ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ಅಗತ್ಯ

KannadaprabhaNewsNetwork |  
Published : Apr 20, 2025, 01:56 AM IST
ಪೋಟೊ19ಕೆಎಸಟಿ1: ಕುಷ್ಟಗಿ ತಾಲೂಕಿನ ದೋಟಿಹಾಳದಲ್ಲಿ ನಡೆದ ರಾಜ್ಯಮಟ್ಟದ ಕಬ್ಬಡ್ಡಿ ಕ್ರೀಡಾಕೂಟದಲ್ಲಿ ಸಮಾಜಸೇವಕ ರವಿಕುಮಾರ ಹಿರೇಮಠ ಮಾತನಾಡಿದರು.19ಕೆಎಸಟಿ1ಎ: ಕುಷ್ಟಗಿ ತಾಲೂಕಿನ ದೋಟಿಹಾಳದಲ್ಲಿ ಡಾ. ಬಿ ಆರ್ ಅಂಬೇಡ್ಕರ ಜಯಂತಿಯ ಅಂಗವಾಗಿ  ರಾಜ್ಯಮಟ್ಟದ ಕಬ್ಬಡ್ಡಿ ಕ್ರೀಡಾಕೂಟಗಳು ನಡೆದವು. | Kannada Prabha

ಸಾರಾಂಶ

ಆಧುನಿಕತೆಗೆ ಮಾರು ಹೋಗಿರುವ ಯುವಕರು ನಶಿಸುತ್ತಿರುವ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ. ಅವುಗಳನ್ನು ಉಳಿಸಿ ಬೆಳೆಸಬೇಕಿದೆ. ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಹೆಚ್ಚು ಕ್ರೀಡಾ ಚಟುವಟಿಕೆ ಹಮ್ಮಿಕೊಳ್ಳುವ ಮೂಲಕ ಉತ್ತೇಜನ ನೀಡಬೇಕು.

ಕುಷ್ಟಗಿ:

ಆಧುನಿಕತೆಗೆ ಮಾರು ಹೋಗಿರುವ ಯುವಕರು ನಶಿಸುತ್ತಿರುವ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ. ಅವುಗಳನ್ನು ಉಳಿಸಿ ಬೆಳೆಸಬೇಕಿದೆ ಎಂದು ಸಮಾಜ ಸೇವಕ ರವಿಕುಮಾರ ಹಿರೇಮಠ ಹೇಳಿದರು.

ಡಾ. ಬಿ.ಆರ್. ಅಂಬೇಡ್ಕರ್‌ ಜಯಂತಿ ಅಂಗವಾಗಿ ಜೈಭೀಮ ಕ್ರಾಂತಿ ಯುವಸೇನೆ ಹಾಗೂ ಸೇವೆನ್ ಸ್ಟಾರ್ ಗೆಳೆಯರ ಬಳಗ ದೋಟಿಹಾಳ ವತಿಯಿಂದ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಹೊನಲು ಬೆಳಕಿನ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಹೆಚ್ಚು ಕ್ರೀಡಾ ಚಟುವಟಿಕೆ ಹಮ್ಮಿಕೊಳ್ಳುವ ಮೂಲಕ ಉತ್ತೇಜನ ನೀಡಬೇಕು. ಇದರಿಂದ ಕ್ರೀಡಾಪಟುಗಳು ತಾಲೂಕು, ಜಿಲ್ಲೆ, ರಾಜ್ಯ, ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ವಾಲ್ಮೀಕಿ ಸಮಾಜದ ತಾಲೂಕಾಧ್ಯಕ್ಷ ಮಾನಪ್ಪ ತಳವಾರ ಮಾತನಾಡಿ, ಕಬಡ್ಡಿ ಪಂದ್ಯಾವಳಿಗಳಲ್ಲಿ ಭಾಗವಹಿಸುವ ಮೂಲಕ ರಾಜ್ಯಮಟ್ಟದಲ್ಲಿ ಹೆಸರು ಮಾಡುವಂತಾಗಬೇಕು. ಇತ್ತೀಚಿಗೆ ಕ್ರೀಡಾಪಟುಗಳು ಹೆಚ್ಚಾಗಿ ಕ್ರಿಕೆಟ್‌ಗೆ ಆದ್ಯತೆ ನೀಡುತ್ತಿದ್ದು, ಉಳಿದ ಕ್ರೀಡೆಗಳನ್ನು ನಿರ್ಲಕ್ಷಿಸುತ್ತಿರುವುದು ವಿಪರ್ಯಾಸ. ಯುವಕರು ಎಲ್ಲ ಕ್ರೀಡೆಗಳಿಗೂ ಸಮಾನ ಅವಕಾಶ ಕಲ್ಪಿಸಬೇಕು ಹಾಗೂ ಗ್ರಾಮೀಣ ಕ್ರೀಡೆ ಬೆಳೆಸುವ ಕೆಲಸ ಮಾಡಬೇಕು ಎಂದರು.

ಈ ವೇಳೆ ರಾಜೇಸಾಬ್‌ ಯಲಬುರ್ಗಿ, ರುಕುಮುದ್ದೀನ ನೀಲಗಾರ, ಹನುಮಂತರಾವ ದೇಸಾಯಿ, ನಾಗರಾಜ್ ನಂದಾಪುರ, ಹನುಮಂತಪ್ಪ ಶಿವನಗುತ್ತಿ, ರಿಯಾಜ್‌ ಲಷ್ಕರಿ, ಗಣೇಶ ಧನ್ನೂರ, ಮರಿಯಪ್ಪ ಹೆಸರೂರು, ಹನೀಫ್‌ ಬಿಳೇಕುದರಿ, ವಸಂತ ಮಾಳಗಿ, ಹಿದಾಯತ್‌ ನೀಲಗಾರ, ಸದ್ದಾಂ ಕೊಣ್ಣೂರು, ಯಮನೂರ ಶಿವನಗುತ್ತಿ, ಮಕ್ತುಂ ಕಡಿವಾಲ, ಬಂದೇನವಾಜ ಬಿಜಕತ್ತಿ, ಮಲ್ಲಿಕಾರ್ಜುನ ಕಿರಗಿ, ನಿಂಗಪ್ಪ ದನದಮನಿ, ಸೇರಿದಂತೆ ಅನೇಕರು ಇದ್ದರು. 25ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''