)
ಮಲೇಬೆನ್ನೂರು: ಸಾಧು, ಸಂತರು ಸಮಾಜದ ಒಳಿತಿಗಾಗಿ ಸೀಮಿತರಾದವರು. ಗುರು, ಹಿರಿಯರ, ಮಾರ್ಗದರ್ಶನ, ಆದರ್ಶ ಸಾರುವ ಕಾರ್ಯಕ್ರಮವೇ ಸತ್ಸಂಗವಾಗಿದೆ ಎಂದು ಶ್ರೀ ಯೋಗಾನಂದ ಸ್ವಾಮೀಜಿ ತಿಳಿಸಿದರು.
ಕಾಯಕವೇ ಬದುಕಿನ ಅಂಗವಾಗಬೇಕು. ದುಡಿದು ಗಳಿಸಿದ ಮೇಲೆ ಸ್ವಲ್ಪ ಭಾಗ ಬಡವರ ಬದುಕಿಗಾಗಿ ಮೀಸಲಿಟ್ಟರೆ ಪುಣ್ಯವೂ ಮೀಸಲಾಗುತ್ತದೆ. ದುಡಿಯದ ಬದುಕು ದುಸ್ತರವಾಗುತ್ತದೆ. ಕಾಯಕದಿಂದ ಬದುಕು ಬಂಗಾರವಾಗುತ್ತದೆ. ಪ್ರಕೃತಿ ಒಲಿದರೆ ಸಮೃದ್ಧಿ ನೆಲೆಸುತ್ತದೆ. ಮಹಾಲಯ ಅಮವಾಸ್ಯೆ ಪಿತೃತರ್ಪಣದ ಕೈಂಕರ್ಯಕ್ಕೆ ಶ್ರೇಷ್ಠ ದಿನವಾಗಿದೆ ಎಂದರು.
ನಮ್ಮ ಆಚರಣೆಗಳಲ್ಲಿ ಆದರ್ಶ ಮತ್ತು ಮಾತಾ-ಪಿತೃಗಳು, ಗುರು-ಹಿರಿಯರನ್ನು ಸ್ಮರಿಸುವ ದಿನವಾಗಿದೆ. ಶ್ರೇಷ್ಠ ಆಚರಣೆಗಳು ವೈಜ್ಞಾನಿಕ ಹಿನ್ನೆಲೆಯಲ್ಲಿ ಮಹತ್ವ ಅಡಗಿದೆ ಎಂಬುದು ಇಂತಹ ಸತ್ಸಂಗಗಳ ಸಾಂಗತ್ಯದ ಸಾರವಾಗಿದೆ ಎಂದು ಮಾತನಾಡಿದರು.ಪ್ರಗತಿಪರ ರೈತ ಕೂಲಂಬಿ ಮಹಾದೇವಪ್ಪ ಮಾತನಾಡಿ, ರೈತರು, ಯೋಧರು, ಗುರುಗಳು ನಮ್ಮ ಬದುಕಿನ ನಿರ್ಮಾತೃಗಳು. ರೈತರು ಆಹಾರ, ಯೋಧರು ರಕ್ಷಣೆ, ಗುರುಗಳು ಜ್ಞಾನ ಹೀಗೆ ಮನುಕುಲದ ಆವಿಷ್ಕಾರಕ್ಕೆ ಈ ಮೂರು ರತ್ನಗಳೂ ಪೂಜನೀಯ ಸ್ಥಾನ ಪಡೆದಿವೆ. ಗುರು- ಹಿರಿಯರಿಗೆ ಗೌರವ ನೀಡುವುದು, ಸಹಬಾಳ್ವೆ, ಸಹೋದರತ್ವ ಇಂತಹ ಸತ್ಸಂಗ ಕಾರ್ಯಕ್ರಮಗಳು ರೂಢಿಸುತ್ತವೆ ಎಂದರು.
ಕುಂಬಳೂರು ಕುಬೇರಪ್ಪ ಸಿದ್ಧಾರೂಢ ಸಾಹಿತ್ಯ ವಾಚಿಸಿದರು. ಜಿಗಳಿ ಆನಂದಪ್ಪ,ಮಹೇಶಣ್ಣ, ಹನುಮಗೌಡ, ಕುಂಬಳೂರು ವಾಸು, ನಿವೃತ್ತ ಯೋಧ ಪರುಶುರಾಮ, ಸುಬೇದಾರ್ ಶಿವಕುಮಾರ್, ಪತ್ರಕರ್ತ ಜಿಗಳಿ ಪ್ರಕಾಶ್, ಡಿ.ರಾಜಪ್ಪ, ಸುರೇಶ್ ಚೌಧರಿ , ಹರಿಹರ ತಾಲ್ಲೂಕು ಅನುದಾನಿತ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ವಿ. ನಾಗೇಂದ್ರಪ್ಪ ಮತ್ತು ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಇದ್ದರು.
(ಫೋಟೋ ಇಲ್ಲ.)