ಗ್ರಾಮೀಣ ಕೃಷಿ ಸಹಕಾರ ಸಂಘ ಪ್ರಸಕ್ತ ವರ್ಷ 27 ಲಕ್ಷ ರು. ಲಾಭ: ಪ್ರಸನ್ನಕುಮಾರ್

KannadaprabhaNewsNetwork |  
Published : Aug 31, 2025, 01:08 AM IST
30ಕೆಎಂಎನ್ ಡಿ18 | Kannada Prabha

ಸಾರಾಂಶ

ಮದ್ದೂರು ತಾಲೂಕಿನ ಹೊಸಕೆರೆ ಗ್ರಾಮದ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಪ್ರಸಕ್ತ ವರ್ಷ 27 ಲಕ್ಷ ರು. ಲಾಭಗಳಿಸುವ ಮೂಲಕ ಉತ್ತಮವಾಗಿ ನಡೆಯುತ್ತಿದೆ. ಸಂಘದ ಎಲ್ಲಾ ನಿರ್ದೇಶಕರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಹಿನ್ನೆಲೆಯಲ್ಲಿ ಸಂಘವು ಲಾಭಗಳಿಸಲು ಸಾಧ್ಯವಾಯಿತು.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಹೊಸಕೆರೆ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಪ್ರಸಕ್ತ ವರ್ಷ 27 ಲಕ್ಷ ರು. ಲಾಭಗಳಿಸುವ ಮೂಲಕ ಉತ್ತಮವಾಗಿ ನಡೆಯುತ್ತಿದೆ ಎಂದು ಸಂಘದ ಅಧ್ಯಕ್ಷ ಎಚ್.ಎನ್.ಪ್ರಸನ್ನಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಘದ ಸಭಾಂಗಣದಲ್ಲಿ ನಡೆದ ಸರ್ವ ಸದಸ್ಯರ ವಾಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಎಲ್ಲಾ ನಿರ್ದೇಶಕರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಹಿನ್ನೆಲೆಯಲ್ಲಿ ಸಂಘವು ಲಾಭಗಳಿಸಲು ಸಾಧ್ಯವಾಯಿತು ಎಂದು ಹರ್ಷ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಸಂಘಕ್ಕೆ ನೂತನ ಕಟ್ಟಡ ನಿರ್ಮಾಣದ ಚಿಂತನೆ ಇದೆ. ಶೀಘ್ರ ಸುಸಜ್ಜಿತವಾಗಿ ಕಟ್ಟಡ ನಿರ್ಮಾಣವಾಗಿ ಅಧಿಕಾರಿಗಳಿಗೆ, ಆಡಳಿತ ಮಂಡಳಿ ಸದಸ್ಯರಿಗೆ ಹಾಗೂ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಘದಲ್ಲಿ ರಾಸಾಯಾನಿಕ ಗೊಬ್ಬರ ಮಾರಾಟಕ್ಕೆ ರೈತರು ಹಲವು ಬಾರಿ ಮನವಿ ನೀಡಿದ್ದಾರೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಂಘದಲ್ಲಿ 500 ರು ಕಟ್ಟಿರುವ ಷೇರುದಾರರು ಉಳಿಕೆ 500 ಸೇರಿಸಿ ಒಟ್ಟು 1 ಸಾವಿರ ಕಟ್ಟಿಕೊಂಡು ಸಂಘದ ಷೇರುರಾಗುವ ಜತೆಗೆ ನವೀಕರಣ ಮಾಡಿಕೊಳ್ಳಬೇಕು. ಜೊತೆಗೆ ಮುಂದಿನ ಚುನಾವಣೆಗೆ ಸಂಘದಲ್ಲಿ ಮತದಾನದ ಹಕ್ಕನ್ನು ಪಡೆಯಬಹುದು ಎಂದರು.

ಸಂಘದಲ್ಲಿ ಎಸ್ಬಿ ಖಾತೆ ತೆರೆದರೆ ಬ್ಯಾಂಕ್‌ನಲ್ಲಿ ವ್ಯವಹಾರವನ್ನು ಸಂಘದಲ್ಲಿ ಮಾಡಬಹುದು. 1439 ಷೇರುದಾರರು ಇದ್ದು, ಸಂಘದಿಂದ 5.22 ಕೋಟಿ ರು. ಸಾಲ ನೀಡಿದೆ. ಬಹುತೇಕ ಸಾಲ ಕಾಲ ಕಾಲಕ್ಕೆ ವಸೂಲಾತಿ ಮಾಡಲಾಗುತ್ತಿದೆ. ಸರ್ಕಾರದ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸಲಾಗುತ್ತದೆ ಎಂದರು.

ಈ ವೇಳೆ ಸಂಘದ ಉಪಾಧ್ಯಕ್ಷೆ ಎಚ್.ಎಲ್.ಪ್ರಭಾವತಿ, ನಿರ್ದೇಕರಾದ ಎಚ್.ಎಲ್.ದಯಾನಂದ, ಎಚ್.ಎಲ್.ರಾಮಕೃಷ್ಣ, ಎಚ್.ಪಿ.ವಿಜೇಂದ್ರ, ಎಚ್.ಆರ್.ಪುಟ್ಟಸ್ವಾಮಿ, ಎಚ್.ಸಿ.ಪುಟ್ಟಸ್ವಾಮಿ, ಚನ್ನಮ್ಮ, ಜಯಮ್ಮ, ವೃತ್ತ ಮೇಲ್ವಿಚಾರಕ ಎಸ್.ಬಿ.ರವೀಂದ್ರಕುಮಾರ್, ಸಿಇಒ ಸಿ.ಎಚ್.ಸುಚಿತ್ರ ಇದ್ದರು.

PREV

Recommended Stories

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ : 3 ಜಿಲ್ಲೆಗಳಿಗೆ 3 ದಿನ ಯೆಲ್ಲೋ, 2 ದಿನ ಆರೆಂಜ್‌ ಅಲರ್ಟ್‌
ಅಲೆಮಾರಿಗಳಿಗೆ 6 ನಿರ್ಣಯ ಜಾರಿ ಮಾಡಿ ವಿಶೇಷ ಪ್ಯಾಕೇಜ್‌ಗೆ ಸಮಾಜ ಆಗ್ರಹ