ಮಹಿಳೆಯರ ಸ್ವಾವಲಂಬಿ ಬದುಕಿಗೆ ಗ್ರಾಮಾಭಿವೃದ್ಧಿ ಯೋಜನೆ ಸಹಕಾರಿ: ರುದ್ರಮುನಿಶ್ರೀ

KannadaprabhaNewsNetwork |  
Published : Feb 14, 2026, 01:45 AM IST
13ಬೀರೂರು 3ಬೀರೂರು ಪಟ್ಟಣದ ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶುಕ್ರವಾರಹಮ್ಮಿಕೊಳ್ಳಲಾಗಿದ್ದ ಸಾಮೂಹಿಕಸತ್ಯನಾರಾಯಣಪೂಜಾಕಾರ್ಯಕ್ರಮವನ್ನು ಬೀರೂರು ರುದ್ರಮುನಿಶ್ರೀ  ಉದ್ಟಾಟಿಸಿದರು.ಹೊಸುರು ಪುಟ್ಟರಾಜಉ,ಚಂದನ್ ಸೇರಿದಂತೆ ಮತ್ತಿತರರುಇದ್ದರು. | Kannada Prabha

ಸಾರಾಂಶ

ಬೀರೂರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರಿಗೆ ಶಕ್ತಿ ತುಂಬಿ, ಸ್ವಾವಲಂಬಿ ಬದುಕು ಸಾಗಿಸಲು ಸನ್ಮಾರ್ಗ ತೋರಿಸಿದೆ ಎಂದು ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು

ಬೀರೂರು ಪಟ್ಟಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಮೂಹಿಕ ಸತ್ಯನಾರಾಯಣ ಪೂಜೆ

ಕನ್ನಡಪ್ರಭ ವಾರ್ತೆ, ಬೀರೂರು

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರಿಗೆ ಶಕ್ತಿ ತುಂಬಿ, ಸ್ವಾವಲಂಬಿ ಬದುಕು ಸಾಗಿಸಲು ಸನ್ಮಾರ್ಗ ತೋರಿಸಿದೆ ಎಂದು ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು

ಬೀರೂರು ಪಟ್ಟಣದ ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಉದ್ಟಾಟಿಸಿ ಮಾತನಾಡಿ ಸಂಸಾರದ ಜಂಜಾಟ, ಒತ್ತಡದ ಬದುಕಿನಲ್ಲಿ ನಾವೆಲ್ಲ ಜೀವನ ಕಳೆಯುವಂತಾಗಿದೆ. ಇದರಿಂದ ಅನಾರೋಗ್ಯ, ಅಸಮಾಧಾನ, ಭಿನ್ನಾಭಿ ಪ್ರಾಯ ಹೆಚ್ಚಾಗಿ ಸಮಸ್ಯೆಗಳು ಉದ್ಭವಕ್ಕೆ ಕಾರಣವಾಗ್ತಿದೆ. ಇದೆಲ್ಲಕ್ಕೂ ತಡೆಯೊಡ್ಡಬೇಕೆಂದರೆ ನಾವೆಲ್ಲ ಪಾರಂಪರಿಕವಾಗಿ ರೂಢಿಸಿಕೊಂಡು ಬಂದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಮಾನಸಿಕ ಶಾಂತಿ ಜತೆ ಸಾತ್ವಿಕ ಶಕ್ತಿ ಪಡೆದು ಸಮಾಧಾನ ಕಂಡುಕೊಳ್ಳಬಹುದು ಎಂದರು.

ಧಾರ್ಮಿಕ, ಆಧ್ಯಾತ್ಮಿಕ, ಪೂಜೆ, ಪ್ರಾರ್ಥನೆ, ಧ್ಯಾನದಂತ ಪಾರಂಪರಿಕವಾಗಿ ಬಂದವುಗಳನ್ನು ನಾವು ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ. ಆ ನಿಟ್ಟಿನಲ್ಲಿ ನಾವೆಲ್ಲ ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿ ತಿಳಿಸಬೇಕಿದೆ. ಆ ನಿಟ್ಟಿನಲ್ಲಿ ಧರ್ಮಸ್ಥಳ ಸಂಸ್ಥೆ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕವಾಗಿ ಅಪಾರ ಕಾರ್ಯ ಮಾಡುತ್ತಿದೆ. ಸರ್ಕಾರ ಮಾಡದಂತ ಸೇವೆ ಸಂಸ್ಥೆ ಮಾಡುತ್ತಿ ರುವದು ಶ್ಲಾಘನೀಯ. ಹೀಗಾಗಿ ಈ ಸಂಸ್ಥೆ ಕೈಗೊಂಡ ಸೇವಾ ಕಾರ್ಯಗಳಿಗೆ ನಾವೆಲ್ಲ ಕೈಜೋಡಿಸಿ ಬಲ ತುಂಬಬೇಕಿದೆ ಎಂದರು.ಸಾಹಿತಿ ಹೊಸೂರು ಪುಟ್ಟರಾಜು ಮಾತನಾಡಿ, ಹೆಣ್ಣು ಮನಸು ಮಾಡಿದರೆ ಏನನ್ನಾದರೂ ಸಾಧಿಸಬಹುದಾದ ಶಕ್ತಿ ಇದೆ ನಮ್ಮ ಜೀವನದಲ್ಲಿ ಸಂಸ್ಕಾರ ರೂಢಿಸಿಕೊಂಡರೆ ಬದುಕು ಉತ್ತಮವಾಗಿಸಲು ಸಾಧ್ಯ. ನಮ್ಮ ದೇಶ ವೇದ ಉಪನಿಷತ್ತು ಕಾಲದಿಂದಲೂ ಭಾರತ ಅತಿ ಮಹತ್ವದ ಸಂಸ್ಕಾರಯುತವಾಗಿ ಬೆಳೆದು ಬಂದಿದೆ. ಭಾರತೀಯ ಸಂಸ್ಕೃತಿಗೆ ಜಗತ್ತಿನಲ್ಲಿಯೇ ಮಹತ್ವದ ಸ್ಥಾನವಿದೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವದರಿಂದ ನಮ್ಮ ಮನಸ್ಸು ಶುದ್ಧವಾಗಲಿದೆ. ಭಾವನೆಗಳು ಪರಿಶುದ್ಧವಾಗಲಿದೆ ಎಂದರು.ಇನ್ನರ್ ವೀಲ್ ಅಧ್ಯಕ್ಷೆ ಸವಿತಾ ರಮೇಶ್ ಮಾತನಾಡಿ, ಧರ್ಮಸ್ಥಳದ ಯೋಜನೆಗಳು ದೇಶಕ್ಕೆ ಮಾದರಿ ಎಂದದರು. ಯೋಜನಾಧಿಕಾರಿಗಳಾದ ಕೊರಗಪ್ಪ ಪೂಜಾರಿ ಸಮಾಜಮುಖಿ ಕಾರ್ಯಕ್ರಮಗಳನ್ನು ವೀರೇಂದ್ರ ಹೆಗ್ಗಡೆಯವರು ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನಿತಾ ಸುರೇಶ್‌, ಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ವಸಂತ್ ಕುಮಾರ್ ಹಾಗೂ ಸಮಾಜ ಸೇವಕಿ ವಸಂತಮ್ಮ , ಸೋಮಶೇಖರ್ ಹಾಗೂ ಪೂಜಾ ಸಮಿತಿಯ ಸದಸ್ಯರು ವಲಯ ಮೇಲ್ವಿಚಾರಕ ಚಂದನ್, ಸೇವಾ ಪ್ರತಿನಿಧಿಗಳು, ಒಕ್ಕೂಟ ಪದಾಧಿಕಾರಿಗಳು ಉಪಸ್ಥಿತರಿದ್ದರು.

13 ಬೀರೂರು 3ಬೀರೂರು ಪಟ್ಟಣದ ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮವನ್ನು ಬೀರೂರು ರುದ್ರಮುನಿಶ್ರೀ ಉದ್ಟಾಟಿಸಿದರು.ಹೊಸುರು ಪುಟ್ಟರಾಜಉ,ಚಂದನ್ ಸೇರಿದಂತೆ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿಲ್ಲದ ಚಿರತೆ ದಾಹ: ಎರಡು ಮೇಕೆ ಆಹುತಿ
ಹೊಸಕೋಟೆ-ದಾಬಸ್‌ಪೇಟೆ ಹೆದ್ದಾರೀಲಿ ಭೀಕರ ಅಪಘಾತ: 7 ಜನ ದುರ್ಮರಣ