಕ್ಯಾಂಟೀನ್‌ ಅನುಕೂಲ

ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ಇಂದಿರಾ ಕ್ಯಾಂಟೀನ್‌ ಪ್ರಾರಂಭಿಸಿರುವುದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬರುವ ರೋಗಿಗಳು ಅವರ ಸಂಬಂಧಿಕರು ಹಾಗೂ ಚಾಲಕರಿಗೆ ಬಡ ಕೂಲಿ ಕಾರ್ಮಿಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು. ಕೋಲಾರ ಜಿಲ್ಲಾಧಿಕಾರಿ ಡಾ. ರವಿ ಮಾತನಾಡಿ ಕೋಲಾರ ಜಿಲ್ಲೆಯ ಲ್ಲಿ ೪ ವಿಧಾನಸಭಾ ಕ್ಷೇತ್ರಗಳಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲಾಗಿದ್ದು ಮುಳು ಬಾಗಿಲು ವಿಧಾನಸಭಾ ಕ್ಷೇತ್ರದ ಲ್ಲಿ ಆರಂಭವಾದ ಕ್ಯಾಂಟೀನ್ ಮುಚ್ಚಿರುವುದು ಏಕೆ ಎಂದು ವಿಚಾರಿಸುತ್ತೇನೆ ಎಂದು ಹೇಳಿದರು. ಆಹಾರದ ಗುಣಮಟ್ಟ ಕಾಪಾಡಿ

ತಿಂಡಿ ೫ ರು.ಗಳು ಹಾಗೂ ಊಟ ೧೦ ರು.ಗಳಲ್ಲಿ ಆಹಾರ ಲಭ್ಯವಾಗಿದ್ದು ಆಹಾರದಲ್ಲಿ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು ಎಂದು ಟೆಂಡರ್ ದಾರರಿಗೆ ಆದೇಶ ನೀಡಲಾಗಿದೆ ಇಂದಿರಾ ಕ್ಯಾಂಟೀನ್ ನಿಂದ ಬಡ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು. ಇಂದಿರಾ ಕ್ಯಾಂಟೀನ್ ಲೋಕಾರ್ಪಣೆ ಸಂದರ್ಭದಲ್ಲಿ ಎಸ್ಪಿ ಕೆ.ಎಂ.ಶಾಂತರಾಜು, ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ, ಉಪಾಧ್ಯಕ್ಷ ಜರ್ಮನ್ ಸ್ಥಾಯಿ ಸಮಿತಿ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ, ಪೌರಾಯುಕ್ತ ಪವನ್ ಕುಮಾರ್, ತಹಶೀಲ್ದಾರ್ ನಾಗವೇಣಿ, ಎಇಇ ಮಂಜುನಾಥ್, ನಗರಸಭೆ ಸದಸ್ಯ ರಾದ ಕರುಣಾಕರನ್, ಪ್ರವೀಣ್, ವೇಣುಗೋಪಾಲ್, ಮಗು, ಸುರೇಶ್, ರಮೇಶ್,ಮಾಣಿಕ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ರೆಡ್ಡಿ, ಮುಖಂಡರಾದ ಅ.ಮು.ಲಕ್ಷ್ಮೀನಾರಾಯಣ್, ಕಾರಿ ಪ್ರಸನ್ನ, ಒಬಿಸಿ ಮುನಿಸ್ವಾಮಿ, ಮುದುಲೈಮುತ್ತು, ಮೋಹನ್ ರಾಜ್, ರಾಮ ಬಾಬು, ನಾಗರಾಜ್, ಗುತ್ತಿಗೆದಾರರಾದ ಹರಿಕೃಷ್ಣ ಹಾಗೂ ಇತರರು ಉಪಸ್ಥಿತರಿದ್ದರು.

PREV
Read more Articles on

Recommended Stories

ರಾಜ್ಯದಲ್ಲಿ ದ್ವಿಭಾಷಾ ನೀತಿಗೆ ಶಿಕ್ಷಣ ಆಯೋಗ ಶಿಫಾರಸು
ರೈತರಿಗೆ ಸರ್ಕಾರದ ಗುಡ್ ನ್ಯೂಸ್