ಸಹಸ್ರಾರ್ಜುನ ಮಹಾರಾಜರ ಬೆಳ್ಳಿ ಮೂರ್ತಿ ಅದ್ಧೂರಿ ಮೆರವಣಿಗೆ

KannadaprabhaNewsNetwork |  
Published : Oct 30, 2025, 01:45 AM IST
ಸಹಸ್ರಾರ್ಜುನ ಮಹಾರಾಜರ ಬೆಳ್ಳಿ ಮೂರ್ತಿ ಮೆರವಣಿಗೆಗೆ ರಾಜ್ಯಸಭಾ ಸದಸ್ಯ ನಾರಾಯಣ ಖೋಡೆ ಹಾಗೂ ಎಸ್‌ಎಸ್‌ಕೆ ಸಮಾಜದ ರಾಜ್ಯಾಧ್ಯಕ್ಷ ಡಾ. ಶಶಿಕುಮಾರ ಮೇಹರವಾಡೆ ಚಾಲನೆ ನೀಡಿದರು. | Kannada Prabha

ಸಾರಾಂಶ

ಸಹಸ್ರಾರ್ಜುನರ ಬೆಳ್ಳಿ ಮೂರ್ತಿಯ ಬೃಹತ್ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ನಡೆಯಿತು.

ಹುಬ್ಬಳ್ಳಿ: ಎಸ್‌ಎಸ್‌ಕೆ ಸಮಾಜದ ಕುಲಪುರುಷ ಸಹಸ್ರಾರ್ಜುನ ಮಹಾರಾಜರ ಜಯಂತಿ ಅಂಗವಾಗಿ ಬುಧವಾರ ಸಹಸ್ರಾರ್ಜುನರ ಬೆಳ್ಳಿ ಮೂರ್ತಿಯ ಬೃಹತ್ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ನಡೆಯಿತು.

ದಾಜಿಬಾನಪೇಟೆಯ ತುಳಜಾಭವಾನಿ ದೇವಸ್ಥಾನದ ಎದುರು ಮೆರವಣಿಗೆಗೆ ರಾಜ್ಯಸಭಾ ಸದಸ್ಯ ನಾರಾಯಣ ಖೋಡೆ ಹಾಗೂ ಎಸ್‌ಎಸ್‌ಕೆ ಸಮಾಜದ ರಾಜ್ಯಾಧ್ಯಕ್ಷ ಡಾ. ಶಶಿಕುಮಾರ ಮೇಹರವಾಡೆ ಚಾಲನೆ ನೀಡಿದರು. ಮೆರವಣಿಗೆಯ ಪೂರ್ವದಲ್ಲಿ ಶ್ರೀ ಸಹಸ್ರಾರ್ಜುನ ಮಂಗಲಕಾರ್ಯ ಸಮಿತಿ ಸದಸ್ಯರು ಬೆಳಗ್ಗೆ ಬೆಳ್ಳಿ ಪ್ರತಿಮೆಗೆ ಅಭಿಷೇಕ ನೆರವೇರಿಸಿದರು. ಎಸ್‌ಎಸ್‌ಕೆ ಪುರೋಹಿತರು ಹೋಮ-ಹವನ ನಡಸಿಕೊಟ್ಟರು.

ಸಹಸ್ರಾರ್ಜುನ ಬೆಳ್ಳಿ ಮೂರ್ತಿಯ ಮೆರವಣಿಗೆ ದಾಜಿಬಾನಪೇಟೆಯ ತುಳಜಾಭವಾನಿ ದೇವಸ್ಥಾನದ ಮುಂಭಾಗದಿಂದ ಹೊರಟು ಸಂಗೊಳ್ಳಿ ರಾಯಣ್ಣ ವೃತ್ತ, ಮಹಾನಗರ ಪಾಲಿಕೆ ಮಾರ್ಗವಾಗಿ ಕೊಪ್ಪಿಕರ ರಸ್ತೆ, ದುರ್ಗದ ಬೈಲ್‌, ಕಾಳಮ್ಮನ ಅಗಸಿ, ಮಹಾವೀರ ಓಣಿಯಿಂದ ಶ್ರೀ ಸೀತಾಬಾಯಿ ಹಬೀಬ ಕಲ್ಯಾಣ ಮಂಡಪ ಮಾರ್ಗವಾಗಿ ಮರಳಿ ತುಳಜಾ ಭವಾನಿ ದೇವಸ್ಥಾನದ ಬಳಿ ಬಂದು ಮುಕ್ತಾಯಗೊಂಡಿತು.

ಅವಳಿ ನಗರದಲ್ಲಿ ಹೆಚ್ಚನ ಪ್ರಮಾಣದಲ್ಲಿ ಇರುವ ಎಸ್‌ಎಸ್‌ಕೆ ಸಮಾಜದ ಸದಸ್ಯರಲ್ಲಿ ಬಹುತೇಕರು ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಪುರುಷರು ಕೇಸರಿ ರುಮಾಲುಗಳಲಿ ಕಂಗೊಳಿಸಿದರೆ, ಜರಿ ಸೀರೆಯುಟ್ಟು ಮಹಿಳೆಯರು ಸಂಭ್ರಮಿಸಿದರು. ವಿವಿಧ ಪೌರಾಣಿಕ ಪಾತ್ರಗಳ ವೇಷ ಧರಿಸಿ ಮಕ್ಕಳು ಗಮನ ಸೆಳೆದರು.

ತುಳಜಾಭವಾನಿ ದೇವಸ್ಥಾನ ಕೇಂದ್ರ ಪಂಚ ಸಮಿತಿ ಮುಖ್ಯ ಟ್ರಸ್ಟಿ ಸತೀಶ ಮಹರವಾಡೆ, ಎಸ್‌ಎಸ್‌ಕೆ ಸಮಾಜದ ರಾಜ್ಯ ಘಟಕದ ಅಧ್ಯಕ್ಷ, ಮಾಜಿ ಶಾಸಕ ಅಶೋಕ ಕಾಟವೆ, ಗೌರವ ಕಾರ್ಯದರ್ಶಿ ನಾರಾಯಣ ಖೋಡೆ, ಉಪ ಮುಖ್ಯ ಧರ್ಮದರ್ಶಿಗಳಾದ ಕಿರಣ ಪೂಜಾರಿ, ರಂಗಾ ಬದ್ದಿ, ಸಂಚಾಲಕ ಸಾಯಿನಾಥ ದಲಬಂಜನ, ವಿಠ್ಠಲ ಲದ್ವಾ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು