ಶ್ಯಾಮಸುಂದರ ಹೆಗಡೆಗೆ ಸಾಧಕಶ್ರೀ ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : Sep 29, 2026, 04:15 AM IST
ಸೆಲೆಬ್ರೇಶನ್ | Kannada Prabha

ಸಾರಾಂಶ

ಸಾಗರ ಸಂಗಮ ಇಂಜಿನಿಯರ್ಸ್ ಅಸೋಸಿಯೇಷನ್ ವತಿಯಿಂದ ಭಾನುವಾರ ಬೆಂಗಳೂರಿನ ಪಿಡಬ್ಲ್ಯುಡಿ ಭವನದಲ್ಲಿ ಇಂಜಿನಿಯರ್ಸ್ ದಿನಾಚರಣೆ ನೆರವೇರಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಸಾಗರ ಸಂಗಮ ಇಂಜಿನಿಯರ್ಸ್ ಅಸೋಸಿಯೇಷನ್ ವತಿಯಿಂದ ಭಾನುವಾರ ಬೆಂಗಳೂರಿನ ಪಿಡಬ್ಲ್ಯುಡಿ ಭವನದಲ್ಲಿ ಇಂಜಿನಿಯರ್ಸ್ ದಿನಾಚರಣೆ ನೆರವೇರಿತು.

ಬೆಂಗಳೂರು ಟೆಕ್ನಿಕಲ್ ಎಜುಕೇಶನ್‌ ರಿಟೈರ್ಡ್ ಪ್ರಿನ್ಸಿಪಾಲ ಜಯಶ್ರೀ ಟಿ.ಕೆ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶ ಕಟ್ಟಲು ಇಂಜಿನಿಯರ್ಸ್‌ ಕೊಡುಗೆ ಹಾಗೂ ಇಂಜಿನಿಯರ್ಸ್‌ ಮಹತ್ವವನ್ನು ತಿಳಿಸಿದರು.

ಕೆಎಸ್‌ಎಫ್‌ಸಿ ಡಿಜಿಎಂ ರಿಟೈರ್ಡ್ ಸೋಮಶೇಖರಪ್ಪ ಮಾತನಾಡಿ, ಸರ್‌.ಎಂ.ವಿಶ್ವೇಶ್ವರಯ್ಯ ಅವರು ದೇಶಕ್ಕೆ ನೀಡಿದ ಕೊಡುಗೆ ಬಗ್ಗೆ ಕೊಂಡಾಡಿದರು. ಸಾಗರ ಸಂಗಮ್ ಅಸೋಸಿಯೇಷನ್ ಪ್ರೆಸಿಡೆಂಟ್ ರವಿ ಕುಮಾರ್ ಸಾಗರ್ ಮಾತನಾಡಿ, ಈಗಿನ ಇಂಜಿನಿಯರ್ಸ್‌ ದೇಶಕ್ಕೆ ಏನು ಕೊಡುಗೆ ಕೊಡಬೇಕು ಎಂಬ ಕುರಿತು ಕಿವಿ ಮಾತು ಹೇಳಿದರು.

ಇಂಜಿನಿಯರಿಂಗ್ ವೃತ್ತಿಯಿಂದ ಸಮಾಜಕ್ಕೆ ಕೊಡುಗೆ ನೀಡಿದ ಶ್ಯಾಮಸುಂದರ ಹೆಗಡೆ, ಸತೀಶ್ ಕುಮಾರ್ ಶೆಟ್ಟಿ, ರವಿ ಕುಮಾರ್ ಎಸ್‌, ಹಾಗೂ ಪರಮೇಶ್ವರ ಕೆ.ಆರ್‌. ಅವರಿಗೆ ಸಾಧಕ ಶ್ರೀ ಪ್ರಶಸ್ತಿ ನೀಡಿ ಗೌರವಿಸಿದರು.

ಸುನಿಲ್ ಬಾರ್ಕುರ್ ಅವರ ಚೌಕಾಬಾರ ಪುಸ್ತಕವನ್ನು ವಿಜಯವಾಣಿ ಸಂಪಾದಕ ಕೆ.ಎನ್‌.ಚನ್ನೇಗೌಡ ಲೋಕಾರ್ಪಣೆಗೊಳಿಸಿದರು. ನಂತರ ಸಂಜಯ್ ಮೆಮೋರಿಯಲ್ ಪೋಲಿಟೆಕ್ನಿಕ್‌ನ 2025-26 ಸಾಲಿನಲ್ಲಿ ಎಲ್ಲ ಬ್ರಾಂಚ್‌ನಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ಸಾಗರ ಸಂಗಮ ಕಳೆದ 15 ವರ್ಷದಿಂದ ಈ ಕಾರ್ಯಕ್ರಮ ನಡೆಸುತ್ತಾ ಪ್ರತಿಭಾವಂತ ಇಂಜಿನಿಯರ್ಸ್‌ಗೆ ಪ್ರೋತ್ಸಾಹ ನೀಡುತ್ತಿದೆ. ಈ ವರ್ಷ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ಇಂಜಿನಿಯರ್ಸ್‌ ಮಕ್ಕಳಿಗೂ ಸನ್ಮಾನ ಮಾಡಿದ್ದು ವಿಶೇಷವಾಗಿತ್ತು. ಈ ವೇಳೆ ಉದಯ ಜಾದೂಗಾರ ಅವರ ಮ್ಯಾಜಿಕ್ ಶೋ ನೆರವೇರಿತು. ಯತೀಶ್ ಹಾಗೂ ಮಹೇಂದ್ರ ಕಾರ್ಯಕ್ರಮ ನಡೆಸಿ ಕೊಟ್ಟರು. ಮಹೇಶ್ ಮರಾಟೆ, ಪ್ರದೀಪ್ ಯಲಸಂಗಿಕರ, ಸನ್ನಿ ಸಾಮೂವಲ್, ರಾಜು, ಸುರೇಶ ಬಾಪಾಟ್, ಪ್ರಶಾಂತ್ ನಂದಿತಾಲೇ, ಎಸ್‌.ಎಂ.ಪಿ. ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೋಗ ಬಾರದಂತೆ ತಡೆಯುವುದೇ ಆಯುರ್ವೇದದ ಶಕ್ತಿ
ಮೋದಿಯವರ 25 ವರ್ಷಗಳ ಜನಸೇವಾ ಪಯಣ ಪ್ರೇರಣಾದಾಯಕ