ಗ್ರಾಮೀಣ ರಸ್ತೆ, ಸೇತುವೆ ಅಭಿವೃದ್ಧಿಗೆ ಆದ್ಯತೆ

KannadaprabhaNewsNetwork |  
Published : Aug 22, 2026, 02:00 AM IST
21ಕೆಕೆಆರ್4: ಕೊಪ್ಪಳ ತಾಲೂಕಿನ ಕವಲೂರು ಗ್ರಾಮದಲ್ಲಿ ಶಾಸಕ ಕೆ ರಾಘವೇಂದ್ರ ಹಿಟ್ನಾಳ 19.60 ಕೋಟಿ ವೆಚ್ಚ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿದರು. | Kannada Prabha

ಸಾರಾಂಶ

ಕವಲೂರು ಗ್ರಾಮಕ್ಕೆ ಹೊಂದಿಕೊಂಡಿರುವ ಹಳ್ಳಕ್ಕೆ 3 ಚೆಕ್ ಡ್ಯಾಮ್ ನಿರ್ಮಾಣದ ಕಾಮಗಾರಿಗೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅಡಿಗಲ್ಲು

ಕೊಪ್ಪಳ: ಗ್ರಾಮೀಣ ರಸ್ತೆ ಸಂಪರ್ಕ ಹಾಗೂ ಸೇತುವೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.

ತಾಲೂಕಿನ ಕವಲೂರು ಗ್ರಾಮದಲ್ಲಿ ₹19.60 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಸೇತುವೆ ನಿರ್ಮಾಣದ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ರಸ್ತೆ ಸಂಪರ್ಕ ಹಾಗೂ ಸೇತುವೆ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಹಂದ್ರಾಳ- ಕವಲೂರು ರಸ್ತೆಯಲ್ಲಿ ಬರುವ 2 ಬ್ರಿಜ್ ನಿರ್ಮಾಣಕ್ಕೆ ಸುಮಾರು ₹8.60 ಕೋಟಿ ಹಾಗೂ ಕವಲೂರು-ಬನ್ನಿಕೊಪ್ಪ ರಸ್ತೆಯಲ್ಲಿನ ಬ್ರಿಜ್ ನಿರ್ಮಾಣದ ಕಾಮಗಾರಿಗೆ ₹2 ಕೋಟಿ ಅನುದಾನ ಮಂಜೂರು ಮಾಡಿಸಿ ಇಂದು ಭೂಮಿಪೂಜೆ ನೆರವೇರಿಸಿದ್ದೇವೆ. ಸೇತುವೆಗಳ ನಿರ್ಮಾಣದಿಂದ ಸಾರ್ವಜನಿಕರ ಸಂಚಾರಕ್ಕೆ ಮತ್ತಷ್ಟು ವೇಗ ಸಿಗಲಿದೆ ಎಂದರು.

1 ಕೋಟಿ ವೆಚ್ಚದಲ್ಲಿ ಕವಲೂರು ಗ್ರಾಮದ ಮುಖ್ಯರಸ್ತೆ (ರಿಂಗ್ ರೋಡ್ ) ಹಾಗೂ ಕವಲೂರು -ಬನ್ನಿಕೊಪ್ಪ ನ 1 ಕಿಮೀ ರಸ್ತೆ ನಿರ್ಮಾಣಕ್ಕೆ ₹1 ಕೋಟಿ ನೀಡಲಾಗಿದೆ.

₹7 ಕೋಟಿ ವೆಚ್ಚದ ಚೆಕ್ ನಿರ್ಮಾಣ ಕಾಮಗಾರಿ: ಕವಲೂರು ಗ್ರಾಮಕ್ಕೆ ಹೊಂದಿಕೊಂಡಿರುವ ಹಳ್ಳಕ್ಕೆ 3 ಚೆಕ್ ಡ್ಯಾಮ್ ನಿರ್ಮಾಣದ ಕಾಮಗಾರಿಗೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅಡಿಗಲ್ಲು ನೆರವೇರಿಸಿದರು. ಈ ಚೆಕ್ ಡ್ಯಾಮ್ ನಿರ್ಮಾಣದಿಂದ 500-600 ಎಕರೆ ಭೂಮಿ ನೀರಾವರಿ ಪ್ರದೇಶ ಆಗಲಿದೆ ಇದರಿಂದ ರೈತರಿಗೆ ಹೆಚ್ಚಿನ ಅನುಕೂಲ ಆಗಲಿದೆ ಎಂದರು.

ಜಿಪಂ ಮಾಜಿ ಅಧ್ಯಕ್ಷ ಎಸ್.ಬಿ.ನಾಗರಳ್ಳಿ, ಕೊಪ್ಪಳ ನಾಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ್, ಜಿಪಂ ಮಾಜಿ ಸದಸ್ಯ ಗೂಳಪ್ಪ ಹಲಿಗೇರಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಬಾಲಚಂದ್ರನ್ ಮುನಿರಬಾದ್, ಭರಮಪ್ಪ ಹಟ್ಟಿ, ಹನಮಂತ ಜಲವರ್ಧನಿ, ದೇವಪ್ಪ ಹಳ್ಳಿ, ಹೊನ್ನಕೆರಪ್ಪ ಕವಲೂರು, ಮಹಾಂತೇಶ್ ಕವಲೂರು, ನಾಗರಾಜ ಕಗ್ಗಲ್, ಅನ್ವರ್ ಗಡಾದ್, ಸುರೇಶ ದಾಸರೆಡ್ಡಿ, ತೋಟಪ್ಪ ಸಿಂಟ್ರ, ಶಾಹಿದ್ ತಹಸೀಲ್ದಾರ್, ನಿಂಗಪ್ಪ ಮೇಟಿ, ತಾಪಂ ಇಓ ದುಂದೇಶ ತುರಾದಿ, ಅಕ್ಬರ್ ಪಲ್ಟಾನ್ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುಶೀಲಾ ಹೆಗಡೆಗೆ ನಾಟಕ ಅಕಾಡೆಮಿ ಪ್ರಶಸ್ತಿ
ಬಿಜೆಪಿ ಕಾರ್ಯಕರ್ತರು-ಪೊಲೀಸರ ನಡುವೆ ಹೈಡ್ರಾಮಾ