ಕನ್ನಡಪ್ರಭ ವಾರ್ತೆ ಪಾವಗಡ
ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಹಾಗೂ ವೀರ್ಲಗೊಂದಿಯ ದುರ್ಗಾ ಪರಮೇಶ್ವರಿ ಗ್ರಾಮೀಣ ಸಮಗ್ರ ವಿದ್ಯಾ ಕಲಾ ಯುವ ಅಭಿವೃದ್ಧಿ ಸಂಸ್ಥೆ ಇವರ ವತಿಯಿಂದ ಶುಕ್ರವಾರ ಪಟ್ಟಣದ ಸರ್ಕಾರಿ ಮಾದರಿ ಬಾಲಕಿಯರ ಹಿರಿಯ ಪ್ರಾಥಮಿಕ ಪಾಠಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಗಡಿನಾಡು ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದ ಉದ್ಘಾಟನೆ ನೆರೆವೇರಿಸಿ ಮಾತನಾಡಿರು. ನಾಡು ನುಡಿ, ಜೀವನ ಬಿಂಬಿಸುವ ಕಲೆಗಳ ಜೀವಂತಿಕೆ ಕಾಪಾಡುವ ಅನಿವಾರ್ಯತೆ ಇದ್ದು, ಕಲೆಗಳಿಂದ ಮನೋ ಉಲ್ಲಾಸ ಹಾಗೂ ಉತ್ತಮ ಆರೋಗ್ಯಕರ ಜೀವನ ಕಾಣಲು ಸಾಧ್ಯ ಎಂದರು.
ಗ್ರಾಮಾಂತರ ಪ್ರದೇಶಗಳಲ್ಲಿ ಇಂದಿಗೂ ವಿವಿಧ ರೀತಿಯ ಕಲೆಗಳು ಜನಮಾನದಲ್ಲಿ ಉಸಿರಾಗಿ ಉಳಿಸಿದ್ದು, ಅವುಗಳನ್ನು ಪೋಷಿಸಿ ಸಂರಕ್ಷಿಸುವ ಹೊಣೆ ಸರ್ಕಾರ ಹಾಗೂ ಯುವಕರ ಮೇಲೆ ಇದೆ. ಗ್ರಾಮೀಣ ಮುಗ್ದ ಪ್ರತಿಭೆಗಳು ಸಾಂಸ್ಕೃತಿಕ ರಾಯಭಾರಿಗಳಾಗಿ ಹೊರಹೊಮ್ಮುತ್ತಿರುವುದು ಶ್ಲಾಘವೀಯವಾಗಿದೆ ಎಂದು ಬಣ್ಣಿಸಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಧ್ಯಮ ಪ್ರತಿನಿಧಿ ಸತ್ಯ ಲೋಕೇಶ್ ಮಾತನಾಡಿ, ಸರ್ಕಾರ ಹಾಗೂ ಸಂಘ ಸಂಸ್ಥೆಗಳಿಂದ ಏರ್ಪಾಡಿಸುವ ಇಂತಹ ಕಾರ್ಯಕ್ರಮಗಳು ಗಡಿ ಭಾಗದಲ್ಲಿನ ಮುಗ್ಧ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಗಳಾಗಿವೆ ಎಂದು ಹರ್ಷ ವ್ಯಕ್ತಪಡಿಸಿದರು.