ಕನ್ನಡಪ್ರಭ ವಾರ್ತೆ ಹೊನ್ನಾಳಿ
ಬಿಜೆಪಿ ರಾಜಾಧ್ಯಕ್ಷರ ಸೂಚನೆಯಂತೆ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ ಬಿಜೆಪಿ ಮುಖಂಡರು, ಕಾರ್ಯಕರ್ತರು ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಮಂಜುನಾಥ ಸ್ವಾಮಿಯ ಕುರಿತು ಅಪಪ್ರಚಾರ ಮಾಡುತ್ತಿರುವವರ ಮತ್ತು ಸಾಮಾಜಿಕ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಗ್ರಹಿಸಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಿರೇಕಲ್ಮಠದಿಂದ ಬೃಹತ್ ಮೆರವಣಿಗೆ ಮೂಲಕ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಸಾಗಿ ಕೆಲ ಕಾಲ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿ ಮಾತನಾಡಿದರು.
ಯಾರೋ ಅನಾಮಿಕನ ಹೇಳಿದ ಎಂದು ಸರ್ಕಾರ ಎಸ್‌ಐಟಿ ನೇಮಕ ಮಾಡಿ ಹಲವಾರು ದಿನಗಳ ಕಾಲ ಕೋಟ್ಯಂತರ ಹಣ , ಸಮಯ ಹಾಗೂ ಸಿಬ್ಬಂದಿಗಳ ಶ್ರಮ ಖರ್ಚು ಮಾಡಿ ಧರ್ಮಸ್ಥಳದಲ್ಲಿ ಗುಂಡಿ ತೆಗೆಯುವ ವ್ಯರ್ಥ ಕೆಲಸ ಮಾಡಿದ್ದು, ಪವಿತ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯತೆಗೆ ಹಾಗೂ ಕ್ಷೇತ್ರನಾಥ ಮಂಜುನಾಥ ಸ್ವಾಮಿಯ ಖ್ಯಾತಿಗೆ ಕಳಂಕ ತರುವ ನಿಟ್ಟಿನಲ್ಲಿ ಕಲಸ ಮಾಡಲಾಗಿದ್ದು, ಈ ರೀತಿ ಪವಿತ್ರ ಕ್ಷೇತ್ರಕ್ಕೆ ಕಳಂಕತರುವ ಮತ್ತು ಗೊಂದಲ ಮೂಡಿಸುವ ಕೆಲಸ ಮಾಡಿರುವ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ, ಜಯಂತ್ ಇವರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.ಡಿ.ಜೆ. ನಿಷೇಧಿಸಲು ಬಿಡುವುದಿಲ್ಲ:
ಸೆ.2 ಕ್ಕೆ ಧರ್ಮಸ್ಥಳದಲ್ಲಿ ಪ್ರತಿಭಟನೆ:
ಬಿಜೆಪಿ ತಾಲೂಕು ಮಂಡಲದ ಅಧ್ಯಕ್ಷ ಆರಕೆರೆ ನಾಗರಾಜ್, ಮಾಜಿ ಅಧ್ಯಕ್ಷ ಜೆ.ಕೆ.ಸುರೇಶ್, ಹಿಂದುಳಿದ ವರ್ಗಗಳ ಮುಖಂಡ ಕೆ.ಪಿ.ಕುಬೇರಪ್ಪ, ನ್ಯಾಮತಿ ಹವಳದ ನಿಂಗಪ್ಪ, ಹೊಸಕೇರಿ ಸುರೇಶ್, ಮಹಿಳೆಯರಾದ ಆರತಿ, ವೇದಾವತಿ, ಲಕ್ಷ್ಮಿದೇವಮ್ಮ,ಹಾಗೂ ಗೀತಮ್ಮ, ಬಿಜೆಪಿ ಮಾಜಿ ಅಧ್ಯಕ್ಷ ದೊಡ್ಡೇರಿ ರಾಜಪ್ಪ, ಶಿವುಹುಡೇದ್, ತರಗನಹಳ್ಳಿ ರಮೇಶಗೌಡ, ನೆಲಹೊನ್ನೆ ಮಂಜುನಾಥ, ಬಾಬು ಹೊಬಳದಾರ, ಕೆ.ರಂಗಪ್ಪ, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.