ಗ್ರಾಮೀಣ ಅಭಿವೃದ್ಧಿ ನರೇಗಾ ಸಹಕಾರಿ: ಕಂದಕೂರ

KannadaprabhaNewsNetwork |  
Published : Apr 18, 2025, 12:42 AM IST
17 ರೋಣ 1.  ಚಿಕ್ಕಮಣ್ಣೂರ ಗ್ರಾ.ಪಂ ವತಿಯಿಂದ ಪ್ರಾರಂಭಗೊಂಡ ಉದ್ಯೋಗ ಖಾತ್ರಿಯಡಿ ಕೈಗೊಳ್ಳಲಾದ ಬದು ನಿರ್ಮಿಣ ಕಾಮಗಾರಿ ಸ್ಥಳಕ್ಕೆ ತಾಪಂ ಇಒ  ತೆರಳಿ, ಕಾಮಗಾರಿ ಪರಿಶೀಲಿಸಿ ಮಾತನಾಡಿದರು. | Kannada Prabha

ಸಾರಾಂಶ

ಗ್ರಾಮೀಣ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ನರೇಗಾ ಯೋಜನೆಯು ಸಹಕಾರಿಯಾಗಿದ್ದು, ಬಡವರ ಏಳಿಗೆಗಾಗಿ, ಕೂಲಿ ಕಾರ್ಮಿಕರನ್ನು ಗುರಿಯಾಗಿ ಇಟ್ಟುಕೊಂಡು, ಈ ಯೋಜನೆ ಮಾಡಲಾಗಿದೆ. ಪ್ರಪಂಚದ ಯಾವುದೇ ದೇಶದಲ್ಲೂ ಇಂತಹ ಯೋಜನೆಯಿಲ್ಲ ಎಂದು ರೋಣ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರ ಹೇಳಿದರು.

ರೋಣ:ಗ್ರಾಮೀಣ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ನರೇಗಾ ಯೋಜನೆಯು ಸಹಕಾರಿಯಾಗಿದ್ದು, ಬಡವರ ಏಳಿಗೆಗಾಗಿ, ಕೂಲಿ ಕಾರ್ಮಿಕರನ್ನು ಗುರಿಯಾಗಿ ಇಟ್ಟುಕೊಂಡು, ಈ ಯೋಜನೆ ಮಾಡಲಾಗಿದೆ. ಪ್ರಪಂಚದ ಯಾವುದೇ ದೇಶದಲ್ಲೂ ಇಂತಹ ಯೋಜನೆಯಿಲ್ಲ ಎಂದು ರೋಣ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರ ಹೇಳಿದರು.

ಅವರು ತಾಲೂಕಿನ ಚಿಕ್ಕಮಣ್ಣೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2025-26 ನೇ ಸಾಲಿನ ಸಮುದಾಯ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು.

ಅಳತೆಗೆ ತಕ್ಕ ಕೂಲಿ, ಕೂಲಿಗೆ ತಕ್ಕ ಹಣವನ್ನು ನರೇಗಾ ಯೋಜನೆಯಡಿ ಪಾವತಿಸಲಾಗುವುದು. ಖಾತ್ರಿ ಯೋಜನೆ ಗ್ರಾಮೀಣ ಪ್ರದೇಶದ ಜನರಿಗೆ ಒಂದು ವರದಾನವಾಗಿದೆ. ಗ್ರಾಮೀಣ ಪ್ರದೇಶದ ಕೂಲಿಕಾರರು ಕೆಲಸಕ್ಕಾಗಿ ಅಲೆದಾಡದೇ ತಮ್ಮ ಸ್ವಂತ ಗ್ರಾಮದಲ್ಲಿಯೇ ಬೇಡಿಕೆಯ ಪ್ರಕಾರ 100 ದಿನಗಳ ಖಾತ್ರಿ ಕೆಲಸವನ್ನು ಪಡೆಯಲು ಸಾಧ್ಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿರಿಯ ನಾಗರಿಕರು, ವಿಧವೆಯರು, ವಿಶೇಷ ಚೇತನರಿಗೆ ನರೇಗಾದಡಿ ದುಡಿಯಲು ಹೆಚ್ಚಿನ ಆದ್ಯತೆ, ಹಿರಿಯ ನಾಗರಿಕರು, ವಿಶೇಷ ಚೇತನರಿಗೆ ಕೆಲಸದ ಪ್ರಮಾಣದಲ್ಲಿ ಶೇ. 50 ರಿಯಾಯಿತಿ ಇದೆ. ಇದನ್ನು ಐಇಸಿ ಚಟುವಟಿಕೆ ಮೂಲಕ ಪ್ರಚಾರ ಮಾಡಲಾಗಿದೆ ಎಂದರು.ಗರಿಷ್ಠ ಮಟ್ಟದ ಕೆಲಸವನ್ನು ನಿಮಗೆ ಕೊಡುತ್ತೇವೆ, ಮಳೆ ಬಿದ್ದು ಕೃಷಿ ಚಟುವಟಿಕೆ ಕೆಲಸ ಆರಂಭವಾಗುವವರೆಗೂ ನರೇಗಾ ಯೋಜನೆಯಡಿ ಕೆಲಸ ಕೊಡಲಾಗುವುದು. ಬೇರೆಡೆ ಯಾರು ದುಡಿಯಲು ಗುಳೆ ಹೋಗದೇ ಬೇಸಿಗೆ ಅವಧಿಯಲ್ಲಿ ಇದ್ದಲ್ಲಿಯೇ ಕೆಲಸ ಒದಗಿಸಲಾಗುವುದು. ನರೇಗಾ ಸಮುದಾಯ ಕಾಮಗಾರಿಯಡಿ ಕೈಗೊಳ್ಳುತ್ತಿರುವ ಬದು ನಿರ್ಮಾಣದ ಅಳತೆಗೆ ತಕ್ಕಂತೆ ಕೆಲಸ ಮಾಡಿದರೆ ದಿನಕ್ಕೆ ₹370 ರೂಪಾಯಿ ನಿನಗೆ ವೈಯಕ್ತಿಕ ಖಾತೆಗೆ ಜಮಾವಣೆಯಾಗುತ್ತದೆ. ಜೊತೆಗೆ ಹಾಜರಾತಿಗೆ ದಿನವೊಂದಕ್ಕೆ ಎರಡು ಪೋಟೋಗಳನ್ನು ತೆಗೆಯಲಾಗುವುದು. ಎರಡು ಪೋಟೋಗಳಲ್ಲಿ ಕೂಲಿ ಕಾರ್ಮಿಕರು ಇದ್ದರೆ ಮಾತ್ರ ದಿನದ ಕೂಲಿ ಮೊತ್ತ ನಿಮ್ಮ ಖಾತೆಗೆ ಜಮಾವಣೆ ಯಾಗುತ್ತದೆ ಎಂದು ಹೇಳಿದರುಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ರಶೀದ ಹುಣಸಿಮರದ ಡಿಇಒ, ಬಿ.ಎಫ್.ಟಿ , ನರೇಗಾ ಸಿಬ್ಬಂದಿಗಳು ಹಾಗೂ ತಾಲೂಕು ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ