ಖಾಶೆಂಪುರದಲ್ಲಿ ಸಚ್ಚಿದಾನಂದ ಸ್ವಾಮಿ ಜಾತ್ರಾ ಮಹೋತ್ಸವ ಸಂಪನ್ನ

KannadaprabhaNewsNetwork |  
Published : Dec 28, 2023, 01:45 AM IST
ಚಿತ್ರ 27ಬಿಡಿಆರ್51ಎ | Kannada Prabha

ಸಾರಾಂಶ

ಪಲ್ಲಕ್ಕಿ ಉತ್ಸವ, ರಥೋತ್ಸವಕ್ಕೆ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ಚಾಲನೆ, ಬೀದರ್‌ನ ವಿವಿಧ ದೇವಸ್ಥಾನಗಳಲ್ಲಿ ಕಳೆದ ಡಿ.22ರಂದು ಪೂಜೆ ಸಲ್ಲಿಸುವ ಮೂಲಕ ಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ಖಾಶೆಂಪುರ್‌ ಗ್ರಾಮಸ್ಥರು ಆರಂಭಿಸಿದ್ದರು.

ಕನ್ನಡಪ್ರಭ ವಾರ್ತೆ ಬೀದರ್

ಕಳೆದ ಡಿ.22ರಂದು ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ಆರಂಭವಾಗಿದ್ದ ಬೀದರ್ ದಕ್ಷಿಣ ಕ್ಷೇತ್ರದ ಖಾಶೆಂಪುರ್ (ಪಿ) ಗ್ರಾಮದ ದತ್ತ ಮಹಾರಾಜರ ಅವತಾರ ಪುರುಷ ಸದ್ಗುರು ಸಚ್ಚಿದಾನಂದ ಸ್ವಾಮೀಗಳ 7ನೇ ಜಾತ್ರಾ ಮಹೋತ್ಸವ ಕಾರ್ಯಕ್ರಮವು ರಥೋತ್ಸವದೊಂದಿಗೆ ಸಮಾರೋಪಗೊಂಡಿತು.

ಖಾಶೆಂಪುರ್ ಗ್ರಾಮದಲ್ಲಿರುವ ವಿವಿಧ ದೇವಸ್ಥಾನಗಳಲ್ಲಿ ಡಿ. 22ರಂದು ಪೂಜೆ ಸಲ್ಲಿಸುವ ಮೂಲಕ ಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ಗ್ರಾಮಸ್ಥರು ಆರಂಭಿಸಿದರು. ಡಿ.23 ಮತ್ತು 24ರಂದು ಎರಡು ದಿನ ಸಂಗೀತ ಹಾಗೂ ಭಜನೆ ಕಾರ್ಯಕ್ರಮಗಳು ಜರುಗಿದವು.

ಡಿ.25ರಂದು ಕಲಮೂಡದ ಸುಕ್ಷೇತ್ರ ಸೊಂತ್ ಮಠದ ಅಭಿನವ್ ಬಾಲಯೋಗಿ ಶಂಕರಲಿಂಗ ಮಹಾರಾಜರು, ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಇಟಗಾದ ಸದ್ಗುರು ಸಚ್ಚಿದಾನಂದ ಸ್ವಾಮಿ ಮಠದ ಶರಣಯ್ಯಾ ಸ್ವಾಮಿ, ಬೀದರ್ ತಾಲೂಕಿನ ಕಮಠಾಣಾದ ಗವಿಮಠದ 108 ಸದ್ಗುರು ರಾಚೋಟೇಶ್ವರ ಶಿವಚಾರ್ಯ ಮಹಾರಾಜರು, ಅರ್ಜುನಗಿರಿ ಮಹಾರಾಜರು ಸೇರಿದಂತೆ ಅನೇಕ ಶರಣರು, ಮಠಾಧೀಶರು ದರ್ಶನ ನೀಡಿ, ಆಶೀರ್ವಚನ ನೀಡಿದರು. ಇದೇ ವೇಳೆ ರಾತ್ರಿ ಪಾದಪೂಜೆ ಹಾಗೂ ಭಜನೆ ಮತ್ತು 1001 ದೀಪೋತ್ಸವ ಕಾರ್ಯಕ್ರಮಗಳು ಜರುಗಿದವು.

ಡಿ.26ರಂದು ಸದ್ಗುರು ಸಚ್ಚಿದಾನಂದ ಸ್ವಾಮಿಗಳ ಮೂರ್ತಿಗೆ ಮಹಾರುದ್ರಾಭಿಷೇಕ ಮಾಡಿ, 101 ಜನ ಆರತಿ ಹಿಡಿದ ಮುತ್ತೈದೆಯರೊಂದಿಗೆ ಮಹಾ ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ನಡೆಯಿತು. ಬಳಿಕ ಗ್ರಾಮದ ಹನುಮಾನ ಮಂದಿರ ಮತ್ತು ಸದ್ಗುರು ಸಚ್ಚಿದಾನಂದ ಸ್ವಾಮಿ ದೇವಸ್ಥಾನದ ಹತ್ತಿರ ಮೊಸರು (ಗಡಗಿ) ಒಡೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಡಿ.22ರಿಂದ ಜಾತ್ರಾ ಮಹೋತ್ಸವ, ನಿರಂತರವಾಗಿ ನಡೆದ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು. ಕ್ರಿಕೆಟ್, ರಂಗೋಲಿ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ, ಸಿಡಿಮದ್ದುಗಳು. ನಾಟಕ ಪ್ರದರ್ಶನ, ಕುಸ್ತಿ ಪಂದ್ಯಾವಳಿಗಳು ಜರುಗಿದವು.

ಕೊನೆಯ ದಿನದಂದು ನಡೆದ ಪಲ್ಲಕಿ ಉತ್ಸವದಲ್ಲಿ ಇಟಗಾದ ಸದ್ಗುರು ಸಚ್ಚಿದಾನಂದ ಸ್ವಾಮೀ ಮಠದ ಶರಣಯ್ಯಾ ಸ್ವಾಮಿ, ಕಮಠಾಣಾದ ಗವಿಮಠದ ರಾಚೋಟೇಶ್ವರ ಶಿವಚಾರ್ಯ ಮಹಾರಾಜರು, ಅರ್ಜುನಗಿರಿ ಮಹಾರಾಜರು, ಖಾಶೆಂಪುರ್‌ನ ಸದ್ಗುರು ಸಚ್ಚಿದಾನಂದ ಸ್ವಾಮಿ ದೇವಸ್ಥಾನದ ಅರ್ಚಕರಾದ ಶಿವಾನಂದ ಸ್ವಾಮಿ, ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್, ನಿವೃತ ಡಿಎಚ್ಒ ಡಾ. ಮಾರ್ಥಂಡರಾವ್ ಖಾಶೆಂಪುರ್, ಶಾಂತಲಿಂಗ ಸಾವಳಗಿ, ಬಾಬುರಾವ್ ತಮಗೊಂಡ, ರಾಜು ಖಾಶೆಂಪುರ್, ಶಿವಶಂಕರ್ ಪಾಟೀಲ್, ವಿಜಯಕುಮಾರ್ ಖಾಶೆಂಪುರ್, ದತ್ತು ಕಾಡವಾದ, ವಿಶ್ವನಾಥ ಬಾಲೇಬಾಯಿ, ನರಸಣ್ಣ ಬಂಡಿ, ಶರಣಪ್ಪ ಖಾಶೆಂಪುರ್, ಭಜರಂಗ ತಮಗೊಂಡ, ಲಕ್ಷ್ಮಣ ಹೊಸಳ್ಳಿ, ರಾಜು ಪೊಲೀಸ್ ಪಾಟೀಲ್, ಶೇಖಪ್ಪ ಪೊಲೀಸ್ ಪಾಟೀಲ್, ಮಂಜುನಾಥ ಬಾಲೇಬಾಯಿ, ಶಿವಕುಮಾರ್ ಬಾಲೇಬಾಯಿ, ಮೋಹನ್ ಸಾಗರ್, ಕೃಷ್ಣ ಖಾಶೆಂಪುರ್ ಸೇರಿದಂತೆ ಅನೇಕರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ