ಅಂಕೋಲಾ: ಗ್ರಾಮೀಣ ಭಾಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಸಿಕ್ಕರೆ ಪ್ರತಿಭೆಗಳ ಅನಾವರಣ ಸಾಧ್ಯವಿದೆ. ಹೀಗಾಗಿ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಆಗಬೇಕು ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಜಿಪಂ ಮಾಜಿ ಸದಸ್ಯೆ ಚೈತ್ರಾ ಕೊಠಾರಕರ್ ಮಾತನಾಡಿ, ಹಳ್ಳಿಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದರೆ ಹಳ್ಳಿಯ ಕಲಾವಿದರಿಗೆ ಅವಕಾಶ ಒದಗಿ ಬರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪುರಸಭೆಯ ಅಧ್ಯಕ್ಷ ಸೂರಜ ನಾಯ್ಕ ಮಾತನಾಡಿ, ಒತ್ತಡದಿಂದ ನಾವು ಹೊರ ಬರಲು ಮನರಂಜನಾ ಕಾರ್ಯಕ್ರಮಗಳು ಅಗತ್ಯ ಎಂದರು.ಸನ್ಮಾನ:
ಇದೇ ಸಂದರ್ಭದಲ್ಲಿ ಸಮಿತಿಯಿಂದ ಶ್ರೀಶಾಂತಾದುರ್ಗಾ ದೇವಸ್ಥಾನದ ಮುಖ್ಯ ಅರ್ಚಕ ವಿಠ್ಠಲ ಶಾಂತಾರಾಮ ಭಟ್ಟ, ಕಲಾವಿದ ಉಮೇಶ ನಾಯ್ಕ, ಗಾಯಕಿ ದೀಕ್ಷಾ ನಾಗರಾಜ, ಸಾಮಾಜಿಕ ಕಾರ್ಯಕರ್ತ ಸಣ್ಣಪ್ಪ ಮಾಸ್ತರ್, ನಿವೃತ್ತ ಮುಖ್ಯಾಧ್ಯಾಪಕಿ ಪಾರ್ವತಿ ಜಿ.ನಾಯಕ, ನಿವೃತ್ತ ಮುಖ್ಯಾಧ್ಯಾಪಕಿ ಸುಶೀಲಾ ಆಗೇರ್, ಮಾಜಿ ಸೈನಿಕ ಗಿರೀಶ ನಾಯಕ, ಕರಾಟೆಪಟು ಸಂಪ್ರೀತ ಪ್ರವೀಣ ನಾಯ್ಕ, ಸಾಮಾಜಿಕ ಕಾರ್ಯಕರ್ತ ಮಹೇಶ ನಾಯ್ಕ ಅವರ್ಸಾ, ಶಿಕ್ಷಕ ಜಿ.ಆರ್. ತಾಂಡೇಲ್, ಕಲಾವಿದ ಹಮೀದ್‌ರನ್ನು ಸನ್ಮಾನಿಸಲಾಯಿತು.ಮುಖ್ಯ ಅತಿಥಿಗಳಾಗಿ ವರದಿಗಾರ ಮಂಜುನಾಥ ನಾಯ್ಕ ಬೆಳಂಬಾರ, ಸಾಮಾಜಿಕ ಕಾರ್ಯಕರ್ತ ಸಣ್ಣಪ್ಪ ಮಾಸ್ತರ್, ವರದಿಗಾರ ವಿಠ್ಠಲದಾಸ ಕಾಮತ್, ಶ್ರೀ ವೆಂಕಟರಮಣ ಸೇವಾ ಸಂಸ್ಥೆಯ ಅಧ್ಯಕ್ಷ ಆನಂದು ನಾಯ್ಕ ಉಪಸ್ಥಿತರಿದ್ದರು.
ಸೌಮ್ಯ ಶ್ರೀನಿವಾಸ ನಾಯ್ಕ ಪ್ರಾರ್ಥಿಸಿದರು. ಶ್ರೀಮಹಾಗಣಪತಿ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷ ಶ್ರೀಕಾಂತ ಎನ್.ನಾಯ್ಕ ಸ್ವಾಗತಿಸಿದರು. ಪ್ರ.ಕಾರ್ಯದರ್ಶಿ ಪ್ರವೀಣ ಎನ್. ನಾಯಕ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಜಿ.ಆರ್.ತಾಂಡೇಲ್ ಕಾರ್ಯಕ್ರಮ ನಿರ್ವಹಿಸಿದರು. ಸಹ ಕಾರ್ಯದರ್ಶಿ ಮಹೇಶ ಡಿ. ನಾಯ್ಕ ವಂದಿಸಿದರು. ನಂತರ ಕಲಾವಿದ ನಾಗರಾಜ ಜಾಂಬಳೇಕರ್ ತಂಡದಿಂದ ರಸಮಂಜರಿ, ಸ್ಥಳೀಯ ಕಲಾವಿದರಿಂದ ಹಾಡು, ಹಾಸ್ಯ, ನೃತ್ಯ ನಡೆಯಿತು.