ಭಾಗಮಂಡಲದಿಂದ ತಲಕಾವೇರಿಗೆ ಪವಿತ್ರ ಭಂಡಾರ

KannadaprabhaNewsNetwork |  
Published : Oct 17, 2026, 02:45 AM IST
 ಸರ್ಕಾರದ ವತಿಯಿಂದ ಒದಗಿಸಲಾದರೂ. 1 ಕೋಟಿ ಅನುದಾನದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಭಂಡಾರ ಮನೆಯನ್ನು ಶಾಸಕರು ಹಾಗೂಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯವರಾದ ಎ.ಎಸ್. ಪೊನ್ನಣ್ಣ ಅವರು ಉದ್ಘಾಟಿಸಿದರು. | Kannada Prabha

ಸಾರಾಂಶ

ಕೊಡಗಿನ ಅಧಿದೇವತೆ ಕಾವೇರಿ ಮಾತೆಯ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ತುಲಾ ಸಂಕ್ರಮಣದ ಅಂಗವಾಗಿ, ಪ್ರಸಿದ್ಧ ಪುಣ್ಯಕ್ಷೇತ್ರ ಭಾಗಮಂಡಲದ ಭಗಂಡೇಶ್ವರ ದೇಗುಲದಿಂದ ತಲಕಾವೇರಿಗೆ ಪವಿತ್ರ ಭಂಡಾರ ಕೊಂಡೊಯ್ಯುವ ಧಾರ್ಮಿಕ ವಿಧಿವಿಧಾನವು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಶುಕ್ರವಾರ ನೆರವೇರಿತು.

ನಾಪೋಕ್ಲು : ಕೊಡಗಿನ ಅಧಿದೇವತೆ ಕಾವೇರಿ ಮಾತೆಯ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ತುಲಾ ಸಂಕ್ರಮಣದ ಅಂಗವಾಗಿ, ಪ್ರಸಿದ್ಧ ಪುಣ್ಯಕ್ಷೇತ್ರ ಭಾಗಮಂಡಲದ ಭಗಂಡೇಶ್ವರ ದೇಗುಲದಿಂದ ತಲಕಾವೇರಿಗೆ ಪವಿತ್ರ ಭಂಡಾರ ಕೊಂಡೊಯ್ಯುವ ಧಾರ್ಮಿಕ ವಿಧಿವಿಧಾನವು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಶುಕ್ರವಾರ ನೆರವೇರಿತು.

ತುಲಾ ಸಂಕ್ರಮಣದ ಪವಿತ್ರ ದಿನದ ಹಿನ್ನೆಲೆಯಲ್ಲಿ, ಸಾಂಪ್ರದಾಯಿಕ ಭಕ್ತಾದಿಗಳು ಸನ್ನಿಧಿಯಲ್ಲಿ ವಿಶೇಷ ಪೂಜಾ ವಿಧಿ ವಿಧಾನ ನೆರವೇರಿಸಿದ ಬಳಿಕ ಭಾಗಮಂಡಲದಿಂದ ತಲಕಾವೇರಿವರೆಗೆ ತೆರಳಿ ಭಂಡಾರ ಮನೆಯಲ್ಲಿ ಭಂಡಾರವನ್ನು ಇಡಲಾಯಿತು. ಈ ಸಂದರ್ಭ ಭಾಗಮಂಡಲ ತಕ್ಕರಾದ ಬಳ್ಳಡ್ಕ ಅಪ್ಪಾಜಿ, ತಲಕಾವೇರಿ ತಕ್ಕರಾದ ಕೋಡಿ ಮೋಟಯ್ಯ , ದೇವಾಲಯದ ವ್ಯವಸ್ಥಾಪನ ಸಮಿತಿಯ ಪದಾಧಿಕಾರಿ ಸದಸ್ಯರು, ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಸೇರಿದಂತೆ ಭಕ್ತಾದಿಗಳು ಭಾಗವಹಿಸಿದ್ದರು.

ನಿಗದಿತ ಶುಭ ಮುಹೂರ್ತದಲ್ಲಿ ದೇವರಿಗೆ ಚಿನ್ನ ಆಭರಣವನ್ನು ತೊಡಿಸಿ ಕಾವೇರಿ ತುಲಾ ಸಂಕ್ರಮಣದ ಮಹಾಪೂಜೆ ಹಾಗೂ ಧಾರ್ಮಿಕ ವಿಧಿಗಳು ವಿದ್ಯುಕ್ತವಾಗಿ ಜರುಗಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಷ್ಟ್ರ ನಿರ್ಮಾಣದಲ್ಲಿ ರೈತ-ಯೋಧರ ಕೊಡುಗೆ ಅಪಾರ
ರೈತರ ಕಷ್ಟ ನಿವಾರಣೆಗೆ ಮಾದರಿ ಪ್ರಯತ್ನವಾಗಲಿ