ಪೌತಿ ಖಾತೆ ಮಾಡಲು ಅಧಿಕಾರಿಗಳಿಂದ ಉಡಾಫೆ: ದೂರು

KannadaprabhaNewsNetwork |  
Published : May 14, 2026, 12:45 AM IST
13ಕೆಎಂಎನ್ ಡಿ17 | Kannada Prabha

ಸಾರಾಂಶ

ಪೋಷಕರನ್ನು ಕಳೆದುಕೊಂಡಿದ್ದ ಬಾಲಕಿ ಹೆಸರಿಗೆ ಪೌತಿ ಖಾತೆ ಮಾಡಲು ಕಂದಾಯ ಇಲಾಖೆ ಅಧಿಕಾರಿಗಳು ಉಡಾಫೆ ಮಾಡುತ್ತಿದ್ದಾರೆ ಎಂದು ಬಾಲಕಿ ಲೋಕಾಯಕ್ತ ಪೊಲೀಸರಿಗೆ ದೂರು ನೀಡಿದ ಪ್ರಸಂಗ ಬುಧವಾರ ನಡೆಯಿತು.

ಮದ್ದೂರು:

ಪೋಷಕರನ್ನು ಕಳೆದುಕೊಂಡಿದ್ದ ಬಾಲಕಿ ಹೆಸರಿಗೆ ಪೌತಿ ಖಾತೆ ಮಾಡಲು ಕಂದಾಯ ಇಲಾಖೆ ಅಧಿಕಾರಿಗಳು ಉಡಾಫೆ ಮಾಡುತ್ತಿದ್ದಾರೆ ಎಂದು ಬಾಲಕಿ ಲೋಕಾಯಕ್ತ ಪೊಲೀಸರಿಗೆ ದೂರು ನೀಡಿದ ಪ್ರಸಂಗ ಬುಧವಾರ ನಡೆಯಿತು.

ತಾಲೂಕಿನ ಅರೆತಿಪ್ಪೂರು ಗ್ರಾಮದ ಡಿ.ವಿ.ಅಸ್ಮಿತಾ (18)ಗೆ ಸಿ.ಎ.ಕೆರೆ ಹೋಬಳಿ ನಾಡ ಕಚೇರಿ ಶಿರಸ್ತೇದಾರ್ ಶಿವಲಿಂಗಯ್ಯ ವಿರುದ್ಧ ಸಾರ್ವಜನಿಕ ಅಹವಾಲು ಸ್ವೀಕಾರದ ವೇಳೆ ದೂರು ನೀಡಿದ್ದಾಳೆ.

ದ್ವಿತೀಯ ಬಿ.ಕಾಂ. ವ್ಯಾಸಂಗ ಮಾಡಿರುವ ಅಸ್ಮಿತಾಳ ತಾಯಿ ಒಂದು ವರ್ಷದ ಮಗುವಾಗಿದ್ದಾಗ ಮೃತಪಟ್ಟಿದ್ದರು. ನಂತರ ಈಕೆಯ ತಂದೆ ಸಹ ಆರು ತಿಂಗಳ ಹಿಂದೆ ಅಸುನೀಗಿದ್ದರು. ತಂದೆ ತಾಯಿ ಮೃತಪಟ್ಟ ನಂತರ ಅಜ್ಜಿ ಆರೈಕೆಯಲ್ಲಿ ಬೆಳೆದು, ವ್ಯಾಸಂಗ ಮಾಡಿದ್ದಾಳೆ.

ತಂದೆ ಮರಣಾನಂತರ ಬಾಲಕಿಗೆ ಕೂಳಗೆರೆ ಗ್ರಾಮದಲ್ಲಿ ಸರ್ವೇ ನಂ.194/1 ಮತ್ತು 195/1 ಹೆಸರಿನಲ್ಲಿ ಜಮೀನು ಇತ್ತು. ಈ ಜಮೀನನ್ನು ತನ್ನ ಹೆಸರಿಗೆ ವರ್ಗಾವಣೆ ಮಾಡುವಂತೆ ಅಸ್ಮಿತಾ ಆರ್‌ಐ ಮತ್ತು ವಿಎಗಳಿಗೆ ಅರ್ಜಿ ಸಲ್ಲಿಸಿದ್ದರು. ಒಂದು ವರ್ಷ ಆದರೂ ಸಹ ಆರ್‌ಐ ಮತ್ತು ವಿಎ ಸಬೂಬು ಹೇಳುತ್ತಾ ಈಕೆಯ ಹೆಸರಿಗೆ ಖಾತೆ ಮಾಡದೆ ಅಲೆದಾಡಿಸುತ್ತಿದ್ದರು.

ಕಡೆಗೆ ಈಗೆಯ ಗಾರ್ಡಿಯನ್ ಅಜ್ಜಿ ನ್ಯಾಯಾಲಯಕ್ಕೆ ಅಧಿಕಾರಿಗಳ ವಿರುದ್ಧ ಮೊಕದ್ದಮೆ ಹೂಡಿದ್ದರು. ಆದರೂ ಸಹ ಅನುಕಂಪ ಇಲ್ಲದ ಶಿರಸ್ತೇದಾರ್ ಶಿವಲಿಂಗಯ್ಯ, ಆರ್‌ಐ ಮತ್ತು ವಿಎ ಖಾತೆ ಮಾಡಿಕೊಡದೆ ಸಬೂಬು ಹೇಳುತ್ತಿದ್ದಾರೆ ಎಂದು ಅಸ್ಮಿತಾ ಲೋಕಾಯುಕ್ತ ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡರು.

ಇದರಿಂದ ಸಿಟ್ಟಿಗೆದ್ದ ಲೋಕಾಯುಕ್ತ ಡಿವೈಎಸ್ಪಿ ರವಿಕುಮಾರ್ ಸಂಬಂಧಪಟ್ಟ ಕಂದಾಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಬೆವರು ಇಳಿಸಿದರು. ಇನ್ನು ಒಂದು ತಿಂಗಳೊಳಗೆ ಈಕೆ ಹೆಸರಿಗೆ ಖಾತೆ ಮಾಡಿಕೊಡದಿದ್ದಲ್ಲಿ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡುವುದಾಗಿ ಎಚ್ಚರಿಕೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡೀಸೆಲ್‌ ಬೆಲೆ ಏರಿಕೆಯಾದ್ರೆ ಸಮಸ್ಯೆ: ಸಚಿವ ರೆಡ್ಡಿ
ಕಿರಿ ವಯಸ್ಸಲ್ಲೇ ಮರೆಯಾದ ನಟ ದಿಲೀಪ್‌ ರಾಜ್‌