ಕನಕಗಿರಿ:
೨೦೨೪-೨೫ನೇ ಸಾಲಿನ ೧೫ನೇ ಹಣಕಾಸು ಯೋಜನೆಯಡಿ ₹ ೮೦ ಸಾವಿರ ವೆಚ್ಚದಲ್ಲಿ ನಿರ್ಮಿಸಿರುವ ನೀರಿನ ಟ್ಯಾಂಕ್ ಹಾಗೂ ಇದರ ಸುತ್ತಲೂ ಹಾಕಿರುವ ಕಾಂಕ್ರಿಟ್ ಕಾಮಗಾರಿ ಕಳಪೆಯಾಗಿದ್ದು, ಬಳಕೆಗೂ ಮುನ್ನವೇ ಬಿರುಕು ಕಾಣಿಸಿಕೊಂಡಿರುವುದು ಕಾಲನಿ ನಿವಾಸಿಗಳ ಆಕ್ರೋಶ ಕಾರಣವಾಗಿದೆ.
ಎಸ್‌ಸಿ ಕಾಲನಿಯ ನಿವಾಸಿಗಳಿಗೆ ಹಾಗೂ ಅಂಗನವಾಡಿ ಮಕ್ಕಳಿಗೆ ಅನುಕೂಲಕ್ಕಾಗಿ ಈ ಟ್ಯಾಂಕ್ ನಿರ್ಮಿಸಲಾಗಿದೆ. ಆದರೆ, ಇದುವರೆಗೂ ಟ್ಯಾಂಕ್ ಬಳಕೆಯಾಗುತ್ತಿಲ್ಲ. ಕಾಮಗಾರಿಗೆ ಸಂಬಂಧಿಸಿದಂತೆ ಗುತ್ತಿಗೆದಾರರು ಬಿಲ್ ಪಾವತಿ ಮಾಡಿಕೊಂಡಿದ್ದಾರೆ. ಆದರೆ, ಕುಡಿಯುವ ನೀರಿನ ಟ್ಯಾಂಕ್ ಸಾರ್ವಜನಿಕ ಉಪಯೋಗಕ್ಕೆ ಗ್ರಾಪಂ ಮುಂದಾಗಿಲ್ಲ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.ಕಲಿಕೇರಿಯಲ್ಲಿ ನಿರ್ಮಾಣಗೊಂಡ ನೀರಿನ ಟ್ಯಾಂಕ್ ಕಳಪೆಯಾಗಿರುವ ಕುರಿತು ದೂರು ಬಂದಿದ್ದು, ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಟ್ಯಾಂಕರ್‌ಗೆ ನೀರು ಏರಿಸಿ ಪರೀಕ್ಷಿಸಲು ನೀರಗಂಟಿಗೆ ಸೂಚಿಸಲಾಗಿದೆ. ಕಾಮಗಾರಿ ಕಳಪೆಯಾಗಿರುವುದು ಕಂಡು ಬಂದರೆ ಮುಂದಿನ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು.ಲಕ್ಷ್ಮಣ್, ಸುಳೇಕಲ್ ಪಿಡಿಒ