ವ್ಯಕ್ತಿತ್ವ ಪ್ರಗತಿ ಒಳಗೊಂಡ ಹೆಣ್ಣಿನ ಸುರಕ್ಷತೆ ಮುಖ್ಯ

KannadaprabhaNewsNetwork |  
Published : Nov 11, 2025, 02:45 AM IST
ಬಳ್ಳಾರಿಯ ಶ್ರೀವಾಸವಿ ವಿದ್ಯಾಲಯದಲ್ಲಿ ಹೆಣ್ಣುಮಕ್ಕಳ ಸುರಕ್ಷತೆ ಹಾಗೂ ಭವಿಷ್ಯ ಕುರಿತು ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅಭಯಾ ಫೌಂಡೇಶನ್ ಸಂಸ್ಥಾಪಕ ಬಾಲಚಂದ್ರ ಸುಂಕು ಅವರು ವಿದ್ಯಾರ್ಥಿನಿಯರ ಜೊತೆ ಸಂವಾದ ನಡೆಸಿದರು.  | Kannada Prabha

ಸಾರಾಂಶ

ಇಡೀ ವ್ಯಕ್ತಿತ್ವದ ಪ್ರಗತಿಯನ್ನು ಒಳಗೊಂಡಿರುವ ಸುರಕ್ಷತೆ ಕುರಿತಾದ ಚಿಂತನೆ ಮುನ್ನೆಲೆಗೆ ಬರಬೇಕು.

ಬಳ್ಳಾರಿ: ಹೆಣ್ಣು ಮಕ್ಕಳ ಸುರಕ್ಷತೆ ಎಂದರೆ ಬರೀ ಅವರ ದೇಹ ಸುರಕ್ಷತೆ ಎಂದಲ್ಲ. ಅವರ ಭಾವನೆಗಳು, ಆತ್ಮಗೌರವ, ಶಿಕ್ಷಣದ ಹಕ್ಕುಗಳು ಕೂಡ ಸುರಕ್ಷತೆ ಎನಿಸಿಕೊಳ್ಳುತ್ತದೆ ಎಂದು ಅಭಯಾ ಫೌಂಡೇಶನ್ ಸಂಸ್ಥಾಪಕ ಬಾಲಚಂದ್ರ ಸುಂಕು ಹೇಳಿದರು.

ನಗರದ ಶ್ರೀವಾಸವಿ ವಿದ್ಯಾಲಯದಲ್ಲಿ ಹೆಣ್ಣುಮಕ್ಕಳ ಸುರಕ್ಷತೆ ಹಾಗೂ ಭವಿಷ್ಯ ಕುರಿತು ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳ ಸುರಕ್ಷತೆಯ ನೆಲೆಯ ವಿವಿಧ ಆಯಾಮಗಳ ಕುರಿತು ವಿವರಿಸಿದರು.

ಮಹಿಳೆಯರ ಸುರಕ್ಷತೆಯ ಬಗ್ಗೆ ಆದ್ಯತೆ ನೀಡಬೇಕು. ಆದರೆ, ಸುರಕ್ಷತೆ ಎಂದರೆ ದೈಹಿಕ ವಿಷಯಕ್ಕೆ ಸಂಬಂಧಿಸಿದ್ದಾಗಬಾರದು. ಅವರ ಇಡೀ ವ್ಯಕ್ತಿತ್ವದ ಪ್ರಗತಿಯನ್ನು ಒಳಗೊಂಡಿರುವ ಸುರಕ್ಷತೆ ಕುರಿತಾದ ಚಿಂತನೆ ಮುನ್ನೆಲೆಗೆ ಬರಬೇಕು. ಪುರುಷರಿಗಷ್ಟೇ ಸಮಾನ ಹಕ್ಕುಗಳು ಮಹಿಳೆಯರಿಗೆ ಇರುವುದು ಕಾನೂನಿನ ನಿಯಮ. ಆದರೆ, ಇದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಕೆಲಸವೂ ಆಗಬೇಕು ಎಂದು ಹೇಳಿದರು.

ಶ್ರೀವಾಸವಿ ಎಜ್ಯುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ಪಿ.ಎನ್. ಸುರೇಶ್ ಮಾತನಾಡಿ, ಹೆಣ್ಣು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವುದು ಹಾಗೂ ಅವರಿಗೆ ಬೇಕಾದ ಸುರಕ್ಷತೆ ಒದಗಿಸುವುದು ಪ್ರತಿಯೊಬ್ಬರ ಜವಾಬ್ದಾರಿಯೂ ಆಗಿದೆ ಎಂದು ಹೇಳಿದರು.

ವಿದ್ಯಾರ್ಥಿನಿಯರ ಜತೆ ಸಂವಾದ ನಡೆಸಿದ ಅಭಯಾ ಫೌಂಡೇಶನ್ ಸಂಸ್ಥಾಪಕ ಬಾಲಚಂದ್ರ ಸುಂಕು ಅವರು ಮಕ್ಕಳು ಕೇಳುವ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದರಲ್ಲದೆ, ಶಿಕ್ಷಣದಿಂದ ಮಾತ್ರ ಬದುಕು ಬದಲಾಗಲು ಸಾಧ್ಯವಿದೆ. ಶಿಕ್ಷಣಕ್ಕೆ ಆದ್ಯತೆ ನೀಡಿ. ಅಧ್ಯಯನಶೀಲರಾಗುವುದರಿಂದ ಗುರಿ ತಲುಪಲು ಸಾಧ್ಯವಿದೆ. ಸಾಧನೆ ಸುಮ್ಮನೆ ಕುಳಿತರೆ ಬರುವುದಿಲ್ಲ. ಸಾಧಿಸುವ ಛಲ ಮೈಗೂಡಿಸಿಕೊಳ್ಳಿ ಎಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.

ರೌಂಡ್ ಟೇಬಲ್ ಅಸೋಸಿಯೇಷನ್ ಸದಸ್ಯರಾದ ಪೋಲಾ ಸುಜಾತಾ, ಶ್ರೀ ವಾಸವಿ ಎಜ್ಯುಕೇಷನ್ ಟ್ರಸ್ಟ್‌ನ ಉಪಾಧ್ಯಕ್ಷ ಜಿತೇಂದ್ರ ಪ್ರಸಾದ್, ಜಂಟಿ ಕಾರ್ಯದರ್ಶಿ ವಟ್ಟಂ ಆದಿತ್ಯ, ಶಾಲೆಯ ಮುಖ್ಯಗುರು ಯು. ವೀರೇಶ್ಭಾ ಗವಹಿಸಿದ್ದರು.

ಬಳ್ಳಾರಿಯ ಶ್ರೀವಾಸವಿ ವಿದ್ಯಾಲಯದಲ್ಲಿ ಹೆಣ್ಣುಮಕ್ಕಳ ಸುರಕ್ಷತೆ ಹಾಗೂ ಭವಿಷ್ಯ ಕುರಿತು ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅಭಯಾ ಫೌಂಡೇಶನ್ ಸಂಸ್ಥಾಪಕ ಬಾಲಚಂದ್ರ ಸುಂಕು ಅವರು ವಿದ್ಯಾರ್ಥಿನಿಯರ ಜತೆ ಸಂವಾದ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ