ಎಸ್.ಆರ್. ಪಾಟೀಲ ಪರಿಶುದ್ಧ ಚಾರಿತ್ರ್ಯದ ರಾಜಕಾರಣಿ: ಎಚ್.ಕೆ. ಪಾಟೀಲ ಬಣ್ಣನೆ

KannadaprabhaNewsNetwork |  
Published : Jul 27, 2025, 01:59 AM IST

ಸಾರಾಂಶ

ಎಸ್.ಆರ್. ಪಾಟೀಲ ಪರಿಶುದ್ಧವಾದ ಚಾರಿತ್ರ್ಯ ಹೊಂದಿರುವ ರಾಜಕಾರಣಿಯಾಗಿದ್ದಾರೆ. ಸಂಸ್ಥೆಗಳನ್ನು ಬೆಳೆಸುವುದು ಅಷ್ಟು ಸುಲಭದ ಮಾತಲ್ಲ. ಆದರೆ ಕಠಿಣ ಪರಿಸ್ಥಿತಿ ನಿಭಾಯಿಸುವ ಚಾಕಚಕ್ಯತೆ ಹೊಂದಿರುವ ಎಸ್.ಆರ್. ಪಾಟೀಲರಿಗೆ ಅದು ಕರಗತವಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಎಸ್.ಆರ್. ಪಾಟೀಲ ಪರಿಶುದ್ಧವಾದ ಚಾರಿತ್ರ್ಯ ಹೊಂದಿರುವ ರಾಜಕಾರಣಿಯಾಗಿದ್ದಾರೆ. ಸಂಸ್ಥೆಗಳನ್ನು ಬೆಳೆಸುವುದು ಅಷ್ಟು ಸುಲಭದ ಮಾತಲ್ಲ. ಆದರೆ ಕಠಿಣ ಪರಿಸ್ಥಿತಿ ನಿಭಾಯಿಸುವ ಚಾಕಚಕ್ಯತೆ ಹೊಂದಿರುವ ಎಸ್.ಆರ್. ಪಾಟೀಲರಿಗೆ ಅದು ಕರಗತವಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ತಾಲೂಕಿನ ಬಾಡಗಂಡಿಯ ಎಸ್. ಆರ್. ಪಾಟೀಲ ಶಿಕ್ಷಣ ಪ್ರತಿಷ್ಠಾನದ ಆವೃತ್ತಿ ಆವರಣದಲ್ಲಿ ಜರುಗಿದ ಬೀಳಗಿ ಪಟ್ಟಣ ಸರ್ಕಾರಿ ಬ್ಯಾಂಕಿನ ರಜತ ಮಹೋತ್ಸವದ ನಿಮಿತ್ತ ಬ್ಯಾಂಕಿನ ನವೀಕೃತ ಕಟ್ಟಡ, ಶಾಖಾ ನೂತನ ಕಟ್ಟಡ ಮತ್ತು ಎಸ್.ಆರ್. ಪಾಟೀಲ ಶಿಕ್ಷಣ ಪ್ರತಿಷ್ಠಾನದ ವಿವಿಧ ಕಟ್ಟಡಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಸಮಾರಂಭದಲ್ಲಿ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ನವೀಕೃತ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿ, ಸಹಕಾರಿ ಸಂಸ್ಥೆಗಳಲ್ಲಿ ಒಗ್ಗಟ್ಟು ಹಾಗೂ ಒಳ್ಳೆಯ ನಾಯಕತ್ವ ಇದ್ದರೆ ಉತ್ತಮವಾಗಿ ಸಂಸ್ಥೆಯನ್ನು ಬೆಳೆಸಬಹುದು ಎನ್ನುವುದಕ್ಕೆ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ನಿದರ್ಶನ ಎಂದು ಬಣ್ಣಿಸಿದರು.

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಈ ದಿನ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಿದೆ. ಎಸ್. ಆರ್. ಪಾಟೀಲರು ಅತ್ಯುತ್ತಮವಾದ ತಂಡದಿಂದ ಸಮೂಹ ಸಂಸ್ಥೆಗಳನ್ನು ಬಲಿಷ್ಠವಾಗಿ ನಿರ್ಮಿಸಿದ್ದಾರೆ. ಅವರ ಸಾಧನೆ ನಮಗೆಲ್ಲ ಪ್ರೇರಣೆಯಾಗಿದೆ. ಬಾಡಗಂಡಿಯಂತೆ ನಮ್ಮೂರನ್ನು ಮಾಡಲು ನಮಗೆ ಪ್ರೇರಣೆ ದೊರೆತಿದೆ ಎಂದರು.

ಕೃಷಿ ಮಾರುಕಟ್ಟೆ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಅಧಿಕಾರ ಬರಬಹುದು, ಹೋಗಬಹುದು ಆದರೆ ಎಸ್. ಆರ್ ಪಾಟೀಲ ಕಟ್ಟಿದ ಸಂಸ್ಥೆಗಳು ಎಂದೆಂದಿಗೂ ಅಜರಾಮರ, ಪ್ರಾಥಮಿಕದಿಂದ ವೈದ್ಯರನ್ನು ತಯಾರು ಮಾಡುವ ಹಂತದವರೆಗೆ ಸಂಸ್ಥೆ ಬೆಳೆಸಿದ್ದು ಅವರ ಸಾಹಸಮಯ ವ್ಯಕ್ತಿತ್ವಕ್ಕೆ ನಿದರ್ಶನ ಎಂದರು.

ಅಬಕಾರಿ ಸಚಿವ ಆರ್. ಬಿ. ತಿಮ್ಮಾಪೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರ ಮಾಡದೇ ಇರುವ ಕೆಲಸವನ್ನು ಎಸ್. ಆರ್. ಪಾಟೀಲರು ಮಾಡಿದ್ದಾರೆ. ಹುಟ್ಟೂರಿನ ಋಣ ತೀರಿಸುವುದಷ್ಟೇ ಅಲ್ಲ, ದೇಶದಾದ್ಯಂತ ಆಗಮಿಸಿ ಎಂಬಿಬಿಎಸ್ ಓದುವಂತೆ ಮಾಡಿದ ಕೀರ್ತಿ ಶ್ರೀಯುತರಿಗೆ ಸಲ್ಲುತ್ತದೆ. ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಪಡೆಯುವಂತೆ ಮಾಡಿರುವರು ಎಂದು ಶ್ಲಾಘಿಸಿದರು.

ಶತಮಾನಗಳಷ್ಟು ಹಳೆಯದಾದ ಬ್ಯಾಂಕ್‌ಗಳ ಪೈಪೋಟಿ ಎದುರಿಸಿ ರಜತ ಮಹೋತ್ಸವ ಆಚರಿಸುವ ಮಟ್ಟಕ್ಕೆ ಬ್ಯಾಂಕ್ ಬೆಳೆದಿರುವುದು ಸಣ್ಣ ವಿಚಾರವಲ್ಲ, ಇದರ ಹಿಂದೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾರಣದವರ ಪರಿಶ್ರಮ ಇದೆ. ಇಂದು ಕಾರ್ಗಿಲ್ ಯುದ್ಧದಲ್ಲಿ ನಮ್ಮ ದೇಶ ವಿಜಯ ಸಾಧಿಸಿದ ದಿನವಿದು. ಇಂತಹ ಮಹತ್ವದಾಯಕವಾದ ಘಳಿಗೆಯ ಶುಭ ದಿನದಂದೇ ನಮ್ಮ ಬ್ಯಾಂಕಿನ ರಜತ ಮಹೋತ್ಸವ ಕಾರ್ಯಕ್ರಮ ಜರುಗುತ್ತಿರುವುದು ನಮ್ಮ ಪುಣ್ಯ ಇದು. ನಮ್ಮ ಸಂಸ್ಥೆಯ ಇತಿಹಾಸದಲ್ಲಿಯೇ ಚಾರಿತ್ರ್ಯಿಕ ಸಮಾರಂಭವಾಗಿದೆ.

-ಎಸ್‌.ಆರ್‌. ಪಾಟೀಲ ಮಾಜಿ ಸಚಿವರು

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್