ಗ್ರಾಮೀಣ ಪ್ರದೇಶದ ರಸ್ತೆಗಳ ಅಭಿವೃದ್ಧಿ ಒತ್ತು

KannadaprabhaNewsNetwork |  
Published : Oct 19, 2025, 01:00 AM IST
ಪೋಟೊ18.4: ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಗುಳದಲ್ಲಿ ಗ್ರಾಮದಲ್ಲಿ 2 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿದರು. | Kannada Prabha

ಸಾರಾಂಶ

ಕಲ್ಯಾಣ ಪಥದ ಯೋಜನೆ ಹಾಗೂ ಮುಖ್ಯಮಂತ್ರಿಗಳು ನೀಡಿರುವ ₹50 ಕೋಟಿಯ ವಿಶೇಷ ಅನುದಾನದಡಿಯಲ್ಲಿ ಅನುದಾನ ನೀಡುವ ಕೆಲಸ ಮಾಡಿದ್ದು ಶೀಘ್ರದಲ್ಲಿ ಕಾಮಗಾರಿ ಪ್ರಾರಂಭ ಮಾಡುತ್ತೇವೆ

ಕೊಪ್ಪಳ: ಗ್ರಾಮೀಣ ಪ್ರದೇಶದಲ್ಲಿ ಸತತ ಮಳೆಯಿಂದ ರಸ್ತೆ ಹಾಳಾಗಿದ್ದು, ಎಲ್ಲ ರಸ್ತೆಗಳಿಗೆ ಕೂಡ ಅನುದಾನ ಒದಗಿಸಿ ಅಭಿವೃದ್ಧಿ ಪಡಿಸುವ ಕೆಲಸ ಮಾಡುತ್ತೇವೆ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.

ತಾಲೂಕಿನ ಬಸಾಪುರ, ಗಿಣಗೇರಿ, ಗುಳ, ಹಾಗೂ ಶಹಾಪುರ ಗ್ರಾಮದಲ್ಲಿ ಅಂದಾಜು ₹5.48 ಕೋಟಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದರು. ಕ್ಷೇತ್ರದಲ್ಲಿ ಹದಗೆಟ್ಟಿರುವ ರಸ್ತೆಗಳಿಗೆ ಕಲ್ಯಾಣ ಕರ್ನಾಟಕದ ಯೋಜನೆ, ಕಲ್ಯಾಣ ಪಥದ ಯೋಜನೆ ಹಾಗೂ ಮುಖ್ಯಮಂತ್ರಿಗಳು ನೀಡಿರುವ ₹50 ಕೋಟಿಯ ವಿಶೇಷ ಅನುದಾನದಡಿಯಲ್ಲಿ ಅನುದಾನ ನೀಡುವ ಕೆಲಸ ಮಾಡಿದ್ದು ಶೀಘ್ರದಲ್ಲಿ ಕಾಮಗಾರಿ ಪ್ರಾರಂಭ ಮಾಡುತ್ತೇವೆ ಎಂಬ ಭರವಸೆ ಶಾಸಕರು ವ್ಯಕ್ತಪಡಿಸಿದರು.

ಈ ಸಂಧರ್ಭದಲ್ಲಿ ಮಾಜಿ ಜಿ ಪಂ ಸದಸ್ಯ ಗೂಳಪ್ಪ ಹಲಿಗೇರಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಬಾಲಚಂದ್ರನ್, ಪಂಪಣ್ಣ ಪೂಜಾರ್, ಆನಂದ ಕಿನ್ನಾಳ, ಚಾಂದಪಾಷಾ ಕಿಲ್ಲೆದರ್, ಭರಮಪ್ಪ ಹಾಲವರ್ತಿ, ಮುದಿಯಪ್ಪ ಆದೋನಿ, ಗಿರೀಶ್ ಹಿರೇಮಠ್ ನಿಂಗಜ್ಜ ಶಹಾಪುರ, ಮುದ್ದಪ್ಪ ಬೇವಿನಹಳ್ಳಿ, ಮುದಿಯಪ್ಪ ಆದೋನಿ, ಗ್ಯಾನಪ್ಪ ಬಸಾಪುರ, ಗೋವಿಂದ ಚೌಡ್ಕಿ, ಮಲ್ಲಣ್ಣ ಕುರಿ, ಲಕ್ಷ್ಮಣ್ ಗುಳದಲ್ಲಿ, ರಮೇಶ ಗುಳದಲ್ಲಿ, ರಾಘವೇಂದ್ರ ಶಹಾಪುರ, ಫಕೀರಪ್ಪ ಬಂಗ್ಲಿ, ತಹಸೀಲ್ದಾರ್ ವಿಠ್ಠಲ್ ಚೌಗಲೇ, ತಾಪಂ ಇಓ ದುಂಡೇಶ್ ತುರಾದಿ, ನಗರಸಭೆ ಸದಸ್ಯ ಅಕ್ಬರ್ ಪಲ್ಟಾನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ