ಮಂಗಳೂರು: ಕೆ.ಎಂ.ಸಿ. ಅತ್ತಾವರ ಮಂಗಳೂರು ಇವರ ಉಚಿತ ವೈದ್ಯಕೀಯ ಶಿಬಿರ ಗ್ರಾಮೀಣ ಪ್ರದೇಶಗಳಲ್ಲಿ ಅತಿ ಅಗತ್ಯ ಗ್ರಾಮೀಣ ಜನರಿಗೆ ಪ್ರಯೋಜನವಾಗಲಿದೆ. ಗ್ರಾಮೀಣ ಪ್ರದೇಶದ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಲೇಖಕರು ಹಾಗು ಪ್ರಸಿದ್ದ ವೈದ್ಯೆ, ಸ್ತ್ರೀ ರೋಗ ತಜ್ಞೆ ಡಾ.ರಾಜಲಕ್ಷ್ಮೀ ಉಡುಪಿ ಹೇಳಿದರು.ಅವರು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಶ್ರೀ ಕೇಶವಾನಂದ ಭಾರತಿ ಸ್ಮೃತಿ ಮಂದಿರದಲ್ಲಿ ಭಾನುವಾರ ಪ್ರತಿಷ್ಠಾನದ ವತಿಯಿಂದ ನಡೆದ ಉಚಿತ ವೈದ್ಯಕೀಯ ಶಿಬಿರ ಉದ್ಘಾಟಿಸಿ ಮಾತನಾಡಿದರು. ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜ್ಞಾನಿ ಶ್ಯಾನುಭೋಗ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಧೂರು ಗ್ರಾಮ ಪಂಚಾಯಿತಿನ ವ್ಯಾಪ್ತಿಯ ಸಿರಿಬಾಗಿಲಿನಲ್ಲಿ ಪ್ರತಿಷ್ಠಾನ ಮುಖಾಂತರ ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆಯ ವಿಚಾರ. ಇಂತಹ ಚಟುವಟಿಕೆಗಳಿಂದ ಪ್ರತಿಷ್ಠಾನ ಈಗ ಹೆಚ್ಚು ಜನಪ್ರಿಯತೆ ಪಡೆದಿದೆ. ಒಂದು ಸಾಂಸ್ಕೃತಿಕ ಸಂಸ್ಥೆಯ ಈ ರೀತಿಯ ಸಮಾಜಮುಖಿ ಸೇವೆ ಮೆಚ್ಚುವಂತಹದ್ದು ಎಂದರು.
ಉದಯ ಜೆ.ಭಟ್, ಲಿಂಗಮ್ಮ ಕೃಷ್ಣ ಕಳಾಯಿ, ಪುಷ್ಪಾ, ರಮ್ಯ, ವಾಸುದೇವ ಕಾರಂತ ಉಜಿರೆಕೆರೆ, ಶಿವನಾರಾಯಣ ಮತ್ತಿತರರು ನೇತೃತ್ವ ವಹಿಸಿದ್ದರು.
ಪ್ರತಿಷ್ಠಾನದ ಅದ್ಯಕ್ಷ ರಾಮಕೃಷ್ಣ ಮಯ್ಯ, ಸುಮಿತ್ರಾ ಮಯ್ಯ ಸ್ವಾಗತಿಸಿದರು. ಶ್ರೀರಾಜ್ ಎಸ್.ಆರ್ ಮಯ್ಯ ನಿರೂಪಿಸಿದರು. ಜಯಲಕ್ಷ್ಮಿ ಆರ್.ಹೊಳ್ಳ ವಂದಿಸಿದರು.